ಬೆಂಗಳೂರು: ನಗರದ ಇಪಿಎಫ್‌ಓ ಸಹಕಾರ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಬ್ಯಾಂಕ್ ಕಚೇರಿ ಹಾಗೂ ಆರೋಪಿತ ಅಧಿಕಾರಿಗಳ ಮನೆಗಳ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ನಗದು, ಚಿನ್ನ, ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಹಗರಣದ ಆರೋಪಿಗಳ ನಿವಾಸಗಳು ಮತ್ತು ರಿಚ್ಮಂಡ್ ವೃತ್ತದ ಬಳಿಯ ಸೊಸೈಟಿ ಕಚೇರಿಯಲ್ಲಿ ಶೋಧ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿಯ ಸಮಯದಲ್ಲಿ, ಪೊಲೀಸರು ಅರ್ಧದಷ್ಟು ಚಿನ್ನದ ಆಭರಣಗಳು, ನಗದು, ದಾಖಲೆಗಳು ಮತ್ತು ಹೂಡಿಕೆ ಪತ್ರಗಳು, 7 ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪರಿಶೀಲನೆ ವೇಳೆ ದುರುಪಯೋಗಪಡಿಸಿಕೊಂಡ ಹಣವನ್ನು ಬಹು ಖಾತೆಗಳಿಗೆ ವರ್ಗಾಯಿಸಿ, ಚಿನ್ನ, ಆಸ್ತಿ ರೂಪದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು, ಹಗರಣವನ್ನು ಮುಚ್ಚಿಹಾಕಲು ಕುಶಲತೆಯಿಂದ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಹಗರಣ ಸಂಬಂಧ ಸೊಸೈಟಿಯ ಸಿಇಒ ಜಿ. ಗೋಪಿನಾಥ್ ಮತ್ತು ಸೊಸೈಟಿಯ ಸಿಇಒ ಜಿ. ಗೋಪಿನಾಥ್ ಮತ್ತು ಪೊಲೀಸ್ ಕಸ್ಟಡಿ ಬುಧವಾರ ಪೂರ್ಣಗೊಂಡಿದ್ದು, ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರಪಡಿಸಲಾಯಿತು. ನ್ಯಾಯಾಲಯವು ಇಬ್ಬರನ್ನೂ ನವೆಂಬರ್ 10 ರವರೆಗೆ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೀಗ ಪೊಲೀಸರು ತಲೆಮರೆಸಿಕೊಂಡಿರುವ ಇತರ ಆರೋಪಿಗಳನ್ನು ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.
300 ಕ್ಕೂ ಹೆಚ್ಚು ಠೇವಣಿದಾರರು ಮೂರು ತಿಂಗಳಿನಿಂದ ಪಾವತಿಗಳನ್ನು ಸ್ವೀಕರಿಸಲು ವಿಫಲವಾದ ನಂತರ ಹಗರಣ ಬೆಳಕಿಗೆ ಬಂದಿತ್ತು.
ಬಳಿಕ ಠೇವಣಿದಾರರು ನಡೆಸಿದ ಆಂತರಿಕ ತನಿಖೆಯಲ್ಲಿ ತಮ್ಮ ಖಾತೆಗಳಿಂದ ಸುಮಾರು 70 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂಬುದಾಗಿ ತಿಳಿದುಬಂದಿತ್ತು.