ಬೆಂಗಳೂರು: ರಾಜ್ಯದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಕೇಂದ್ರದ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡ (NQAS) ಪ್ರಮಾಣೀಕರಣವನ್ನು 3 ತಿಂಗಳಲ್ಲಿ ಸಾಧಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಈ ಕುರಿತು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಯಾವ ಆರೋಗ್ಯ ಸಂಸ್ಥೆಯು 3 ತಿಂಗಳ ಒಳಗೆ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ವಿಫಲವಾಗುವುದೋ, ಅಂತಹ ವಿಫಲವಾದ ತಂಡಕ್ಕೆ ಪ್ರೋತ್ಸಾಹ ಧನ ಅನರ್ಹಗೊಳಿಸಲಾಗುವುದು. 9 ತಿಂಗಳಲ್ಲಿ ಈ ಸಾಧನೆ ಮಾಡದಿದ್ದಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿಯ ವಾರ್ಷಿಕ ಭತ್ಯೆಯನ್ನು ತಡೆ ಹಿಡಿಯಲಾಗುವುದು ಎಂದು ಎಚ್ಚರಿಸಿದೆ.
ಯಾವ ಆರೋಗ್ಯ ಸಂಸ್ಥೆಯು ಮುಂದಿನ 3 ತಿಂಗಳಲ್ಲಿ ಒಳಗೆ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ವಿಫಲವಾಗುವುದೋ, ಅಂತಹ ವಿಳಲವಾದ ತಂಡಕ್ಕೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ (ಎಬಿ-ಎಆರ್‌ಕೆ) ಅಡಿ ನೀಡಲಾಗುತ್ತಿರುವ ಪ್ರೋತ್ಸಾಹಧನದಿಂದ ಆಸ್ಪತ್ರೆಯನ್ನು ಅನರ್ಹಗೊಳಿಸಲಾಗುವುದು (AB- Ark ಪ್ರೋತ್ಸಾಹಕಗಳಲ್ಲಿ ಶೇಕಡ ಶೇ.30 ತಂಡಕ್ಕೆ ಮತ್ತು ಉಳಿದ ಶೇಕಡ ಶೇ.70 ಆಸ್ಪತ್ರೆಯು Health Benefit Package ಪಡೆಯಲು ಅರ್ಹರಿರುತ್ತಾರೆ) ಎಂದು ತಿಳಿಸಲಾಗಿದೆ.
NQAS ನ ಸಾಧನೆಯನ್ನು 6 ತಿಂಗಳ ಒಳಗೆ ನಿರೀಕ್ಷಿತ ಮಟ್ಟದಲ್ಲಿ ಸಾಧಿಸಬೇಕು. ಇಲ್ಲವಾದಲ್ಲಿ, ಆರೋಗ್ಯ ಕೇಂದ್ರದ ಅಂತಹ ಮುಖ್ಯಸ್ಥರ ಮತ್ತು ವೈದ್ಯಕೀಯ/ಅರೆ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯಲ್ಲಿ ಮಾಹಿತಿ ದಾಖಲಿಸಬೇಕು. ಜೊತೆಗೆ ಅಂತಹ ಮುಖ್ಯಸ್ಥರ ವರ್ಗಾವಣೆಗೆ ಶಿಫಾರಸು ಮಾಡಬೇಕು.
ಇಂದಿನಿಂದ 9 ತಿಂಗಳೊಳಗೆ ಯಾವುದೇ ಸಾಧನೆಯಾಗದಿದ್ದರೆ, ಅಂತಹ ಆರೋಗ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಮುಖ್ಯಸ್ಥರ ಮತ್ತು ವೈದ್ಯಕೀಯ/ಅರೆ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆ ಹಿಡಿಯಲಾಗುವುದು.
ಈ ಎಲ್ಲಾ ಕ್ರಮಗಳ ಹೊರತಾಗಿಯೂ, ಯಾವುದೇ ಪ್ರಗತಿ ಇಲ್ಲದಿದ್ದರೆ, ಆರೋಗ್ಯ ಸಂಸ್ಥೆಗಳ ಸಿಬ್ಬಂದಿಯನ್ನು ಕಳಪೆ ಗುಣಮಟ್ಟದ ಆರೈಕೆ/ಚಿಕಿತ್ಸೆ ಇತ್ಯಾದಿಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದೆ.