ಸಾಂದರ್ಭಿಕ ಚಿತ್ರ 
ರಾಜ್ಯ

ಈ ಯುಗಾದಿಗೆ ಮತ್ತಷ್ಟು ಸಿಹಿಯಾಗಲಿದೆ 'ಒಬ್ಬಟ್ಟು': 2 ವರ್ಷದಲ್ಲೇ ತೊಗರಿ ಬೇಳೆ ಬೆಲೆ ಕಡಿಮೆ ಮಟ್ಟಕ್ಕೆ ಕುಸಿತ

ಆರು ತಿಂಗಳ ಹಿಂದಿನ ಬೆಲೆಗೆ ಹೋಲಿಸಿದರೆ ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೇಳೆ ಶೇ. 57 ರಿಂದ ಶೇ. 61 ರಷ್ಟು (ಬ್ರಾಂಡ್ ಅನ್ನು ಅವಲಂಬಿಸಿ) ಕುಸಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕಡಲೆ ಬೇಳೆ ಬೆಲೆಯೂ ಸ್ವಲ್ಪ ಮಟ್ಟಿಗೆ ಕುಸಿದಿದೆ.

ಬೆಂಗಳೂರು: ಯುಗಾದಿ ಸಮಯದಲ್ಲಿ ಈ ಬಾರಿಯ ಒಬ್ಬಟ್ಟಿನ ರುಚಿ ಹೆಚ್ಚು ಸಿಹಿಯಾಗಲಿದೆ. ಕಳೆದ ವರ್ಷ ಅಕ್ಟೋಬರ್‌ನಿಂದ ನಿರಂತರವಾಗಿ ಕುಸಿಯುತ್ತಿದ್ದ ತೊಗರಿ ಬೇಳೆ ಬೆಲೆಗಳು ಈ ವಾರ ಐತಿಹಾಸಿಕ ಕನಿಷ್ಠ ಮಟ್ಟ ತಲುಪಿವೆ.

ಆರು ತಿಂಗಳ ಹಿಂದಿನ ಬೆಲೆಗೆ ಹೋಲಿಸಿದರೆ ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೇಳೆ ಶೇ. 57 ರಿಂದ ಶೇ. 61 ರಷ್ಟು (ಬ್ರಾಂಡ್ ಅನ್ನು ಅವಲಂಬಿಸಿ) ಕುಸಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕಡಲೆ ಬೇಳೆ ಬೆಲೆಯೂ ಸ್ವಲ್ಪ ಮಟ್ಟಿಗೆ ಕುಸಿದಿದೆ.

ಕಳೆದ ವರ್ಷ ಬಿತ್ತನೆ ಮಾಡಿದಾಗ ಉತ್ತಮ ಮಳೆಯಾಗಿದ್ದರಿಂದ ಹೆಚ್ಚಿನ ಇಳುವರಿ ಬಂದಿದೆ ಎಂದು ತೊಗರಿ ಬೆಳೆಗಾರರು ಹೇಳುತ್ತಾರೆ. ಮಾರುಕಟ್ಟೆಯ ಚಲನಶೀಲತೆಯಿಂದಾಗಿ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಲಾಭವನ್ನು ವರ್ಗಾಯಿಸಬೇಕಾಗುತ್ತದೆ ಎಂದಿದ್ದಾರೆ.

ರಾಜ್ಯದ ಅತಿದೊಡ್ಡ ಮತ್ತು ಹಳೆಯ ತೊಗರಿ ಬೇಳೆ ವ್ಯಾಪಾರಿಗಳಲ್ಲಿ ಒಬ್ಬರಾದ ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸೂರಜ್ ದೇವ್ ಟ್ರೇಡರ್ಸ್‌ನ ಮಾಲೀಕ ಸಂಜಯ್ ಭಾಸಿನ್ ಮಾತನಾಡಿ, "ನಾವು ಪ್ರಸ್ತುತ ಸಾಮಾನ್ಯ ಬ್ರಾಂಡ್‌ಗೆ ರೂ 101 ರಿಂದ ರೂ 122 ರವರೆಗೆ ಉತ್ತಮ ಗುಣಮಟ್ಟದ(ಶಿವಲಿಂಗ್) ತೊಗರಿ ಬೇಳೆಯನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾವು ಅವುಗಳನ್ನು ಮೊದಲು ರೂ 175 ರಿಂದ ರೂ 200 ರವರೆಗೆ ಮಾರಾಟ ಮಾಡುತ್ತಿದ್ದೆವು. 2023 ರ ನಂತರದ ಅತ್ಯಂತ ಕಡಿಮೆ ಬೆಲೆಯಾಗಿದೆ. ಇನ್ನೊಂದು ದೊಡ್ಡ ಪ್ಲಸ್ ಪಾಯಿಂಟ್ ಏನೆಂದರೆ, ಪ್ರಸ್ತುತ ಆಫ್ರಿಕನ್ ರಾಷ್ಟ್ರಗಳಾದ ಮೊಜಾಂಬಿಕ್ ಮತ್ತು ಜಿಂಬಾಬ್ವೆ ಅಥವಾ ಮಯನ್ಮಾರ್ ನಿಂದ ಆಮದು ಮಾಡಿಕೊಳ್ಳುವ ಬೇಳೆಗೆ ಸಮನಾಗಿದೆ, ಏಕೆಂದರೆ ಅವು ಭಾರತಕ್ಕಿಂತ ಮೊದಲು ಹೆಚ್ಚು ಬೇಡಿಕೆಯಲ್ಲಿವೆ.

ಕರ್ನಾಟಕದ ಕಲಬುರಗಿ ಮತ್ತು ರಾಯಚೂರು, ಮಹಾರಾಷ್ಟ್ರದ ಲಾತೂರ್, ಅಂಕೋಲಾ ಮತ್ತು ಶೋಲಾಪುರ, ಗುಜರಾತ್‌ನ ವಸಾದ್ ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ದೇಶದ ಪ್ರಮುಖ ತೊಗರಿ ಬೇಳೆ ಸಂಸ್ಕರಣಾ ಕೇಂದ್ರಗಳಾಗಿವೆ ಎಂದು ಅವರು ಹೇಳಿದರು.

ಉತ್ತಮ ಮಳೆಯಿಂದಾಗಿ, ರೈತರು ಕಳೆದ ವರ್ಷ ಹೆಚ್ಚು ತೊಗರಿ ಬೇಳೆಯನ್ನು ಬಿತ್ತಿದರು ಮತ್ತು ಈಗ ಅದರ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ನಾವು ಸಗಟು ವ್ಯಾಪಾರಿಗಳು ನಷ್ಟ ಅನುಭವಿಸಿದರೂ, ಚಿಲ್ಲರೆ ವ್ಯಾಪಾರಿಗಳು ಅದನ್ನು ಸ್ವಲ್ಪ ನಿಧಾನವಾಗಿ ಮಾಡುತ್ತಾರೆ ಎಂದು ಹೇಳಿದ್ದಾರೆ.

ಎಫ್‌ಕೆಸಿಸಿಐನ ಹಿಂದಿನ ಅಧ್ಯಕ್ಷ ಮತ್ತು ಪ್ರಮುಖ ತುರ್ ದಾಲ್ ವ್ಯಾಪಾರಿ ರಮೇಶ್ ಚಂದ್ರ ಲಹೋಟಿ, ಮಾತನಾಡಿ"ಅಡುಗೆ ಭಕ್ಷ್ಯಗಳಲ್ಲಿ ಬಳಸುವ ಪ್ರಮುಖ ಘಟಕಾಂಶವಾದ ಚನ್ನಾ ದಾಲ್ ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ 100 ರಿಂದ 110 ರೂ.ಗಳಿಗೆ ಮಾರಾಟವಾಗಿತ್ತು. ಇಂದು, ಬೆಂಗಳೂರಿನಲ್ಲಿ ನಾವು ಅದನ್ನು 72 ರಿಂದ 85 ರೂ.ಗಳಿಗೆ ಮಾರಾಟ ಮಾಡುತ್ತಿದ್ದೇವೆ. ತುರ್ ದಾಲ್ ಬೆಲೆ ಇಳಿಕೆಯೊಂದಿಗೆ ಎಲ್ಲರಿಗೂ ಯುಗಾದಿ ಉಡುಗೊರೆ ಸಿಕ್ಕಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT