ಜಿ.ಪರಮೇಶ್ವರ್ 
ರಾಜ್ಯ

ಮಲ್ಟಿಪ್ಲೆಕ್ಸ್ ಗಳಿಗೆ ಕಡಿವಾಣ ಹಾಕಲು ಸಿನಿಮಾ ಟಿಕೆಟ್ ಗೆ ಏಕರೂಪ ದರ ನಿಗದಿ: ಗೃಹ ಸಚಿವ ಜಿ. ಪರಮೇಶ್ವರ್

ರಾಜ್ಯದಲ್ಲಿ ಟಿಕೆಟ್‌ ದರಗಳನ್ನು ನಿಗದಿ ಮಾಡುವ ಅಧಿಕಾರವನ್ನು ಚಿತ್ರಮಂದಿರಗಳ ಮಾಲೀಕರಿಗೆ ನೀಡಲಾಗಿದೆ. ದರವನ್ನು ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೂ ಇದ್ದು, ಅಗತ್ಯವೆನಿಸಿದರೆ ಅದನ್ನು ಬಳಸಬಹುದು ಎಂದರು.

ಬೆಂಗಳೂರು: ಮಲ್ಟಿಫ್ಲೆಕ್ಸ್‌ಗಳು ಸಿನಿಮಾ ಟಿಕೆಟ್‌ಗೆ ದುಬಾರಿ ದರ ನಿಗದಿ ಮಾಡಿ ದರೋಡೆ ಮಾಡುತ್ತಿವೆ. ಅದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಏಕರೂಪದ ಟಿಕೆಟ್‌ ದರ ನಿಗದಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಜೆಡಿಎಸ್‌ನ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಟಿಕೆಟ್‌ ದರಗಳನ್ನು ನಿಗದಿ ಮಾಡುವ ಅಧಿಕಾರವನ್ನು ಚಿತ್ರಮಂದಿರಗಳ ಮಾಲೀಕರಿಗೆ ನೀಡಲಾಗಿದೆ. ದರವನ್ನು ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೂ ಇದ್ದು, ಅಗತ್ಯವೆನಿಸಿದರೆ ಅದನ್ನು ಬಳಸಬಹುದು ಎಂದರು.

2017-18ನೇ ಸಾಲಿನ ಆಯವ್ಯಯದಲ್ಲಿ ಎಲ್ಲಾ ಚಿತ್ರಮಂದಿರಗಳನ್ನು ಏಕ ರೂಪದ ದರ ಜಾರಿ ಮಾಡಲು ಘೋಷಣೆ ಮಾಡಲಾಗಿತ್ತು. ಆಯವ್ಯಯದ ಘೋಷಣೆಯಂತೆ 2018, ಮೇ 11ರಂದು ಸರ್ಕಾರದ ಆದೇಶವೂ ಸಹ ಆಗಿತ್ತು. ಆದರೆ ಆ ಸರ್ಕಾರಿ ಆದೇಶಕ್ಕೆ ತಡೆಯಾಜ್ಞೆ ತಂದ ನಿಟ್ಟಿನಲ್ಲಿ ಆದೇಶವನ್ನು ವಾಪಸ್ಸು ತೆಗೆದುಕೊಳ್ಳಲಾಯಿತು.

ಚಿತ್ರಮಂದಿರಗಳ ಟಿಕೇಟ್ ದರಗಳನ್ನು ಚಿತ್ರಮಂದಿರಗಳ ಮಾಲೀಕರೇ ನಿರ್ಧಾರ ಮಾಡುವ ಪದ್ದತಿ ಜಾರಿಯಲ್ಲಿದೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿಗಳ ಮಾಲಿಕರು ಚಿತ್ರಮಂದಿಗಳನ್ನು ವಾಣಿಜ್ಯ ಚಟುವಟಿಕೆಗಳಾಗಿ ರೂಪಿಸಿಕೊಂಡಿದ್ದಾರೆ.

ಆವಶ್ಯವೆನಿಸಿದಲ್ಲಿ ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಈ ಸಂಬಂಧ ಕೂಡಲೇ ಅಗತ್ಯ ನಿಯಮಗಳನ್ನು ರೂಪಿಸಿ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿ ಮಾಡಲು ಆದಷ್ಟು ಬೇಗ ಕ್ರಮ ವಹಿಸಿ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವಂತ ಘಟನೆಗಳು ನಡೆಯದಂತೆ ಮುಂಗಡ ಮಾಹಿತಿಯನ್ನು ಕಲೆಹಾಕಿ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ನಿಗಾವಹಿಸಲು ಅಗತ್ಯ ಕ್ರಮಗಳನ್ನು ಜಾರಿ ಮಾಡಲಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸಲು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

‘100–150 ಆಸನಗಳು ಇರುವ ಮಲ್ಟಿಫ್ಲೆಕ್ಸ್‌ಗಳು ಟಿಕೆಟ್‌ ಮಾತ್ರವಲ್ಲದೆ, ನೀರು ಮತ್ತು ತಿನಿಸುಗಳಿಗೂ ವಿಪರೀತ ದರ ನಿಗದಿ ಮಾಡುತ್ತಿವೆ. ಇದನ್ನೂ ನಿಯಂತ್ರಿಸುವ ಅವಶ್ಯ ಇದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು’ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾ: ತನ್ನ ಅಭ್ಯರ್ಥಿ ನಾಮಪತ್ರ ವಾಪಸ್ ಬೆನ್ನಲ್ಲೇ 'ಕೈ'ಗೆ ಮಮತಾ ಬೆಂಬಲ ಘೋಷಣೆ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!

ಮಮತಾ ಬಣಕ್ಕೆ ಮತ್ತೊಂದು ಆಘಾತ; ನಾಮಪತ್ರ ವಾಪಸ್ ಪಡೆದ ನಂದಿಗ್ರಾಮ ಅಭ್ಯರ್ಥಿ!