ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಲಿವ್-ಇನ್ ಪಾರ್ಟ್ನರ್ ಗೆ ಬ್ಲಾಕ್ ಮೇಲ್; ವಿವಾಹಿತನ ಬಂಧನ

ವಿವಾಹಿತ ಮಹಿಳೆಯಾಗಿರುವ ಸಂತ್ರಸ್ತೆ, ಕೌಟುಂಬಿಕ ಹಿಂಸಾಚಾರದ ಹಿನ್ನೆಲೆಯಲ್ಲಿ ಪತಿಯಿಂದ ಬೇರ್ಪಟ್ಟಿದ್ದು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು.

ಬೆಂಗಳೂರು: ಖಾಸಗಿ ವಿಡಿಯೋಗಳನ್ನು ತೋರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ 30 ವರ್ಷದ ಮಹಿಳೆಯೊಬ್ಬರು ತನ್ನ ಲಿವ್-ಇನ್ ಸಂಗಾತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ವಿವಾಹಿತ ಮಹಿಳೆಯಾಗಿರುವ ಸಂತ್ರಸ್ತೆ, ಕೌಟುಂಬಿಕ ಹಿಂಸಾಚಾರದ ಹಿನ್ನೆಲೆಯಲ್ಲಿ ಪತಿಯಿಂದ ಬೇರ್ಪಟ್ಟಿದ್ದು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು. ನಂತರ, ಆಕೆ ಆರೋಪಿಯನ್ನು ಭೇಟಿಯಾಗಿದ್ದು, ತಾನು ಕೆಲಸ ಪಡೆಯಲು ಸಹಾಯ ಮಾಡಿದ್ದರಿಂದ ಆತನೊಂದಿಗೆ ಆತ್ಮೀಯವಾಗಿದ್ದಳು.

ವಿವಾಹಿತನಾಗಿರುವ ಆರೋಪಿ, ತನ್ನ ಪತಿಗೆ ವಿಚ್ಛೇದನ ನೀಡುವಂತೆ ಮಹಿಳೆಯ ಮನವೊಲಿಸಿ, ಕಾಡುಗೋಡಿಯ ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯ ಬಾಡಿಗೆ ಮನೆಯಲ್ಲಿ ಕಳೆದ ಆರು ವರ್ಷಗಳಿಂದ ಲಿವ್-ಇನ್ ಪಾರ್ಟ್ನರ್ ಆಗಿ ಸಂತ್ರಸ್ತೆಯ ಜೊತೆ ವಾಸಿಸಲು ಪ್ರಾರಂಭಿಸಿದನು. ನಂತರ ಆಕೆಯ ಗಮನಕ್ಕೆ ಬಾರದೆ ಅವರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ.

ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ನಂತರ, ಆಕೆ 2023 ರಲ್ಲಿ ಆತನಿಂದ ತಪ್ಪಿಸಿಕೊಂಡು ಕೋಲಾರ ಜಿಲ್ಲೆಯ ಆಕೆಯ ಪೋಷಕರ ಮನೆಗೆ ಹೋಗಿದ್ದಾರೆ. ನಂತರ ಆರೋಪಿಯು ಆಕೆಯ ತಾಯಿಗೆ ಹಣಕ್ಕಾಗಿ ತೊಂದರೆ ನೀಡಲು ಪ್ರಾರಂಭಿಸಿದನು ಮತ್ತು ಹಣ ನೀಡದಿದ್ದರೆ ಮಹಿಳೆಯ ಖಾಸಗಿ ವಿಡಿಯೋಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.

ಆಕೆಯ ಸಹೋದರನಿಗೂ ಆರೋಪಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆತನ ಕಿರುಕುಳ ಸಹಿಸಲಾಗದೆ ಸಂತ್ರಸ್ತ ಮಹಿಳೆ ಕೆಲವು ದಿನಗಳ ಹಿಂದೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಡುಗೋಡಿಯ ಬೆಳತ್ತೂರು ನಿವಾಸಿ, ಆರೋಪಿ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದೆ.

ದೂರುದಾರ ಮಹಿಳೆ 2016 ರಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗ ಪತಿಯಿಂದ ಬೇರ್ಪಟ್ಟಿದ್ದರು. ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆರೋಪಿ ಸುಮಾರು 1 ಲಕ್ಷ ರೂ. ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

"ಆರೋಪಿ ಕಾಡುಗೋಡಿಯಲ್ಲಿ ಕಂಪ್ಯೂಟರ್ ಅಂಗಡಿ ನಡೆಸುತ್ತಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿಯು ಹಣ ಗಳಿಸಲು ಮತ್ತು ಆಕೆಯನ್ನು ಮರಳಿ ಪಡೆಯುವ ಯತ್ನದಲ್ಲಿ ಆಕೆಯ ಕುಟುಂಬ ಸದಸ್ಯರಿಗೆ ಆಕೆಯ ಖಾಸಗಿ ವಿಡಿಯೋಗಳ ಮೂಲಕ ಬೆದರಿಕೆ ಹಾಕಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಜನರು ಗ್ಯಾಸ್‌ಗಾಗಿ ಕ್ಯೂ ನಿಂತರೆ; ಕರ್ನಾಟಕದ ಶಾಸಕರು RCB vs CSK ಪಂದ್ಯದ ಉಚಿತ IPL​ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತ್ರು: ಎಲ್ಲರಿಗೂ ಸಿಕ್ತು 3 ಟಿಕೆಟ್!

IPL 2026: ಶತಕದ ಅಂಚಿನಲ್ಲಿ ಎಡವಿದ ರಿಜ್ವಿ; ಡೆಲ್ಲಿ ಕ್ಯಾಪಿಟಲ್ಸ್ ಸತತ 2ನೇ ಗೆಲುವು; DC ಮುಂದೆ ಮಂಡಿಯೂರಿದ ಮುಂಬೈ!

ತಮಿಳುನಾಡಿನಲ್ಲಿ ಅಧಿಕಾರ ಯಾರಿಗೆ? ಡಿಎಂಕೆ, ಎನ್‌ಡಿಎ ಅಥವಾ ಟಿವಿಕೆ? ಸಮೀಕ್ಷೆಗಳಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ!

SCROLL FOR NEXT