ಪ್ರೊ. ಗೋವಿಂದರಾವ್ ಸಮಿತಿ 
ರಾಜ್ಯ

ಪ್ರಾದೇಶಿಕ ಅಸಮತೋಲನ ಪರಿಹಾರ ಸಮಿತಿ ತಿಂಗಳಾಂತ್ಯದೊಳಗೆ ವರದಿ ಸಲ್ಲಿಕೆ

2002 ರಲ್ಲಿ, ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ಪರಿಹಾರ ಸಮಿತಿಯು 35 ತಾಲ್ಲೂಕುಗಳನ್ನು ಹಿಂದುಳಿದವು, 40 ತಾಲ್ಲೂಕುಗಳನ್ನು ಹೆಚ್ಚು ಹಿಂದುಳಿದವು ಮತ್ತು 39 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದವು ಎಂದು ಗುರುತಿಸಿತ್ತು.

ಬೆಂಗಳೂರು: ಅರ್ಥಶಾಸ್ತ್ರಜ್ಞ ಪ್ರೊ. ಎಂ. ಗೋವಿಂದ್ ರಾವ್ ನೇತೃತ್ವದ ಕರ್ನಾಟಕ ಪ್ರಾದೇಶಿಕ ಅಸಮತೋಲನ ಪರಿಹಾರ ಸಮಿತಿಯು ಈ ತಿಂಗಳ ಅಂತ್ಯದ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಮಾರ್ಚ್ 2024 ರಲ್ಲಿ ರಚಿಸಲಾದ ಸಮಿತಿಯ ಅಧಿಕಾರಾವಧಿಯು ನವೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ.

2002 ರಲ್ಲಿ, ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ಪರಿಹಾರ ಸಮಿತಿಯು 35 ತಾಲ್ಲೂಕುಗಳನ್ನು ಹಿಂದುಳಿದವು, 40 ತಾಲ್ಲೂಕುಗಳನ್ನು ಹೆಚ್ಚು ಹಿಂದುಳಿದವು ಮತ್ತು 39 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದವು ಎಂದು ಗುರುತಿಸಿತ್ತು.

ಈ ತಾಲ್ಲೂಕುಗಳಲ್ಲಿ ಹೆಚ್ಚಿನವು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಸೇರಿವೆ. ಶಿಫಾರಸುಗಳನ್ನು 2007 ರಲ್ಲಿ ಜಾರಿಗೆ ತರಲಾಯಿತು. ಗೋವಿಂದರಾವ್ ಸಮಿತಿಯು ತಲಾ ಆದಾಯ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಸೇವೆಗಳು, ಸಾಮಾಜಿಕ ಮೂಲಸೌಕರ್ಯ ಮತ್ತು ಕೃಷಿಯನ್ನು ಆಧರಿಸಿ 236 ತಾಲ್ಲೂಕುಗಳನ್ನು ನಿರ್ಣಯಸಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಆರು ಜಿಲ್ಲೆಗಳ ಸರಾಸರಿ ತಲಾ ಆದಾಯವು ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಶಿಕ್ಷಣ ಮತ್ತು ಆರೋಗ್ಯದಂತಹ ಅಂಶಗಳನ್ನು ಪರಿಗಣಿಸಿದಾಗ, ರಾಜ್ಯದ ಕೆಲವು ಭಾಗಗಳು ಉತ್ತಮ ಫಲಿತಾಂಶಗಳನ್ನು ಹೊಂದಿಲ್ಲ ಎಂಬುದು ತಿಳಿದು ಬಂದಿದೆ.

ನಂಜುಂಡಪ್ಪ ವರದಿಯಲ್ಲಿ ಬಳಸಲಾದ ದೂರವಾಣಿ ಸಂಪರ್ಕ, ಅಂಚೆ ಕಚೇರಿ ಪ್ರವೇಶದಂತಹವುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ ಎಂದು ಮೂಲಗಳು ತಿಳಿಸಿವೆ. 1991 ರ ಜನಗಣತಿ ವರದಿಯನ್ನು ಆಧರಿಸಿದ ಕೆಲವು ಸೂಚಕಗಳು ಹಳೆಯದಾಗಿವೆ. ರಾವ್ ಸಮಿತಿಯು ವಿಧಾನವನ್ನು ಪರಿಷ್ಕರಿಸಿದೆ ಎಂದು ಹೇಳಲಾಗಿದೆ.

ನಾವು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿದ್ದೇವೆ, ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಅನೇಕ ಜನರನ್ನು ಭೇಟಿ ಮಾಡಿದ್ದೇವೆ, ವಿವಿಧ ಹಂತಗಳಲ್ಲಿನ ಡೇಟಾವನ್ನು ಪಡೆಯಬೇಕಾಗಿತ್ತು, ವಿಶ್ಲೇಷಿಸಬೇಕಾಗಿತ್ತು ಮತ್ತು ಅರ್ಥೈಸಿಕೊಳ್ಳಬೇಕಾಗಿತ್ತು ಹೀಗಾಗಿ ಹೆಚ್ಚುವರಿ ಸಮಯ ತೆಗೆದುಕೊಂಡಿದ್ದಾರೆ ಎಂದು ಗೋವಿಂದ್ ರಾವ್ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ವಿಶಾಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿಕೆ.ಶಿವಕುಮಾರ್

MES ಮುಖಂಡನ ಜೊತೆ ಸೆಲ್ಫಿ; ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಶೀಘ್ರದಲ್ಲೇ ಕ್ರಮ ಎಂದ ಗೃಹ ಸಚಿವ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊ? ಡಿಕೆಶಿಯೋ?: HDK ಪ್ರಶ್ನೆ

ವಿವಿಧ ಕ್ಷೇತ್ರಗಳ ಸಾಧಕರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ; ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್!

ಬೆಳಗಾವಿ: ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಚಾಕು ಇರಿತ; ಇಬ್ಬರ ಸ್ಥಿತಿ ಗಂಭೀರ!

SCROLL FOR NEXT