ಸಾಂದರ್ಭಿಕ ಚಿತ್ರ 
ರಾಜ್ಯ

ಸರ್ಕಾರಿ ಶಾಲೆಯ ಬಾಲಕಿಯರ ಶೌಚಾಲಯಕ್ಕೆ ಕಲ್ಲು ತೂರಾಟ, ವಿದ್ಯಾರ್ಥಿ ಮೇಲೆ ಹಲ್ಲೆ: ಐವರ ಬಂಧನ

ಆರೋಪಿಗಳನ್ನು ಮೆಹಬೂಬ್ ಷರೀಫ್, ಶಂಶುದ್ದೀನ್, ಇರ್ಫಾನ್, ಮುಬಾರಕ್, ಮುದ್ದಾಸಿರ್, ಯಾಸಿನ್ ಮತ್ತು ತಾಜಿಮ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಹುಳಿಯಾರ್ ನಗರದ ನಿವಾಸಿಗಳು.

ತುಮಕೂರು: ಸರ್ಕಾರಿ ಶಾಲೆಯ ಬಾಲಕಿಯರ ಶೌಚಾಲಯಕ್ಕೆ ಕಲ್ಲು ತೂರಾಟ ನಡೆಸಿದ ಮತ್ತು ಆರೋಪಿಗಳ ಕೃತ್ಯವನ್ನು ಪ್ರಶ್ನಿಸಿದ ಶಾಲಾ ಬಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಐವರನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಮೆಹಬೂಬ್ ಷರೀಫ್, ಶಂಶುದ್ದೀನ್, ಇರ್ಫಾನ್, ಮುಬಾರಕ್, ಮುದ್ದಾಸಿರ್, ಯಾಸಿನ್ ಮತ್ತು ತಾಜಿಮ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಹುಳಿಯಾರ್ ನಗರದ ನಿವಾಸಿಗಳು. ಇನ್ನಿಬ್ಬರು ಶಂಕಿತರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಪೊಲೀಸರ ಪ್ರಕಾರ, ಶುಕ್ರವಾರ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಬಾಲಕಿಯರ ಶೌಚಾಲಯದ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸುತ್ತಿರುವುದನ್ನು ಗಮನಿಸಿದ ಶಾಲಾ ವಿದ್ಯಾರ್ಥಿ ಯಶವಂತ್, ಅವರನ್ನು ತರಾಟೆಗೆ ತೆಗೆದುಕೊಂಡು ಕಲ್ಲುತೂರಾಟವನ್ನು ನಿಲ್ಲಿಸುವಂತೆ ಎಚ್ಚರಿಸಿದ್ದಾನೆ. ಇದರಿಂದ ಕೋಪಗೊಂಡ ಗುಂಪು ಆತನನ್ನು ಅಟ್ಟಿಸಿಕೊಂಡು ಹೋಗಿ ಕೋಲುಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದೆ.

ಮುಖ್ಯ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾಲಕನನ್ನು ದಾಳಿಕೋರರಿಂದ ರಕ್ಷಿಸಿದ್ದಾರೆ. ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳು ಒಟ್ಟುಗೂಡುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ವಿದ್ಯಾರ್ಥಿಯ ಬೆನ್ನು ಮತ್ತು ತಲೆಗೆ ಗಾಯಗಳಾಗಿದ್ದು, ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿ ಮೇಲಿನ ಹಲ್ಲೆ ಮತ್ತು ಬಾಲಕಿಯರ ಶೌಚಾಲಯದ ಮೇಲೆ ಕಲ್ಲು ತೂರಾಟ ನಡೆಸಿದ ಬಗ್ಗೆ ಶಾಲಾ ಆಡಳಿತ ಮಂಡಳಿ ಹುಳಿಯಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

'ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ದುಷ್ಕರ್ಮಿಗಳಿಗೆ ಕಾನೂನಿನ ಭಯವಿಲ್ಲ. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವನ್ನು ಓಲೈಕೆ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಪದೇ ಪದೆ ಆರೋಪಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಮುಖ್ಯಮಂತ್ರಿ ಸ್ಥಾನಕ್ಕೆ ನಿತಿಶ್ ಕುಮಾರ್ ರಾಜೀನಾಮೆ?

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ, Rukmini Vasanth ಬೆಂಬಲ!

ಇರಾನ್ ಹಡಗಿನ ಮೇಲೆ ದಾಳಿ; 101 ಜನ ನಾಪತ್ತೆ; ಅಮೆರಿಕದೊಂದಿಗೆ 'ಸಂಧಾನ ಇಲ್ಲ', ಯುದ್ಧ ಮುಂದುವರಿಯಲಿದೆ! Video

T20 ವಿಶ್ವಕಪ್ 2026: 'ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ': Sam Curran ಅತ್ಯುತ್ಸಾಹ!

SCROLL FOR NEXT