ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಚಿಕ್ಕಪೇಟೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮುಂದುವರೆದ ಕಾಮಗಾರಿಯಿಂದಾಗಿ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದ್ದು, ವ್ಯಾಪಾರಸ್ಥರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ಕೇವಲ ಶೇ.10ರಷ್ಟು ವೈಟ್-ಟಾಪಿಂಗ್ ಕೆಲಸ ಮಾತ್ರ ಉಳಿದಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಬಾಕಿ ಉಳಿದಿರುವ ಕಾಮಗಾರಿ ಸಾಕಷ್ಟು ಸಮಸ್ಯೆಗಳನ್ನುಂಟು ಮಾಡುತ್ತಿದೆ ಎಂದು ವ್ಯಾಪಾರಸ್ಥರು ದೂರಿದ್ದಾರೆ.
ಮೆಟ್ರೋ ಜಂಕ್ಷನ್ ಬಳಿ ಕಾಮಕಾರಿ ಕೆಲಸ ಬಾಕಿಯಿದ್ದು, ಅಲ್ಲಿ ಗಂಟೆಗೆ ಸಾವಿರಾರು ಜನರು ಮತ್ತು ವಾಹನಗಳು ಹಾದು ಹೋಗುತ್ತವೆ. ಅಪೂರ್ಣ ಕೆಲಸ ಮತ್ತು ಬ್ಯಾರಿಕೇಡ್‌ಗಳು ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಹೆಚ್ಚಿಸಿದೆ. ಕೆಲಸ ಪುನರಾರಂಭವಾಗುವ ಮೊದಲು ಮಳೆ ಪ್ರಾರಂಭವಾದರೆ, ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ಅಲ್ಲದೆ, ರಸ್ತೆ ಪರಿಸ್ಥಿತಿಗಳು ಕೂಡ ಹಾಳಾಗುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಾಮಗಾರಿ ಕೆಲಸಗಳಿಂದಾಗಿ ಈಗಾಗಲೇ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಬಿಬಿಎಂಪಿ ಇನ್ನೂ ತಡ ಮಾಡಿದರೆ, ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ವ್ಯಾಪಾರಸ್ಥರೊಬ್ಬರು ಹೇಳಿದ್ದಾರೆ.
ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇಲ್ಲಿ ಸಂಚರಿಸಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆ ಮೊದಲು ಮೊದಲು, ಈ ವೃತ್ತವನ್ನು ದಾಟಲು ಕೇವಲ 5 ರಿಂದ 7 ನಿಮಿಷ ಸಮಯ ಬೇಕಾಗುತ್ತಿತ್ತು. ಆದರೆ, ರಸ್ತೆ ಕಾಮಗಾರಿಯಿಂದಾಗಿ 15 ರಿಂದ 20 ನಿಮಿಷಗಳ ಕಾಲ ಬೇಕಾಗುತ್ತಿದೆ. ಕಾಮಗಾರಿ ಕೆಲಸಗಳಿಂದಾಗಿ ಆಟೋಗಳೂ ಕೂಡ ಇಲ್ಲಿಗೆ ಬರಲು ಬಯಸುವುದಿಲ್ಲ ಎಂದು ವಿದ್ಯಾರ್ಥಿ ಆಕಾಶ್ ಅವರು ಹೇಳಿದ್ದಾರೆ.
ಈ ನಡುವೆ ಇತ್ತೀಚಿನ ಮಳೆಯಿಂದಾಗಿ ಕೆಲಸ ವಿಳಂಬವಾಗಿದೆ ಎಂದು ಬಿಬಿಎಂಪಿ ಎಂಜಿನಿಯರ್ ಹೇಳಿದ್ದು, ಕಳಪೆ ಯೋಜನೆ ಮತ್ತು ಸಮನ್ವಯದ ಕೊರತೆಯೇ ನಿಜವಾದ ಕಾರಣ ಎಂದು ಸ್ಥಳೀಯ ವ್ಯಾಪಾರಿಗಳು ದೂರಿದ್ದಾರೆ.
ಕಳಪೆ ರಸ್ತೆ ಸಂಪರ್ಕದಿಂದಾಗಿ ಗ್ರಾಹಕರು ಈ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನಮ್ಮ ವ್ಯವಹಾರಗಳಿಗೆ ತೀವ್ರ ಹೊಡೆತ ಬಿದ್ದಿದೆ.
ಕಾಮಗಾರಿಗಳಿಂದಾಗಿ ವಾಹನಗಳು ನನ್ನ ಅಂಗಡಿಯ ಬಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ, ಇದೀಗ ಒಬ್ಬ ವ್ಯಕ್ತಿ ನಿಂತರೆ ಅದೇ ಅಪರೂಪ ಎನ್ನುವಂತಾಗಿದೆ ಎಂದು ತಿನಿಸು ಮಳಿಗೆಯನ್ನು ನಡೆಸುವ ಪ್ರಕಾಶ್ ಎಂ, ಅವರು ಹೇಳಿದ್ದಾರೆ.
ಬಿಬಿಎಂಪಿಗೆ ಕೇವಲ ಶೇ.10ರಷ್ಟು ಕೆಲಸ ಮಾತ್ರ ಉಳಿದಿದೆ ಎಂದು ಹೇಳುತ್ತಿದೆ. ಆದರೆ. ವ್ಯಾಪಾರಿಗಳಿಗೆ ಇದು ದೈನಂದಿನ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೇಸ ವ್ಯಕ್ತಪಡಿಸಿದ್ದಾರೆ.
ಎರಡು ವಾರಗಳ ಹಿಂದೆ ನನ್ನ ಅಂಗಡಿಯ ಮುಂದೆ ಇರುವ ಪ್ರದೇಶವನ್ನು ಅಗೆದು, ಕೆಲಸವನ್ನು ಪ್ರಾರಂಭಿಸಿದರು, ನಂತರ ಅಧಿಕಾರಿಗಳಉ ನಾಪತ್ತೆಯಾದರು. 10 ರಿಂದ 15 ದಿನಗಳವರೆಗೆ ಯಾವುದೇ ಕೆಲಸ ಮಾಡಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಕಾಮಗಾರಿ ಕೆಲಸ ಪುನರಾರಂಭಿಸಿದ್ದಾರೆಂದು ಸಣ್ಣ ಹಾರ್ಡ್‌ವೇರ್ ಅಂಗಡಿಯನ್ನು ನಡೆಸುತ್ತಿರುವ ಸೈಯದ್ ಜಮೀಲ್ ಅವರು ಹೇಳಿದ್ದಾರೆ.