ಬಳ್ಳಾರಿ ಜೀನ್ಸ್ ಘಟಕ 
ರಾಜ್ಯ

ಬಾಂಗ್ಲಾದೇಶದ ರಾಜಕೀಯ ಬಿಕ್ಕಟ್ಟು: ಬಳ್ಳಾರಿ ಜೀನ್ಸ್ ಘಟಕಗಳಿಗೆ ವರದಾನ

ಬಳ್ಳಾರಿ ನಗರ ಹಾಗೂ ಹೊರವಲಯದಲ್ಲಿ 500ಕ್ಕೂ ಹೆಚ್ಚು ಘಟಕಗಳಿವೆ. ಇಲ್ಲಿ ತಯಾರಾದ ಉತ್ಪನ್ನಗಳನ್ನು ಸಾಮಾನ್ಯವಾಗಿ ಮುಂಬೈ ಮತ್ತು ಸೂರತ್‌ನ ವ್ಯಾಪಾರಿಗಳು ಮತ್ತು ವಿತರಕರು ಖರೀದಿಸುತ್ತಾರೆ.

ಬಳ್ಳಾರಿ: ಬಾಂಗ್ಲಾದೇಶದಲ್ಲಿನ ರಾಜಕೀಯ ಅಶಾಂತಿಯು ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ವರವಾಗಿ ಪರಿಣಮಿಸಿದೆ. ಬಾಂಗ್ಲಾದೇಶವು ಕೆಲವು ತಿಂಗಳುಗಳ ಹಿಂದೆ ಅಂದರೆ ರಾಜಕೀಯ ಬಿಕ್ಕಟ್ಟು ಆರಂಭವಾಗುವವರೆಗೂ ವಿಶ್ವದ ಅತಿದೊಡ್ಡ ಜೀನ್ಸ್ ರಫ್ತುದಾರರಲ್ಲಿ ಒಂದಾಗಿತ್ತು.

ಭಾರತದ ಟಾಪ್ ಬ್ರ್ಯಾಂಡ್‌ಗಳು ಇತ್ತೀಚಿನವರೆಗೂ ಜೀನ್ಸ್‌ಗಾಗಿ ಬಾಂಗ್ಲಾದೇಶವನ್ನು ಅವಲಂಬಿಸಿವೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ, ಆದರೆ ಅವರು ಈಗ ಭಾರತದ ಜೀನ್ಸ್ ರಾಜಧಾನಿ ಎಂದು ಕರೆಯಲ್ಪಡುವ ಬಳ್ಳಾರಿಯಲ್ಲಿರುವ ಘಟಕಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಬಳ್ಳಾರಿಯ ಪ್ರತಿ ಘಟಕದಲ್ಲಿ ಈಗ ಶೇ. 30ರಷ್ಟು ಹೆಚ್ಚು ವ್ಯಾಪಾರವಾಗುತ್ತಿದೆ.

ವ್ಯಾಪಾರದ ಅಂಕಿಅಂಶಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿಯು ಉದ್ಯಮದ ಮೇಲೆ ಪರಿಣಾಮ ಬೀರಿದ ನಂತರ ಇಲ್ಲಿನ ಪ್ರತಿ ಘಟಕವು ಪ್ರತಿ ತಿಂಗಳು 5 ರಿಂದ 10 ಲಕ್ಷ ರೂಪಾಯಿಗಳವರೆಗೆ ಲಾಭ ಗಳಿಸುತ್ತಿದೆ. ಬಳ್ಳಾರಿ ನಗರ ಹಾಗೂ ಹೊರವಲಯದಲ್ಲಿ 500ಕ್ಕೂ ಹೆಚ್ಚು ಘಟಕಗಳಿವೆ.

ಇಲ್ಲಿ ತಯಾರಾದ ಉತ್ಪನ್ನಗಳನ್ನು ಸಾಮಾನ್ಯವಾಗಿ ಮುಂಬೈ ಮತ್ತು ಸೂರತ್‌ನ ವ್ಯಾಪಾರಿಗಳು ಮತ್ತು ವಿತರಕರು ಖರೀದಿಸುತ್ತಾರೆ. ಆದರೆ ಈಗ ಕೆಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಬಳ್ಳಾರಿ ಜೀನ್ಸ್‌ಗೆ ಒಲವು ತೋರುತ್ತಿವೆ.

ಪೊಲಕ್ಸ್ ಜೀನ್ಸ್ ಮಾಲೀಕ ಹಾಗೂ ಬಳ್ಳಾರಿ ಜೀನ್ಸ್ ಇಂಡಸ್ಟ್ರಿ ವೆಲ್ಫೇರ್ ಅಸೋಸಿಯೇಶನ್ ಸದಸ್ಯ ಪೊಲಕ್ಸ್ ಮಲ್ಲಿಕಾರ್ಜುನ್ ಮಾತನಾಡಿ, ಸ್ಥಳೀಯ ಜೀನ್ಸ್ ಉದ್ಯಮ ಈಗ ಜಾಗತಿಕ ಮಟ್ಟದಲ್ಲಿದೆ. ಜಾಗತಿಕ ಜೀನ್ಸ್ ಮಾರುಕಟ್ಟೆಯಲ್ಲಿನ ಯಾವುದೇ ಬೆಳವಣಿಗೆಯು ಇಲ್ಲಿನ ಉದ್ಯಮದ ಮೇಲೆ ಅದರ ಪ್ರಭಾವವನ್ನು ಬೀರುತ್ತದೆ. ಬಾಂಗ್ಲಾದೇಶದ ಬಿಕ್ಕಟ್ಟು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಬಳ್ಳಾರಿಯಲ್ಲಿ ತಯಾರಾಗುವ ಉತ್ಪನ್ನಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ಉಲ್ಭಣವಾದ ನಂತರ ಕೆಲವು ಉನ್ನತ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಇಲ್ಲಿನ ಜೀನ್ಸ್ ಉತ್ಪಾದಕರನ್ನು ಸಂಪರ್ಕಿಸಲು ಪ್ರಾರಂಭಿಸಿದವು. ಕಳೆದ ಸೆಪ್ಟೆಂಬರ್‌ನಿಂದ ನಮಗೆ ಹೆಚ್ಚೆಚ್ಚು ಆರ್ಡರ್‌ಗಳು ಬರುತ್ತಿವೆ. ಉತ್ಪನ್ನಗಳನ್ನು ಸಮಯಕ್ಕೆ ತಲುಪಿಸಲು ನಮ್ಮ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿದ್ದೇನೆ ಎಂದು ವಿವರಿಸಿದ್ದಾರೆ, ಮೂಲಗಳ ಪ್ರಕಾರ, ಬಳ್ಳಾರಿಯ ಘಟಕವೊಂದಕ್ಕೆ ಕಳೆದ ತಿಂಗಳು 35 ಲಕ್ಷ ರೂ.ಮೌಲ್ಯದ ಆರ್ಡರ್ ಪಡೆದಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT