ಚನ್ನಪ್ಪ ಹುಸೇನಪ್ಪ ನಾರಿನಾಳ್  
ರಾಜ್ಯ

ಕೊಪ್ಪಳ: ಹಳೆ ದ್ವೇಷ, ಆಸ್ತಿ ವಿವಾದ ಹಿನ್ನೆಲೆ; ವ್ಯಕ್ತಿಯನ್ನು ಕೊಚ್ಚಿ ಕೊಲೆ! Video

ಹತ್ಯೆಯಾದ ವ್ಯಕ್ತಿಯನ್ನು ಚನ್ನಪ್ಪ ಹುಸೇನಪ್ಪ ನಾರಿನಾಳ್ ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತಿರುವ ದೃಶ್ಯ, ಬೇಕರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಭಾನುವಾರ 35 ವರ್ಷದ ವ್ಯಕ್ತಿಯನ್ನು ಏಳು ಜನರ ತಂಡವೊಂದು ಬೇಕರಿಯಲ್ಲಿ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದ ವ್ಯಕ್ತಿಯನ್ನು ಚನ್ನಪ್ಪ ಹುಸೇನಪ್ಪ ನಾರಿನಾಳ್ ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುತ್ತಿರುವ ದೃಶ್ಯ, ಬೇಕರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೊಲೆಯಾದ ವ್ಯಕ್ತಿಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಳೆಯ ದ್ವೇಷ ಮತ್ತು ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಗಂಗಾವತಿ ಡಿವೈಎಸ್ಪಿ ಮತ್ತು ತಾವರಗೇರಾ ಸಿಪಿಐ ಸೇರಿದಂತೆ ಹಿರಿಯ ಅಧಿಕಾರಿಗಳು ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಕೊಪ್ಪಳ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರವಿ, ಪ್ರದೀಪ್, ಮಂಜುನಾಥ್‌, ನಾಗರಾಜ್, ಗೌತಮ್, ಮಂಜುನಾಥ್ ಮತ್ತು ಪ್ರಮೋದ್ ಎಂದು ಗುರುತಿಸಲಾಗಿದೆ.

ಭಯಾನಕ ಘಟನೆಯಲ್ಲಿ ಭಾಗಿಯಾಗಿರುವ‌ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು: ಯಾರೇ ಒಪ್ಪಿದರೂ-ಒಪ್ಪದಿದ್ದರೂ ನಿಯಮಗಳ ಪ್ರಕಾರವೇ ಲೋಕಸಭೆ ಕಾರ್ಯನಿರ್ವಹಣೆ; ಸ್ಪೀಕರ್ ಓಂ ಬಿರ್ಲಾ

CEC ಜ್ಞಾನೇಶ್ ಕುಮಾರ್ ಪದಚ್ಯುತಿಗೆ ನಿರ್ಣಯ: 200ಕ್ಕೂ ಹೆಚ್ಚು ಸಂಸದರಿಂದ ನೋಟಿಸ್‌ಗೆ ಸಹಿ

ಇರಾನ್ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೊರೆ, ಪ್ರತಿ ತಿಂಗಳು 30,000 ಕೋಟಿ ರೂ. ಹೆಚ್ಚಿನ ವೆಚ್ಚ!

ಟಿ20 ವಿಶ್ವಕಪ್ ನಲ್ಲಿ ವಿವಾದಾತ್ಮಕ ನಿರ್ಧಾರ: ಸೂರ್ಯ ಕುಮಾರ್ ಯಾದವ್ ಕ್ಷಮೆಯಾಚನೆ!

SCROLL FOR NEXT