ಬೆಂಗಳೂರು: 70 ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಕಣ್ಮನ ಸೆಳೆಯುತ್ತಿದೆ.
ಕೆಂಪು ಹಾಗೂ ಹಳದಿ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ವಿಧಾನಸೌಧ ಕನ್ನಡ ಧ್ವಜವನ್ನು ಮೈದಳೆದು ನಿಂತಂತೆ ಭಾಸವಾಗುತ್ತಿದೆ.
ಜನರು ಸೆಲ್ಪಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ. ಬಣ್ಣ-ಬಣ್ಣದ ವಿದ್ಯುತ್ ದೀಪದಿಂದ ವಿಧಾನಸೌಧಕ್ಕೆ ಹೊಸ ಕಳೆಯೇ ಬಂದಂತಾಗಿದೆ.
ಈ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಕನ್ನಡ ನಮ್ಮ ನೆಲದ ಭಾಷೆ ಮಾತ್ರ ಆಗದೆ ಬದುಕಿನ ಭಾಷೆ, ಅನ್ನದ ಭಾಷೆಯಾಗಲಿ ಎನ್ನುವ ಹಾರೈಕೆ ನನ್ನದು ಎಂದಿದ್ದಾರೆ.