ರಾಜ್ಯ

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ, ಐವರು ಆರೋಪಿಗಳ ವಶ?

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದ ಆರೋಪಿಗಳು ಸ್ವಿಪ್ಟ್ ಕಾರಿನಲ್ಲಿ ಪರಾರಿಯಾಗಿದ್ದರು. ಕಾರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ, ಹತ್ಯೆಗೆ ಬಳಸಿದ್ದ ಆಯುಧಗಳನ್ನು ಕಾರಿನಲ್ಲಿಯೇ ಬಿಸಾಡಿ ಹೋಗಿದ್ದರು. ಕೊಲೆ ಬಳಿಕ ಆರೋಪಿಗಳು ಮಂಗಳೂರಿನಲ್ಲಿಯೇ ಅವಿತು ಕುಳಿತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಆಗಾಗಲೇ ಆರೋಪಿಗಳನ್ನು ಗುರುತಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸರು ಸರ್ಕಾರಕ್ಕೆ ಮಾಹಿತಿ ನೀಡುವ ಸಾಧ್ಯತೆ ಇದೆ.

ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ತಲ್ವಾರ್​ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರೌಡಿಶೀಟರ್ ಸುಹಾಸ್ ಶೆಟ್ಟಿಯು ಸುರತ್ಕಲ್​ನ ಫಾಜಿಲ್ ಕೊಲೆ ಕೇಸ್​ನ​ ಪ್ರಮುಖ ಆರೋಪಿಯಾಗಿದ್ದನು. ನಿನ್ನೆಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಎಂಬುವವರನ್ನು 2022ರ ಜುಲೈ 26ರಂದು ಹತ್ಯೆ ಮಾಡಿದ ಘಟನೆಯನ್ನು ನೆನಪಿಸುತ್ತದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದು, ಪ್ರಕರಣ ವಿಚಾರಣೆ ಇನ್ನೂ ನಡೆಯುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2 ದಿನ ಬಳಿಕ ಜುಲೈ 28ರಂದು ಫಾಜಿಲ್​ನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ‌ ಪ್ರಮುಖ ಆರೋಪಿಯಾಗಿದ್ದನು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಸಂಘರ್ಷ: ಚಿಂತೆ ಬೇಡ.. Hormuz ನಲ್ಲಿ ಭಾರತಕ್ಕೆ ತೊಂದರೆ ಇಲ್ಲ: ಜೈಶಂಕರ್ ಗೆ Araghchi ಭರವಸೆ!

NEET-UG 2026 ಪ್ರಶ್ನೆ ಪತ್ರಿಕೆ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ 'ಲೆಕ್ಚರರ್' ಬಂಧಿಸಿದ ಸಿಬಿಐ!

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

IPL 2026: CSK ಮತ್ತೊಂದು ಸೋಲು, ಪ್ಲೇಆಫ್ ಹಾದಿ ಕಠಿಣ; LSG ಗೆ 7 ವಿಕೆಟ್ ಭರ್ಜರಿ ಜಯ

ಕರ್ನಾಟಕದಲ್ಲಿ ಜೂನ್ 20 ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ! ಹೇಗೆ ಮಾಡಲಾಗುತ್ತದೆ?

SCROLL FOR NEXT