ಸಂಗ್ರಹ ಚಿತ್ರ TNIE Photo | Udayashankar S
ರಾಜ್ಯ

ಕಬಿನಿ-KRSನಲ್ಲಿ ಸಾಕಷ್ಟು ನೀರಿದೆ, ಬೆಂಗಳೂರು-ಮೈಸೂರಿನಲ್ಲಿ ನೀರಿನ ಕೊರತೆ ಎದುರಾಗಲ್ಲ: ರಾಜ್ಯ ಸರ್ಕಾರ

ಕೆಆರ್‌ಎಸ್ ಮತ್ತು ಕಬಿನಿ ಎರಡರಲ್ಲೂ 9 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಇರುವುದರಿಂದ ಬೆಂಗಳೂರು, ಮೈಸೂರು ಮತ್ತು ಇತರ ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವುದಿಲ್ಲ.

ಬೆಂಗಳೂರು: ಕೆಆರ್‌ಎಸ್ ಮತ್ತು ಕಬಿನಿಯಲ್ಲಿ ಸಾಕಷ್ಟು ನೀರಿದ್ದು, ಈ ಬಾರಿಯ ಬೇಸಿಗೆಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ನಿನ್ನೆಯಷ್ಟೇ ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯ ವೇಳೆ ಮಾತನಾಡಿದ ಕಬಿನಿ ಮತ್ತು ಕೆಆರ್‌ಎಸ್‌ನಲ್ಲಿ ಸಾಕಷ್ಟು ನೀರು ಇರುವುದರಿಂದ ಈ ಬಾರಿ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಅಧಿಕಾರಿಗಳಿಗೆ ಸಚಿವರು ಕೆಲ ಸೂಚನೆಗಳನ್ನು ನೀಡಿದರು. ನೀರು ಸರಬರಾಜು ಸಮಸ್ಯೆಗಳಿರುವ ಗ್ರಾಮಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ, ಜಾನುವಾರು ಮೇವುಗಳ ಕೊರತೆ ಉಂಟಾಗದಂತೆ ಈಗಲೇ ಅಗತ್ಯ ಕ್ರಮಗಳನ್ನು ಅನುಸರಿಸಿ. ಕಳೆದ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರು ಲಭ್ಯವಿದೆ ಸಮರ್ಪಕವಾದ ನೀರು ಪೂರೈಕೆ ನಿರ್ವಹಣೆಯಾಗಬೇಕು.

ಬೇಸಿಗೆಯಲ್ಲಿ ಶುದ್ಧವಾದ ಕುಡಿಯುವ ನೀರು ದೊರೆಯುವಂತೆ ನೋಡಿಕೊಳ್ಳಬೇಕು. ನೀರಿನ ಕೊರತೆ ಕುರಿತು ಯಾವುದೇ ದೂರುಗಳು ಬರದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ. ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆಯೂ ಮುಂಜಾಗ್ರತ ಕ್ರಮ ಅನುಸರಿಸಬೇಕಿದೆ, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಎಂದು ನೀರಾವರಿ ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಅಲ್ಲದೆ, ಮೇ ತಿಂಗಳವರೆಗೆ ಕಬಿನಿ ಮತ್ತು ಕೆಆರ್‌ಎಸ್ ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಬಿನಿಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಮಹೇಶ್ ಅವರು ಮಾತನಾಡಿ, ಏಕೆಂದರೆ ಕಬಿನಿಯಲ್ಲಿ 14.2 ಟಿಎಂಸಿ ಅಡಿ ನೀರು ಮತ್ತು ಕೆಆರ್‌ಎಸ್‌ನಲ್ಲಿ 30 ಟಿಎಂಸಿ ಅಡಿ ನೀರು ಇರುವುದರಿಂದ ಮಳೆಗಾಲ ತಡವಾದರೂ ಕುಡಿಯುವ ನೀರಿನ ಸರಬರಾಜಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಕಾರ್ಯನಿರ್ವಾಹಕ ಎಂಜಿನಿಯರ್ ಎ.ಎಸ್. ರಂಜಿಂತ್ ಕುಮಾರ್ ಅವರು ಮಾತನಾಡಿ, ಬೆಂಗಳೂರು ಮತ್ತು ಮೈಸೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ನೀರಾವರಿ ಇಲಾಖೆಯು ಕಬಿನಿಯಿಂದ 600 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದೆ. ಜೂನ್ ಅಂತ್ಯದವರೆಗೆ ಮೈಸೂರಿನಲ್ಲಿ ನೀರಿನ ಕೊರತೆ ಇರುವುದಿಲ್ಲ. ಆದರೆ, ಬಾಕಿ ಇರುವ ಕಾಮಗಾರಿ ಕೆಲಸಗಳ ಪೂರ್ಣಗೊಳಿಸಲು 13 ಕೋಟಿ ರೂ.ಗಳ ಅಗತ್ಯವಿದೆ ಎಂದು ಹೇಳಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಎಂದಿಗೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ; ಮಹಾಜನ ಸಮಿತಿ ವರದಿಯೇ ಅಂತಿಮ

ಹಣೆಗೆ ಗನ್ ಇಟ್ಟು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ: BJP ನಾಯಕ ಅಣ್ಣಾಮಲೈ ಸ್ಫೋಟಕ ಹೇಳಿಕೆ!

RSS ನಿಷೇಧಿಸಬೇಕು: ಖರ್ಗೆ ಹೇಳಿಕೆಗೆ ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು?

Nehru-Patel Correspondence: ಭಾರತ ದೊಂದಿಗೆ ಕಾಶ್ಮೀರ ವಿಲೀನ, ನೆಹರು-ಪಟೇಲ್ ಪತ್ರ ವ್ಯವಹಾರ ಓದಿ, ಮೋದಿಗೆ ಖರ್ಗೆ ತಿರುಗೇಟು!

ಕೇಂದ್ರ ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಹೇರುತ್ತಿದೆ; ಆದ್ರೆ ರಾಜ್ಯದ ಮದರಸಗಳಲ್ಲೂ ಕನ್ನಡ ಕಲಿಕೆ

SCROLL FOR NEXT