ಸಾಂದರ್ಭಿಕ ಚಿತ್ರ 
ರಾಜ್ಯ

ಮುಂಗಾರು ಆರ್ಭಟ: ಈ ಬಾರಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

ಜೂನ್ 1 ರಂದು ಮುಂಗಾರು ಪ್ರವೇಶಿಸಬೇಕಿತ್ತು, ಆದರೆ ಐದು ದಿನ ಮುಂಚಿತವಾಗಿ, ಮೇ 27 ರಂದು ಕೇರಳ ಕರಾವಳಿಯನ್ನು ಮಾನ್ಸೂನ್ ಅಪ್ಪಳಿಸುವ ಸಾಧ್ಯತೆಯಿದೆ.

ಬೆಂಗಳೂರು: ಭಾರತದಾದ್ಯಂತ ಈ ನೈಋತ್ಯ ಮಾನ್ಸೂನ್‌ನಲ್ಲಿ ಸಾಮಾನ್ಯಕ್ಕಿಂತ ಶೇ.5 ರಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದಾರೆ. ಆದರೆ ಕರ್ನಾಟಕಕ್ಕೆ, ವಿಶೇಷವಾಗಿ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಬಗ್ಗೆ ಕರ್ನಾಟಕದ ಹವಾಮಾನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜೂನ್ 1 ರಂದು ಮುಂಗಾರು ಪ್ರವೇಶಿಸಬೇಕಿತ್ತು, ಆದರೆ ಐದು ದಿನ ಮುಂಚಿತವಾಗಿ, ಮೇ 27 ರಂದು ಕೇರಳ ಕರಾವಳಿಯನ್ನು ಮಾನ್ಸೂನ್ ಅಪ್ಪಳಿಸುವ ಸಾಧ್ಯತೆಯಿದೆ. ಜಾಗತಿಕ ಹವಾಮಾನ ಅಂಶಗಳ ಆಧಾರದ ಮೇಲೆ ಇಡೀ ದೇಶಕ್ಕೆ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಲಾಗಿದೆ ಎಂದು ಐಎಂಡಿ-ಬೆಂಗಳೂರಿನ ನಿರ್ದೇಶಕ ಎನ್. ಪುವಿಯರಸನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚುವರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹೆಚ್ಚುತ್ತಿರುವ ತಾಪಮಾನ ಮತ್ತು ನಗರೀಕರಣದ ಎಫೆಕ್ಟ್ ಮಳೆಯ ಪ್ರಮಾಣದಲ್ಲಿಯೂ ಸಹ ಪಾತ್ರವಹಿಸುತ್ತವೆ ಎಂದಿದ್ದಾರೆ.

ಮಳೆಯ ಮೇಲೆ ಪ್ರಭಾವ ಬೀರುವಲ್ಲಿ ತಾಪಮಾನ ಏರಿಕೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪುವಿಯರಸನ್ ತಿಳಿಸಿದ್ದಾರೆ. ಕಳೆದ ವರ್ಷ, ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ತಾಪಮಾನವು ಮೇ ತಿಂಗಳಲ್ಲಿ ಸುಮಾರು 36 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ವರ್ಷ, ಇದು 33 ಡಿಗ್ರಿ ಸೆಲ್ಸಿಯಸ್ ಇದೆ. ಪ್ರಸ್ತುತ, ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ, ಆದರೆ ಬೆಂಗಳೂರಿನಲ್ಲಿ ಅಷ್ಟೊಂದು ಹೆಚ್ಚು ಮಳೆಯಾಗಿಲ್ಲ.

ಬೆಳಗಾವಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕರ್ನಾಟಕವು ಮೇ 2023 ರಲ್ಲಿ 86.4 ಮಿಮೀ ಮಳೆಯನ್ನು ಕಂಡಿದೆ, ಇದು ಸಾಮಾನ್ಯ ಮುನ್ಸೂಚನೆಯ 73.7 ಮಿಮೀ ಮಳೆಯಾಗಿದೆ. ಮೇ 2024 ರಲ್ಲಿ, ರಾಜ್ಯದಲ್ಲಿ 118 ಮಿಮೀ ಮಳೆಯಾಗಿತ್ತು.

ಇದಲ್ಲದೆ, ಬೆಂಗಳೂರಿನಲ್ಲಿ ಮೇ 2024 ರಲ್ಲಿ 181.5 ಮಿಮೀ ಮತ್ತು ಮೇ 2023 ರಲ್ಲಿ 305.4 ಮಿಮೀ ಮಳೆಯಾಗಿತ್ತು. ಹವಾಮಾನ ತಜ್ಞ ಪ್ರೊ. ಎಂ.ಬಿ. ರಾಜೇಗೌಡ ಅವರ ಪ್ರಕಾರ, ರಾಜ್ಯದಲ್ಲಿ ಹೆಚ್ಚಿದ ಮಳೆಯನ್ನು ರೈತರು ಮತ್ತು ಕೃಷಿ ಪ್ರದೇಶಗಳು ಹೆಚ್ಚಿನ ಕೃಷಿಗಾಗಿ ಸದುಪಯೋಗಪಡಿಸಿಕೊಳ್ಳಬೇಕು. ರೈತರು ದೀರ್ಘಾವಧಿಯ ಬೆಳೆಗಳಿಗೆ ಹೋಗಬಹುದು ಎಂದು ಅವರು ಸೂಚಿಸಿದ್ದಾರೆ.

ಬೆಂಗಳೂರಿನ ಸನ್ನಿವೇಶದ ಬಗ್ಗೆ ವಿವರಿಸಿದ ಅವರು, ಹೆಚ್ಚಿದ ಶಾಖ ಪದರಗಳು ಹೆಚ್ಚಿನ ಮೋಡಗಳನ್ನು ಸೆಳೆಯುತ್ತವೆ. "1950 ರ ದಶಕದಲ್ಲಿ 600 ಮಿ.ಮೀ ಮಳೆಯಾಗಿತ್ತು, ಈಗ ಅದು 1,000 ಮಿ.ಮೀ. ಆಗಿದೆ. ಬೇಸಿಗೆಯ ಉಷ್ಣತೆ ಹೆಚ್ಚಾಗಿದೆ, ಮತ್ತು ಮಳೆಯೂ ಸಹ ಹೆಚ್ಚಾಗಿದೆ" ಎಂದು ಅವರು ವಿವರಿಸಿದರು.

ಆದಾಗ್ಯೂ, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಪೂರ್ವ ಮಾನ್ಸೂನ್ ಮಳೆ ಈಗಾಗಲೇ ಪ್ರಾರಂಭವಾಗಿದೆ ಎಂದು ಹೇಳಿದರು. ನಗರ ಪ್ರದೇಶಗಳಲ್ಲಿ ತೀವ್ರ ಮಳೆ ಮತ್ತು ಪ್ರವಾಹವು ಈಗ ಹೊಸ ಸಾಮಾನ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿಯೂ ಸಹ ಭಾರೀ ಮಳೆಯಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT