ನಟ ದರ್ಶನ್ 
ರಾಜ್ಯ

Darshan Case: ಜಾಮೀನು ಯಾಕೆ ರದ್ದು ಮಾಡಬಾರದು; ದರ್ಶನ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ತನ್ನ ವಿವೇಚನೆಯನ್ನ ಸೂಕ್ತವಾಗಿ ಬಳಸಿಲ್ಲ ಎಂದ ನ್ಯಾಯಮೂರ್ತಿ ಪರ್ದಿವಾಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಬಗ್ಗೆ ಏನು ಹೇಳಬಯಸುತ್ತೀರಿ ಎಂದು ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದರು.

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ದರ್ಶನ್ ಪರ ವಕೀಲರಿಗೆ ಜಾಮೀನು ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ ಬದಲಾವಣೆಯ ಬಗ್ಗೆ ಪರೋಕ್ಷವಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಜುಲೈ 22ರಂದೇ ಅಂತಿಮ ವಿಚಾರಣೆ ನಡೆಸಿ ಅಂದೇ ಆದೇಶ ನೀಡುವುದಾಗಿ ಹೇಳಿದೆ. ಹೀಗಾಗಿ ದರ್ಶನ, ಪವಿತ್ರಾಗೌಡ ಸೇರಿ ಏಳು ಮಂದಿಯ ಭವಿಷ್ಯ 22ರಂದು ನಿರ್ಧಾರವಾಗಲಿದೆ.

ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ತನ್ನ ವಿವೇಚನೆಯನ್ನ ಸೂಕ್ತವಾಗಿ ಬಳಸಿಲ್ಲ ಎಂದ ನ್ಯಾಯಮೂರ್ತಿ ಪರ್ದಿವಾಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಬಗ್ಗೆ ಏನು ಹೇಳಬಯಸುತ್ತೀರಿ ಎಂದು ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಕಪಿಲ್ ಸಿಬಲ್ ವಾದ ಮಂಡಿಸಲು ಮುಂದಾದರು. ಆದರೆ ನ್ಯಾಯಮೂರ್ತಿಗಳು ಜುಲೈ 22ರಂದೇ ನಿಮ್ಮ ವಾದ ಮಂಡಿಸಿ ಎಂದು ಹೇಳಿದರು.

2024ರ ಜೂ.8ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಂಧನವಾಗಿ 6 ತಿಂಗಳ ಬಳಿಕ 2024ರ ಡಿ.13 ರಂದು ಕರ್ನಾಟಕ ಹೈಕೋರ್ಟ್‌ ದರ್ಶನ್ ಸೇರಿದಂತೆ ಪವಿತ್ರ ಗೌಡ, ಪ್ರದೂಶ್, ಜಗದೀಶ್, ಲಕ್ಷ್ಮಣ್, ಅನುಕುಮಾರ್ ಹಾಗೂ ನಾಗರಾಜುಗೆ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇನ್ನು ಮೇ 21ರಂದು ನ್ಯಾಯಮೂರ್ತಿ ಪಾರ್ದೀವಾಲ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ನ್ಯಾಯಪೀಠ ಅರ್ಜಿಯ ವಿಚಾರಣೆಯನ್ನು ಜು. 17ಕ್ಕೆ ಮುಂದೂಡಿತ್ತು.

ಸದ್ಯ ವಿಶೇಷ ಅನುಮತಿ ಪಡೆದಿರುವ ನಟ ದರ್ಶನ್ ವಿದೇಶಕ್ಕೆ ತೆರಳಿ ತಮ್ಮ ಚಿತ್ರಗಳ ಶೂಟಿಂಗ್‌ನಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕದಂತೆ ಹರ್ಯಾಣ ಚುನಾವಣೆಯಲ್ಲೂ ಮತಕಳ್ಳತನ: ಬಿಹಾರ ಎಲೆಕ್ಷನ್ ಹೊತ್ತಲ್ಲಿ ರಾಹುಲ್ ಗಾಂಧಿ ಗಂಭೀರ ಆರೋಪ; Video

ಆಪ್ತಮಿತ್ರನಿಗೆ ಕೈ ಕೊಡ್ತಾ ಭಾರತ? ಡಿಸೆಂಬರ್ ನಿಂದ ರಷ್ಯಾ ಕಚ್ಚಾ ತೈಲ ಆಮದು ಕಡಿತ; ಒಪ್ಪಂದದಿಂದ ಹಿಂದೆ ಸರಿದ ಕಂಪನಿಗಳು

ನ್ಯೂಯಾರ್ಕ್ ಅಂಗಳದಲ್ಲಿ ನಿಂತು Nehru ಮಾತು ಉಲ್ಲೇಖ; ಟ್ರಂಪ್​ಗೆ ಎಚ್ಚರಿಕೆ ಕೊಟ್ಟ ಜೊಹ್ರಾನ್ ಮಮ್ದಾನಿ: Video

ಯಾರಿದು ರಮಾ ದುವಾಜಿ? ಐತಿಹಾಸಿಕ NYC ಮೇಯರ್ ಚುನಾವಣೆಯ ಕೇಂದ್ರ ಬಿಂದು, ಪ್ಯಾಲೆಸ್ಟೈನ್ ಪರ ನಿಲುವು, ಕಲಾವಿದೆ!

ಮುಂಬೈ: ಪರೀಕ್ಷಾರ್ಥ ಸಂಚಾರದ ವೇಳೆ ವಾಲಿದ ಮೋನೋರೈಲು; ತಪ್ಪಿದ ಅನಾಹುತ

SCROLL FOR NEXT