ಬೆಂಗಳೂರು: ಮೆಟ್ರೋ ರೈಲು ಪ್ರಯಾಣ ದರವನ್ನು ಶೇ. 100ರಷ್ಟು ಹೆಚ್ಚಳ ಮಾಡಿ ರಾಜಕೀಯ ಪಕ್ಷಗಳು ಹಾಗೂ ಪ್ರಯಾಣಿಕರಿಂದ ಕೆಂಗಣ್ಣಿಗೆ ಗುರಿಯಾದ ನಂತರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗರಿಷ್ಠ ಶೇ. 71 ರಷ್ಟು ಏರಿಕೆಗೆ ನಿರ್ಧರಿಸಿದ್ದು, ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವುದಾಗಿ ಗುರುವಾರ ಘೋಷಿಸಿದೆ.
ವಿಭಿನ್ನ ಸ್ಲ್ಯಾಬ್‌ಗಳ ಅಡಿಯಲ್ಲಿ ಸ್ಟೇಜ್ ಆಧಾರದಲ್ಲಿ ಪ್ರಯಾಣ ದರವನ್ನು ಪರಿಷ್ಕರಿಸಲಾಗುವುದು, ಶುಕ್ರವಾರದಿಂದ ಒಂದು ಕಡೆಯ ದರವನ್ನು ಕನಿಷ್ಠ 9 ರೂಪಾಯಿಯಷ್ಟು ಕಡಿಮೆಗೊಳಿಸಲಾಗುವುದು ಇದರಿಂದ ಒಟ್ಟಾರೇ 2.91,418 ಪ್ರಯಾಣಿಕರಲ್ಲಿ ಶೇ. 46 ರಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.
ಕೇಂದ್ರ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯೂ ಆಗಿರುವ ಬಿಎಂಆರ್‌ಸಿಎಲ್ ಅಧ್ಯಕ್ಷ ಶ್ರೀನಿವಾಸ ಕಟಿಕಿತಾಳ ಅವರು ನಿನ್ನೆ ತಡರಾತ್ರಿ ಮತ್ತು ಗುರುವಾರ ಮುಂಜಾನೆ ಎರಡು ಸುತ್ತಿನ ಮಾತುಕತೆಯ ಚರ್ಚೆಯ ನಂತರ ಗುರುವಾರ ಮಧ್ಯಾಹ್ನ ತರಾತುರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಈ ವಿಷಯ ತಿಳಿಸಿದರು.
ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ಸಾರ್ವಜನಿಕರಿಗೆ ತಿಳಿಸಬೇಕು, ತಪ್ಪು ಕಲ್ಪನೆಗಳನ್ನು ನಿವಾರಿಸಬೇಕು ಎಂದು ಮೆಟ್ರೋ ಅಧಿಕಾರಿಗಳಿಗೆ ಶ್ರೀನಿವಾಸ ಕಟಿಕಿತಾಳ ಸೂಚಿಸಿದ್ದಾರೆ ಎನ್ನಲಾಗಿದೆ. ಪ್ರಯಾಣ ದರ ಹೆಚ್ಚಳದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರ ವಿರೋಧದ ನಡುವೆ, ಪ್ರಯಾಣ ದರ ಏರಿಕೆಯನ್ನು ತುರ್ತಾಗಿ ಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯ ಕೂಡಾ ಒತ್ತಾಯಿಸಿದ್ದರು.
ಪ್ರಸ್ತುತ ಪ್ರತಿ ನಿಲ್ದಾಣಗಳೊಂದಿಗೆ ಮೆಟ್ರೋ ಜಾಲದಲ್ಲಿರುವ 68 ನಿಲ್ದಾಣಗಳ ನಡುವೆ 4,624 ದರ ಮ್ಯಾಟ್ರಿಕ್ಸ್ ಸಾಧ್ಯವಿದೆ. ಇವುಗಳಲ್ಲಿ ಸರಿಸುಮಾರು 600 ಕೇಸ್ ಗಳಲ್ಲಿ ದರವನ್ನು ಶೇ. 70 ರಿಂದ 100 ರಷ್ಟು ಏರಿಕೆ ಮಾಡಲಾಗಿದೆ ಎನ್ನಲಾಗಿದೆ. ಈ ಪೈಕಿ 30 (ಟಿಕೆಟ್ ಕೊಂಡವರು) ಶೇ. 100 ರಷ್ಟು ಏರಿಕೆ ಮಾಡಲಾಗಿದೆ ಎಂದು ವರದಿ ಮಾಡಿದ್ದರೆ, 150 ಮಂದಿ ಶೇ. 90ರಿಂದ ಶೇ. 100 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ವರದಿಯಾಗಿದೆ ಎಂದು ವಿವರಿಸಿದರು.
ನವೆಂಬರ್ ತಿಂಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಮಾಹಿತಿ ಆಧಾರದ ಮೇಲೆ 8 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರ ಪೈಕಿ 2.9 ಲಕ್ಷ ಪ್ರಯಾಣಿಕರು ಪ್ರತಿ ಪ್ರಯಾಣದ ಸಮಯದಲ್ಲಿ ಕನಿಷ್ಠ 9 ರೂಪಾಯಿ ಕಡಿತದ ಪ್ರಯೋಜನ ಪಡೆಯುತ್ತಾರೆ ಎಂದು ಅಂದಾಜಿಸಿದ್ದೇವೆ ಎಂದರು.
ಶೇ.8 ರಿಂದ 10 ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ
BMRCL ಫೆಬ್ರುವರಿ 8 ರಂದು ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ಗರಿಷ್ಠ ದೂರಕ್ಕೆ ಶೇ. 50 ರಷ್ಟು ಗರಿಷ್ಠ ಹೆಚ್ಚಳ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ಇಂದು ಘೋಷಿಸಲಾದ ಶೇ. 71 ರಷ್ಟು ಹೆಚ್ಚಳವು ವಾಸ್ತವವಾಗಿದೆ. ಹೆಚ್ಚಳವು ಜಾರಿಗೆ ಬಂದ ನಂತರ ಭಾನುವಾರ (ಫೆ 9) ದಿಂದ ಶೇ. 8 ರಿಂದ 10 ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ಅವರು ಒಪ್ಪಿಕೊಂಡರು.
ವರ್ಷಗಳ ಹಿಂದೆ ದೆಹಲಿ ಮೆಟ್ರೋದಲ್ಲಿ ಶೇ. 106 ರಷ್ಟು ಏರಿಕೆಯನ್ನು ಘೋಷಿಸಿದಾಗ ಒಂದು ವಾರದವರೆಗೂ ಇದೇ ರೀತಿಯ ಸಮಸ್ಯೆ ಆಗಿತ್ತು. ಆದರೆ ತದನಂತರ ಅದು ಕೊನೆಯಾಗಿತ್ತು ಎಂದರು.
ಅಧಿಕೃತ ಪ್ರಕಟಣೆಯ ಪ್ರಕಾರ BMRCL 7.5 ವರ್ಷಗಳ ನಂತರ ಶೇ. 105.15 ರಷ್ಟು ಪ್ರಯಾಣ ದರ ಏರಿಕೆಯನ್ನು ಕೇಳಿತ್ತು. ಆದರೆ (ರಿಯಾಯಿತ ನಂತರ) ಅದು ಶೇ. 46 ರಷ್ಟು ಸರಾಸರಿ ಏರಿಕೆಗೆ ಅನುಮೋದನೆ ನೀಡಿದೆ.
ಪ್ರತಿದಿನ ರೂ.1 ಕೋಟಿ ಹೆಚ್ಚುವರಿ ಆದಾಯದ ಗುರಿ:
ಮತ್ತೊಬ್ಬ ಹಿರಿಯ ಅಧಿಕಾರಿ ಮಾತನಾಡಿ, ಪ್ರಸ್ತುತ ದಿನನಿತ್ಯ ಸರಾಸರಿ ರೂ. 2 ಕೋಟಿ ಆದಾಯ ಸಂಗ್ರಹಿಸುತ್ತಿದ್ದೇವೆ. ಒಂದು ವೇಳೆ ಇದೇ ರೀತಿಯಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಸಂಚರಿಸಿದರೆ ಪ್ರತಿದಿನ ಹೆಚ್ಚುವರಿಯಾಗಿ ರೂ.1 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಜನವರಿಯಲ್ಲಿ ಪ್ರತಿದಿನ ಸರಾಸರಿ 8 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ತಿಳಿಸಿದರು.