ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದ ನಟಿ ರಮ್ಯಾ ವಿರುದ್ಧ ನಟ ದರ್ಶನ್ ಫ್ಯಾನ್ಸ್ ಸಿಡಿದೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಆ್ಯಂಡ್ ನಟಿ ರಮ್ಯಾ ವಾರ್ ಜೋರಾಗಿದೆ.
ಮೃತನ ಫ್ಯಾಮಿಲಿ ಪರ ನಿಂತ ನನಗೆ ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್ಗಳನ್ನ ಕಳಿಸುತ್ತಿದ್ದಾರೆ ಎಂದು ನಟಿ ರಮ್ಯಾ ಆರೋಪ ಮಾಡಿದ್ದಾರೆ. ಅಲ್ಲದೇ ದರ್ಶನ್ ಅಭಿಮಾನಿಗಳು ಈ ಮಟ್ಟಕ್ಕೆ ಇಳಿಯಬಾರದು ಎಂದು ರಮ್ಯಾ ಕಿಡಿಕಾರಿದ್ದು, ದೂರು ಕೊಡಲು ರೆಡಿಯಾಗಿದ್ದಾರೆ. ಇತ್ತ ದರ್ಶನ್ ಫ್ಯಾನ್ಸ್ ಹಾಗೂ ರಮ್ಯಾ ನಡುವಿನ ವಾರ್ ಬಗ್ಗೆ ಗೃಹ ಸಚಿವ ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ನಟ ದರ್ಶನ್ ಫ್ಯಾನ್ಸ್ ಕಮೆಂಟ್ ಬಗ್ಗೆ ನಟಿ ರಮ್ಯಾ ಅವರು ಮೊದಲು ದೂರು ನೀಡಲಿ ಬಳಿಕ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತಾರೆ. ಸೈಬರ್ ಕ್ರೈಂ ಅವರು ಯಾವುದು ಸೆನ್ಸಿಟೀವ್ ಇರುತ್ತೆ ಅಂತವರನ್ನ ಬ್ಲಾಕ್ ಮಾಡ್ತಾರೆ. ಇಲ್ಲವೇ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ದೂರು ಯಾರಾದ್ರು ಕೊಡಬೇಕು. ದೂರು ಕೊಡದಿದ್ರೂ ಕೆಲವೊಮ್ಮೆ ಸುಮೋಟೋ ದಾಖಲಿಸಸುತ್ತಾರೆ. ಆದ್ರೆ ದೂರು ಬಂದ್ರೆ ಸೀರಿಯಸ್ ಆಗಿ ಕ್ರಮ ಆಗುತ್ತದೆ. ಇದಕ್ಕೆಲ್ಲಾ ಸರ್ಕಾರ ನಿರ್ದೇಶನ ಆದೇಶ ಕೊಡಲ್ಲ. ಆ ವ್ಯಾಪ್ತಿಯ ಪೊಲೀಸರು ಕ್ರಮ ಕೈಗೊಳ್ತಾರೆ ಎಂದು ಈ ಪರಮೇಶ್ವರ್ ಹೇಳಿದ್ದಾರೆ.