ಮಲ್ಲಿಕಾರ್ಜುನ ಖರ್ಗೆ PTI
ರಾಜ್ಯ

11 ವರ್ಷಗಳಲ್ಲಿ ಪ್ರಧಾನಿ 11 ದೊಡ್ಡ ಸುಳ್ಳುಗಳನ್ನು ಹೇಳಿದ್ದಾರೆ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ಘರ್ಜನೆ

ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ. ಹನ್ನೊಂದು ವರ್ಷಗಳ ಅಧಿಕಾರದಲ್ಲಿ ಹನ್ನೊಂದು ದೊಡ್ಡ ಸುಳ್ಳುಗಳನ್ನು ದೇಶಕ್ಕೆ ಹೇಳಿದ್ದಾರೆ ಎಂದು ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ. ಹನ್ನೊಂದು ವರ್ಷಗಳ ಅಧಿಕಾರದಲ್ಲಿ ಹನ್ನೊಂದು ದೊಡ್ಡ ಸುಳ್ಳುಗಳನ್ನು ದೇಶಕ್ಕೆ ಹೇಳಿದ್ದಾರೆ ಎಂದು ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಕಲ್ಯಾಣ ಕರ್ನಾಟಕದ 38 ಗ್ರಾಮೀಣ ಕ್ಷೇತ್ರಗಳಲ್ಲಿ 1,166 ಕಿ.ಮೀ ರಸ್ತೆಗಳನ್ನು ನಿರ್ಮಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದ್ದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾದರಿಯಲ್ಲಿ ಈ ಯೋಜನೆಯನ್ನು 1,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಜೇವರ್ಗಿಯಲ್ಲಿ ಕಲ್ಯಾಣ ಪಥ ಯೋಜನೆಯನ್ನು ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮೋದಿ ಅವರ ಭರವಸೆಗಳನ್ನು ಟೀಕಿಸಿದರು. ಹನ್ನೊಂದು ವರ್ಷಗಳಲ್ಲಿ ಮೋದಿ ಹನ್ನೊಂದು ದೊಡ್ಡ ಸುಳ್ಳುಗಳನ್ನು ಹೇಳಿದ್ದಾರೆ. ಮೊದಲ ಸುಳ್ಳು ಎಂದರೆ ವಿದೇಶದಿಂದ ಕಪ್ಪು ಹಣವನ್ನು ತಂದು ಜನರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ. ಹಾಕುವುದು. ಎರಡನೇಯ ಸುಳ್ಳು ಎಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು. ಆದರೆ ಉದ್ಯೋಗ ಸೃಷ್ಟಿ ಆಗಿದೆಯಾ? ಆದರೂ ನಮ್ಮ ಯುವಕರು ಮೋದಿಯನ್ನು ಏಕೆ ಬೆಂಬಲಿಸುತ್ತಾರೆ ಅಂತ ನನಗೆ ಇನ್ನೂ ತಿಳಿದಿಲ್ಲ? ಅವರು ಜಾತಿ, ಧರ್ಮ, ನಡವಳಿಕೆಯ ಆಧಾರದ ಮೇಲೆ ಅವರನ್ನು ಬೆಂಬಲಿಸುತ್ತಾರಾ ನನಗೆ ಅರ್ಥವಾಗುತ್ತಿಲ್ಲ ಎಂದು ಖರ್ಗೆ ಹೇಳಿದರು.

ಇನ್ನು ಮೂರನೇಯದ್ದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡುವ ಭರವಸೆ ನೀಡಿದ್ದರು. ಆದರೆ ಇಂದು ಶೇಕಡಾ 40-50ರಷ್ಟು ಹೆಚ್ಚಾಗಿದೆ. ನಾಲ್ಕನೆಯದು 2022ರ ವೇಳೆಗೆ ಗಂಗಾ ಶುದ್ಧೀಕರಣ, ಐದನೆಯದು, 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಲಕ್ಷಾಂತರ ಉತ್ಪಾದನಾ ಉದ್ಯೋಗಗಳನ್ನು ಸೃಷ್ಟಿಸುವುದು. ಆರನೆಯದು, 2022ರ ವೇಳೆಗೆ ಎಲ್ಲಾ ಭಾರತೀಯರಿಗೆ ಪಕ್ಕಾ ಮನೆಗಳನ್ನು ಒದಗಿಸುವುದು. ಏಳನೆಯದು, ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಇದೆಲ್ಲಾ ಆಗಿದೆಯೇ ಎಂದು ಖರ್ಗೆ ಪ್ರಶ್ನಿಸಿದರು.

ರಾಜ್ಯಸಭೆಗೆ ನಡೆದ ಕೊನೆಯ ಚುನಾವಣೆಯೂ ಸೇರಿದಂತೆ ಹನ್ನೆರಡು ಚುನಾವಣೆಗಳಲ್ಲಿ, ನಾನು ಎಂದಿಗೂ ಸುಳ್ಳು ಭರವಸೆಗಳನ್ನು ನೀಡಿಲ್ಲ, ನನ್ನ ಕಾರ್ಯಕ್ಷಮತೆಯೊಂದಿಗೆ ಉತ್ತಮ ಫಲಿತಾಂಶಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ. ನಾನು ಯಾವಾಗಲೂ ಹೇಳುತ್ತೇನೆ ಮೋದಿ ಸುಳ್ಳುಗಾರ. ಅವರ ಮಾತನ್ನು ಕೇಳಬೇಡಿ, ನೀವು ಕೇಳಿದರೆ ನೀವು ಕಷ್ಟಪಡಬೇಕಾಗುತ್ತದೆ ಎಂದರು. ಬಡವರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ, ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ಸಿಗರನ್ನು ಜನರು ಏಕೆ ಬೆಂಬಲಿಸುವುದಿಲ್ಲ ಎಂದು ಆಶ್ಚರ್ಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ