ಸಂಗ್ರಹ ಚಿತ್ರ 
ರಾಜ್ಯ

ಜೈಲಿನಲ್ಲಿ ಉಗ್ರ ಕೃತ್ಯಕ್ಕೆ ಸಂಚು: NIA ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ

2 ವರ್ಷಗಳ ಹಿಂದ ಬೆಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಕೆಲ ಎಲ್ಇಟಿ ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಿದ್ದರು.

ಬೆಂಗಳೂರು: ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆ ಭಾಗವಾಗಿ ಭಾರತದಲ್ಲಿ ಭಯೋತ್ಪಾದ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು 9ನೇ ಆರೋಪಿ ವಿರುದ್ಧ ಬೆಂಗಳೂರು ಎನ್ಐಎ ನ್ಯಾಯಾಲಯಕ್ಕೆ ಪೂರಕ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

ಬಿಹಾರದ ಮೂಲದ ಬೇಗುಸರಾಯ್ ಮೂಲದ ವಿಕ್ರಮ್ ಕುಮಾರ್ ಅಲಿಯಾಸ್ ಚೋಟಾ ಉಸ್ಮಾನ್ ವಿರುದ್ಧ ಎನ್ಐಎ ಅಧಿಕಾರಿಗಳು ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

2 ವರ್ಷಗಳ ಹಿಂದ ಬೆಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಕೆಲ ಎಲ್ಇಟಿ ಶಂಕಿತ ಉಗ್ರರನ್ನು ಬಂಧನಕ್ಕೊಳಪಡಿಸಿದ್ದರು. ಆರೋಪಿಗಳಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಎರಡು ವಾಕಿಟಾಕಿ ಸೇರಿ ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಿದ್ದರು. ಬಳಿಕ ಈ ಪ್ರಕರಣದ ತನಿಖೆ ಆರಂಭಿಸಿದ್ದ ಅಧಿಕಾರಿಗಳು, ಶಂಕಿತರು ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತ್ವ ತರುವ ನಿಟ್ಟಿನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂಬುದು ತಿಳಿದುಬಂದಿತ್ತು.

ಶಂಕಿತ ಉಗ್ರ ವಿಕ್ರಮ್ ಕುಮಾರ್ 2017-18ನೇ ಸಾಲಿನಲ್ಲಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಈ ವೇಳೆ ಅದೇ ಜೈಲಿನಲ್ಲಿ ಜೀವಾವಧಇ ಶಿಕ್ಷೆ ಅನುಭವಿಸುತ್ತಿರುವ ಉಗ್ರ ನಾಸೀರ್'ಗೆ ಆತ್ಮೀಯನಾಗಿದ್ದ. ಆಗ ವಿಕ್ರಮ್ ನನ್ನು ನಾಸಿರ್ ಇಸ್ಲಾಂ ಮೂಲಭೂತದೆಡೆ ಸೆಳೆದಿದ್ದ, ಕೊಲೆ ಕೇಸಲ್ಲಿ ಜಾಮೀನು ಪಡೆದಿದ್ದ ವಿಕ್ರಮ್ ನಂತರ ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ಅಹ್ಮದ್ ಜೊತೆ ಸಂಪರ್ಕದಲ್ಲಿದ್ದ ಎಂದು ಎನ್ಐಎ ತಿಳಿಸಿದೆ.

ಮೇ 2023 ರಲ್ಲಿ, ಜುನೈದ್‌ನ ಸೂಚನೆಗಳ ಮೇರೆಗೆ, ವಿಕ್ರಮ್ ಹರಿಯಾಣದ ಅಂಬಾಲದಿಂದ ಹ್ಯಾಂಡ್ ಗ್ರೆನೇಡ್‌ಗಳು ಮತ್ತು ವಾಕಿ-ಟಾಕಿಗಳನ್ನು ಹೊಂದಿರುವ ಪಾರ್ಸೆಲ್ ಅನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ಇತರ ಆರೋಪಿಗಳಿಗೆ ತಲುಪಿಸಿದ್ದ. ಇದಕ್ಕೆ ಜುನೈದ್ ಫಂಡಿಂಗ್ ಮಾಡಿದ್ದ ಎಂದು ಹೇಳಿದೆ.

ತಲೆಮರೆಸಿಕೊಂಡಿರುವ ಜುನೈದ್ ಸೇರಿ 2024ರ ಜನವರಿಯಲ್ಲಿ ಎಂಟು ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತು. ಸದ್ಯ ತನಿಖೆ ಮುಂದುವರೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?

ಬಾನು ಮುಷ್ತಾಕ್ ಕನ್ನಡದ ವಿರುದ್ಧ ಮಾತನಾಡಿದ್ದಕ್ಕೆ ಯಾವುದೇ ಸಾಕ್ಷಿಯಿಲ್ಲ, ನಿಸಾರ್ ಅಹ್ಮದ್ ಉದ್ಘಾಟಿಸಿದಾಗೇಕೆ ಮೌನವಾಗಿದ್ದಿರಿ?

ರಾಜ್ಯ ಸರ್ಕಾರ ರಾಜಕೀಯ ಪಂಚಾಯಿತಿ ಮಾಡುವ ರೀತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಿದೆ: ಸಂಸದ ಬೊಮ್ಮಾಯಿ

ಬೆಂಗಳೂರು: ಮಗುವನ್ನು ಎದೆಗೆ ಕಟ್ಟಿಕೊಂಡು ದುಡಿಯುವ ಆಟೋ ಚಾಲಕ! ಮನಕರಗುವ Video

ಚಲಿಸುತ್ತಿರುವ ರೈಲಿನಲ್ಲಿ 'ಅಪಾಯಕಾರಿ ಸ್ಟಂಟ್' ಮೂಲಕ ಯುವತಿ ಮುಟ್ಟಲು ಯತ್ನಿಸಿದ ಬಿಹಾರದ ಯುವಕ! Video

SCROLL FOR NEXT