ಸಾವಿಗೀಡಾದ ತಂದೆ ಮಗ 
ರಾಜ್ಯ

ಯಾದಗಿರಿ: ಜಾತಿ ನಿಂದನೆ ಕೇಸ್ ಬೆದರಿಕೆ, ಭಯದಿಂದ ಯುವಕ ಆತ್ಮಹತ್ಯೆ; ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಂದೆ ನಿಧನ

ಕಳೆದ ಒಂದು ವಾರದ ಹಿಂದೆ, ವಡಗೇರದಲ್ಲಿ ಜಮೀನಿನ ದಾರಿಯ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬವೊಂದರ ಜೊತೆ ಜಗಳ ಉಂಟಾಗಿತ್ತು.

ಯಾದಗಿರಿ: ಜಮೀನಿಗೆ ಹೋಗುವ ದಾರಿಯ ವಿಚಾರವಾಗಿ ದಲಿತ ಸಮುದಾಯದವರು ಜಾತಿ ನಿಂದನೆ ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ವಡಿಗೆರಾ ತಾಲ್ಲೂಕಿನಲ್ಲಿ ನಡೆದಿದೆ. ಈ ವಿಚಾರ ತಿಳಿದು ಯುವಕನ ತಂದೆ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮೆಹಬೂಬ್ (21) ಹಾಗೂ ಹೃದಯಾಘಾತದಿಂದ ಮೃತಪಟ್ಟವರನ್ನು ಸೈಯದ್‌ (50) ಎಂದು ಗುರುತಿಸಲಾಗಿದೆ.

ಕಳೆದ ಒಂದು ವಾರದ ಹಿಂದೆ, ವಡಗೇರದಲ್ಲಿ ಜಮೀನಿನ ದಾರಿಯ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬವೊಂದರ ಜೊತೆ ಜಗಳ ಉಂಟಾಗಿತ್ತು. ಈ ಜಗಳವು ಮೆಹಬೂಬ್ ಮತ್ತು ಆ ಕುಟುಂಬದ ನಡುವೆ ಜಮೀನಿನ ಮೂಲಕ ಹಾದುಹೋಗುವ ವಿಷಯಕ್ಕೆ ಸಂಬಂಧಿಸಿತ್ತು.

ಈ ಕುರಿತು ಗ್ರಾಮದ ಮುಖಂಡರು ನ್ಯಾಯ ಪಂಚಾಯತ್‌ ಮಾಡಿ ಬಗೆಹರಿಸಿದ್ದರು. ಆದರೆ, ಮತ್ತೆ ಅದೇ ವಿಚಾರವಾಗಿ ಜಾತಿ ನಿಂದನೆ ಕೇಸ್ ಮಾಡುತ್ತೇವೆ ಎಂದು ದಲಿತ ಸಮುದಾಯದವರು ಹೆದರಿಸಿದ್ದಾರೆ. ಕೇಸ್ ದಾಖಲಾದರೆ ಮನೆ ಮಾನ-ಮರ್ಯಾದೆ ಹೋಗುತ್ತದೆ ಎಂಬ ಭಯದಿಂದ ಬುಧವಾರ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT