ಕೈಲಾಶ್ ಖೇರ್ 
ರಾಜ್ಯ

'ಅತಿಯಾದ ಕ್ವಾಂಟಿಟಿ ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ': ಬೆಂಗಳೂರಿನಲ್ಲಿ ಕೈಲಾಶ್ ಖೇರ್

ಬೆಂಗಳೂರನ್ನು ಎಲ್ಲರೂ ಹೊಗಳುತ್ತಾರೆ. ಬೆಂಗಳೂರು ವಿಶ್ವಮಾನವ ಸಂಸ್ಕೃತಿಯನ್ನು ಹೊಂದಿರುವ ಸುಂದರ ಸ್ಥಳವಾಗಿದೆ.

ಬೆಂಗಳೂರು: 'ಅತಿಯಾದ ಕ್ವಾಂಟಿಟಿ ನಮ್ಮ ಕೆಲಸದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ' ಎಂದು ಇತ್ತೀಚೆಗೆ ತಮ್ಮ ಬ್ಯಾಂಡ್ ಕೈಲಾಸದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ ಖ್ಯಾತ ಗಾಯಕ-ಗೀತರಚನೆಕಾರ ಕೈಲಾಶ್ ಖೇರ್ ಅವರು ಹೇಳಿದ್ದಾರೆ.

ಕೈಲಾಶ್ ಖೇರ್ ಅವರು ಸಿಲಿಕಾನ್ ಸಿಟಿಯ ಪ್ರೇಕ್ಷಕರಿಗೆ ಸೈಯಾನ್ ಮತ್ತು ತೇರಿ ದೀವಾನಿಯಂತಹ ಕ್ಲಾಸಿಕ್‌ಗಳನ್ನು ನೀಡಿದರು. ಜೊತೆಗೆ 'ಆಧ್ಯಾತ್ಮಿಕವಾಗಿ ಒಲವು ತೋರುವ ಹಾಡುಗಳು' ಎಂದು ಕರೆದ ಕೌನ್ ಹೈ ವೋಹ್ ಮತ್ತು ಬಾಮ್ ಲಹಿರಿ ಮುಂತಾದವುಗಳನ್ನು ಖೇರ್ ಹಾಡಿದರು.

ನಗರ ಮತ್ತು ಅದರ ಪ್ರೇಕ್ಷಕರ ಬಗ್ಗೆ ಹೇಳುವುದಾದರೆ, ಬೆಂಗಳೂರನ್ನು ಎಲ್ಲರೂ ಹೊಗಳುತ್ತಾರೆ. "ಬೆಂಗಳೂರು ವಿಶ್ವಮಾನವ ಸಂಸ್ಕೃತಿಯನ್ನು ಹೊಂದಿರುವ ಸುಂದರ ಸ್ಥಳವಾಗಿದೆ. ನಾವು ಪ್ರತಿ ಬಾರಿ ಪ್ರದರ್ಶನ ನೀಡಿದಾಗಲೂ ಪ್ರೇಕ್ಷಕರಿಂದ ಯಾವಾಗಲೂ ಹೃದಯಸ್ಪರ್ಶಿ ಪ್ರತಿಕ್ರಿಯೆ ಬರುತ್ತದೆ. ನನಗೆ ನೆನಪಿದೆ, ಒಮ್ಮೆ, ನಾವು ಎ.ಆರ್. ರೆಹಮಾನ್ ಅವರೊಂದಿಗೆ ಅರಮನೆ ಮೈದಾನದಲ್ಲಿ ಪ್ರದರ್ಶನ ನೀಡುತ್ತಿದ್ದೆವು. ಆ ವೇಳೆ ಮಳೆ ಬರುತ್ತಿತ್ತು. ನಾವು ಅರ್ಧ ಗಂಟೆ ಪ್ರದರ್ಶನ ನೀಡಿದ್ದೇವೆ ಮತ್ತು ಜನಸಂದಣಿಯು ಸುಮಾರು ಒಂದು ಲಕ್ಷ ಜನರಿದ್ದರು. ಇಡೀ ಜನಸಮೂಹವು ಹೆಲ್ಮೆಟ್‌ ಮತ್ತು ಛತ್ರಿಗಳನ್ನು ಬಳಸಿ ನಮ್ಮ ಹಾಡುಗಳನ್ನು ಕೇಳಿದರು. ಆದರೆ ಯಾರೂ ಮೈದಾನವನ್ನು ಬಿಟ್ಟು ಹೋಗಲಿಲ್ಲ. ಮಳೆಯು ಕಾರ್ಯಕ್ರಮದ ಉತ್ಸಾಹವನ್ನು ಕುಗ್ಗಿಸಲಿಲ್ಲ” ಎಂದು ಖೇರ್ ಹೇಳಿದ್ದಾರೆ.

ಖೇರ್ ಅವರು ಪೂರ್ಣ ಪ್ರಮಾಣದ ಆಲ್ಬಮ್ ಬಿಡುಗಡೆ ಮಾಡಿ ಬಹಳ ದಿನಗಳೇ ಆಗಿದೆ. ಕೊನೆಯ ಬಾರಿ ಅವರ ಪೂರ್ಣ ಪ್ರಮಾಣದ ಆಲ್ಬಮ್ ಇಷ್ಕ್ ಅನೋಖಾ ಬಿಡುಗಡೆಯಾದ ಸುಮಾರು ಒಂದು ದಶಕ ಮತ್ತು ಅವರ ಶ್ರೇಷ್ಠ ಹಿಟ್‌ಗಳಲ್ಲಿ ಒಂದಾದ ಸೈಯಾನ್ ಅನ್ನು ಹೊಂದಿದ್ದ ಜೂಮೋ ರೇ ಬಿಡುಗಡೆಯಾಗಿ ಸುಮಾರು ಎರಡು ದಶಕಗಳೇ ಕಳೆದಿವೆ.

ಆಲ್ಬಮ್ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಖೇರ್, "ಇತ್ತೀಚಿನ ದಿನಗಳಲ್ಲಿ, ಸಾಂಪ್ರದಾಯಿಕ ಆಲ್ಬಮ್‌ಗಳು ಸಾಮಾನ್ಯವಾಗಿ ಕಳೆದು ಹೋಗಿವೆ. ಈಗ ಸಿಡಿಗಳು ಬಿಡುಗಡೆಯಾಗುವುದಿಲ್ಲ. ಈಗ, ಎಲ್ಲವೂ ಆನ್‌ಲೈನ್‌ನಲ್ಲಿರುವುದರಿಂದ, ನಾವು ಸಿಂಗಲ್ಸ್ ಅನ್ನು ಬಿಡುಗಡೆ ಮಾಡುತ್ತಲೇ ಇರುತ್ತೇವೆ. ವಾಸ್ತವವಾಗಿ, ಕೆಲವೇ ವಾರಗಳಲ್ಲಿ, ನಾವು ಹೊಸ ಮೂಲ ಸಿಂಗಲ್‌ನೊಂದಿಗೆ ಬರುತ್ತಿದ್ದೇವೆ. ಅದು ಸೈಯಾನ್, ತೇರಿ ದಿವಾನಿ ಮತ್ತು ಪಿಯಾ ಘರ್ ಆವೇಂಗೆಯಂತಹ ಹಾಡುಗಳಿಗೆ ಅನುಗುಣವಾಗಿರುತ್ತದೆ" ಎಂದಿದ್ದಾರೆ.

ಸದ್ಯ ತಮ್ಮ ಗಮನ ಕೈಲಾಸದೊಂದಿಗೆ ಪ್ರವಾಸದಲ್ಲಿದೆ ಎಂದ ಬಾಲಿವುಡ್ ಗಾಯಕ, "ನಾವು ನೇರ ಪ್ರದರ್ಶನ ನೀಡುತ್ತಲೇ ಇರುತ್ತೇವೆ; ನಾವು ಸಿನಿಮಾ ರೆಕಾರ್ಡಿಂಗ್‌ಗಳನ್ನು ಸಹ ಬಹಳಷ್ಟು ಮಾಡುತ್ತಲೇ ಇರುತ್ತೇವೆ. ಹೆಚ್ಚಿನ ಪ್ರಮಾಣದ ಕೆಲಸ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ.

"ಕೈಲಾಸ ಅವರ ಸಂಗೀತವನ್ನು ವ್ಯಾಪಕವಾಗಿ ಸ್ವೀಕರಿಸಲಾಗಿದೆ ಮತ್ತು ಪ್ರಶಂಸಿಸಲಾಗುತ್ತಿದೆ. ಅದಕ್ಕಾಗಿ ನಾವು ವಿಶ್ವಕ್ಕೆ ನಿಜವಾಗಿಯೂ ಕೃತಜ್ಞರಾಗಿರುತ್ತೇವೆ." ಕೈಲಾಸದಿಂದ ಪ್ರತಿ ಬಾರಿಯೂ ವಿಶಿಷ್ಟವಾದ ಧ್ವನಿ ಮತ್ತು ವಿಶಿಷ್ಟ ಸಂಯೋಜನೆಗಳು ಹೊರಹೊಮ್ಮುತ್ತವೆ. ಅದು ಪ್ರಣಯ, ಸ್ಪೂರ್ತಿದಾಯಕ ಅಥವಾ ಆಧ್ಯಾತ್ಮಿಕ ಸಂಗೀತವಾಗಿರಬಹುದು. ಎಲ್ಲಾ ರೀತಿಯ ಸಂಗೀತವನ್ನು ಸ್ವೀಕರಿಸಲಾಗುತ್ತಿದೆ ಮತ್ತು ಪ್ರಶಂಸಿಸಲಾಗುತ್ತಿದೆ” ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT