ಸಾಂದರ್ಭಿಕ ಚಿತ್ರ  
ರಾಜ್ಯ

ಆನ್ ಲೈನ್ ಬೆಟ್ಟಿಂಗ್ ನಿಷೇಧಕ್ಕೆ ಸರ್ಕಾರ ಚಿಂತನೆ: ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ

ಮಾಹಿತಿ ತಂತ್ರಜ್ಞಾನದಲ್ಲಿ ಒಬ್ಬರು, ಹಣಕಾಸು ಕ್ಷೇತ್ರದಲ್ಲಿ ಒಬ್ಬರು ಮತ್ತು ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಒಬ್ಬರು ಸೇರಿದಂತೆ ಮೂವರು ಸದಸ್ಯರನ್ನು ನೇಮಿಸಲಾಗುತ್ತದೆ.

ಬೆಂಗಳೂರು: ರಾಜ್ಯ ಸರ್ಕಾರವು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟವನ್ನು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆ, 1963 ಗೆ ತಿದ್ದುಪಡಿ ತರಲು ಮುಂದಾಗಿದೆ.

ಮಸೂದೆಯು ಕಾಯ್ದೆಯಾಗಿ ಮಾರ್ಪಟ್ಟರೆ, ಅದೃಷ್ಟ, ರ್ಯಾಂಡಮ್ ಅಥವಾ ಅನಿಶ್ಚಿತತೆ ಫಲಿತಾಂಶವನ್ನು ನಿರ್ಧರಿಸುವ ಯಾವುದೇ ಗೇಮ್, ಸ್ಪರ್ಧೆ ಅಥವಾ ಚಟುವಟಿಕೆಗಳು ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಮತ್ತು ಪಂಥದಂತಹ ಆಟಗಳಿಗೆ ಕಡಿವಾಣ ಹಾಕುತ್ತದೆ.

ಕರಡು ಮಸೂದೆಯ ಪ್ರಕಾರ, ಇಂಟರ್ನೆಟ್, ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಸಲಾಗುವ ಪಂದ್ಯ ಅಥವಾ ಚಟುವಟಿಕೆಯ ಫಲಿತಾಂಶದ ಮೇಲೆ ಹಣ, ಟೋಕನ್‌ಗಳು, ವರ್ಚುವಲ್ ಕರೆನ್ಸಿ ಅಥವಾ ಎಲೆಕ್ಟ್ರಾನಿಕ್ ನಿಧಿಗಳ ಪಣತೊಡುವುದು ಅಥವಾ ಪಣಕ್ಕಿಡುವ ಯಾವುದೇ ರೂಪದಲ್ಲಿ ಆನ್‌ಲೈನ್ ಬೆಟ್ಟಿಂಗ್ ನ್ನು ಇದು ನಿಷೇಧಿಸುತ್ತದೆ.

ಕೌಶಲ್ಯದ ಆಟಕ್ಕೆ ಈ ಮಸೂದೆಯಡಿ ವಿನಾಯ್ತಿ ನೀಡಲಾಗುತ್ತದೆ. ಯಾವುದೇ ಆಟ, ಸ್ಪರ್ಧೆ ಅಥವಾ ಚಟುವಟಿಕೆಯಲ್ಲಿ ಫಲಿತಾಂಶವು ಭಾಗವಹಿಸುವವರ ಕೌಶಲ್ಯ, ಜ್ಞಾನ, ತರಬೇತಿ ಅಥವಾ ಪರಿಣತಿಯಿಂದ ನಿರ್ಧರಿಸಲ್ಪಡುವುದಿದ್ದರೆ ಅದಕ್ಕೆ ಅವಕಾಶವಿದೆ.

ರಾಜ್ಯ ಸರ್ಕಾರ ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ನಿರ್ಧರಿಸಿದಂತೆ ಕೌಶಲ್ಯದ ಆಟಗಳು, ನಿಯಂತ್ರಣ ಮತ್ತು ಪರವಾನಗಿಗೆ ಒಳಪಟ್ಟು ನಿಷೇಧದಿಂದ ವಿನಾಯಿತಿ ಪಡೆಯುತ್ತವೆ ಎಂದು ಮಸೂದೆ ಸ್ಪಷ್ಟಪಡಿಸಿದೆ.

ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ

ನೋಂದಣಿಯಾಗದ ಪ್ಲಾಟ್ ಫಾರ್ಮ್ ಗಳನ್ನು ನಿರ್ವಹಿಸುವ ಅಥವಾ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಜಾಹೀರಾತುಗಳು ಅಥವಾ ಅನುಮೋದನೆಗಳ ಮೂಲಕ ಸೇರಿದಂತೆ ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ಗೆ ಸಹಾಯ ಮಾಡುವ, ಪ್ರೋತ್ಸಾಹಿಸುವ ಅಥವಾ ಪ್ರಚಾರ ಮಾಡುವ ಯಾವುದೇ ವ್ಯಕ್ತಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.

ಕಾಯ್ದೆಯನ್ನು ಮೇಲ್ವಿಚಾರಣೆ ಮಾಡಲು, ನಿಯಂತ್ರಿಸಲು ಮತ್ತು ಜಾರಿಗೊಳಿಸಲು ಸರ್ಕಾರವು ಕರ್ನಾಟಕ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರವನ್ನು ರಚಿಸುತ್ತದೆ. ಇದು ಕಾನೂನು, ಸಾರ್ವಜನಿಕ ಆಡಳಿತ ಅಥವಾ ತಂತ್ರಜ್ಞಾನದಲ್ಲಿ ಅನುಭವ ಹೊಂದಿರುವ ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಅಧ್ಯಕ್ಷರನ್ನು ಒಳಗೊಂಡಿರುತ್ತದೆ.

ಮಾಹಿತಿ ತಂತ್ರಜ್ಞಾನದಲ್ಲಿ ಒಬ್ಬರು, ಹಣಕಾಸು ಕ್ಷೇತ್ರದಲ್ಲಿ ಒಬ್ಬರು ಮತ್ತು ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಒಬ್ಬರು ಸೇರಿದಂತೆ ಮೂವರು ಸದಸ್ಯರನ್ನು ನೇಮಿಸಲಾಗುತ್ತದೆ.

ನ್ಯಾಯಾಂಗ ಪೂರ್ವನಿದರ್ಶನಗಳು ಮತ್ತು ಉದ್ಯಮ ಮಾನದಂಡಗಳ ಆಧಾರದ ಮೇಲೆ ಪ್ರಾಧಿಕಾರವು ಕೌಶಲ್ಯ ಮತ್ತು ಅವಕಾಶದ ಆಟಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ. ಇದು ಕೌಶಲ್ಯ ಆಧಾರಿತ ಗೇಮಿಂಗ್ ಪ್ಲಾಟ್ ಫಾರ್ಮ್ ಗಳ ನಿರ್ವಾಹಕರಿಗೆ ಪರವಾನಗಿಗಳನ್ನು ನೀಡುತ್ತದೆ, ನೋಂದಾಯಿಸದ ಪ್ಲಾಟ್ ಫಾರ್ಮ್ ಗಳು ಮತ್ತು ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿ ತನಿಖೆ ಮಾಡುತ್ತದೆ ಮತ್ತು ಆನ್‌ಲೈನ್ ಬೆಟ್ಟಿಂಗ್‌ನ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ.

ಕರ್ನಾಟಕದಲ್ಲಿ ಕೌಶಲ್ಯ ಆಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್ ನ್ನು ನಿರ್ವಹಿಸಲು ಬಯಸುವ ವ್ಯಕ್ತಿ ಅಥವಾ ಸಂಸ್ಥೆಯು ಪ್ರಾಧಿಕಾರದಿಂದ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಸರ್ಕಾರವು ಸೈಬರ್ ಅಪರಾಧ ಶಾಖೆ ಸೇರಿದಂತೆ ಪೊಲೀಸರಿಗೆ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್ ಫಾರ್ಮ್ ಗಳು ಮತ್ತು ನಿರ್ವಾಹಕರ ವಿರುದ್ಧ ತನಿಖೆ ನಡೆಸಲು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರ ನೀಡುತ್ತದೆ.

ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಸಂಬಂಧಿತ ಡಿಜಿಟಲ್ ಸೇವೆಗಳು ಸೇರಿದಂತೆ ನೋಂದಾಯಿಸದ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳನ್ನು ನಿರ್ಬಂಧಿಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ನಿಯೋಜಿಸಲು ಪ್ರಾಧಿಕಾರವು ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಸೈಬರ್ ಅಪರಾಧ ಶಾಖೆಯೊಂದಿಗೆ ಸಹಕರಿಸುತ್ತದೆ.

ಆನ್‌ಲೈನ್ ಬೆಟ್ಟಿಂಗ್ ಅನ್ನು 48 ಗಂಟೆಗಳ ಒಳಗೆ ಪ್ರಾಧಿಕಾರ ಮತ್ತು ಹಣಕಾಸು ಗುಪ್ತಚರ ಘಟಕಕ್ಕೆ (FIU-IND) ವರದಿ ಮಾಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ವಿಜಯಪುರ: 'ಥೈಲ್ಯಾಂಡ್ ಮಾವಿನ ತಳಿ' ಬೆಳೆದು ವರ್ಷವಿಡೀ ಆದಾಯ ಗಳಿಸುವ ರೈತ ನವೀನ್! ಯಶೋಗಾಥೆ

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

SCROLL FOR NEXT