ಬಸನಗೌಡ ಪಾಟೀಲ್ ಯತ್ನಾಳ್ 
ರಾಜ್ಯ

'ಮದರಸಾ ನಿಷೇಧ, ಮೌಲಾನಗಳು ಜೈಲಿಗೆ.. ಮುಸ್ಲಿಮರ ಸಮಗ್ರ ನಾಗರಿಕ ನೋಂದಣಿ': ಕೇಂದ್ರ ಸರ್ಕಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ

ಮದರಸಾ ನಿಷೇಧ, ಮೌಲಾನಗಳು ಜೈಲಿಗೆ.. ಮುಸ್ಲಿಮರ ಸಮಗ್ರ ನಾಗರಿಕ ನೋಂದಣಿ ಅಂಶಗಳೂ ಕೂಡ ಸೇರಿವೆ.

ಬೆಂಗಳೂರು: ದೆಹಲಿಯಲ್ಲಿ 12 ಮಂದಿಯ ಸಾವಿಗೆ ಕಾರಣವಾದ ಬಾಂಬ್ ಸ್ಫೋಟದ ಬೆನ್ನಲ್ಲೇ ದೇಶದಲ್ಲಿ ಶಾಂತಿ ಪುನಃಸ್ಥಾಪನೆಗೆ ಕೆಲ ಕಠಿಣ ಕ್ರಮಗಳನ್ನು ಅನುಸರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹೌದು.. ದೆಹಲಿಯ ಕೆಂಪುಕೋಟೆಯಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರು. ಈ ಹಿಂದೆ ಹರ್ಯಾಣದ ಫರಿದಾಬಾದ್ ನಲ್ಲಿ ಪತ್ತೆಯಾಗಿದ್ದ ಸುಮಾರು 3 ಸಾವಿರ ಕೆಜಿ ಸ್ಫೋಟಕ ಪತ್ತೆ ಪ್ರಕರಣದ ಆರೋಪಿಗಳಾದ ವೈದ್ಯರಿಂದಲೇ ದೆಹಲಿ ಸ್ಫೋಟ ಸಂಭವಿಸಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ಬೆಳವಣಿಗೆ ಬೆನ್ನಲ್ಲೇ ಕರ್ನಾಟಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೇಶದಲ್ಲಿ ಶಾಂತಿ ಸ್ಥಾಪನೆಗೆ ಕೆಲ ಕಠಿಣ ಕ್ರಮಗಳನ್ನು ಅನುಸರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳ ಪೈಕಿ ಮದರಸಾ ನಿಷೇಧ, ಮೌಲಾನಗಳು ಜೈಲಿಗೆ.. ಮುಸ್ಲಿಮರ ಸಮಗ್ರ ನಾಗರಿಕ ನೋಂದಣಿ ಅಂಶಗಳೂ ಕೂಡ ಸೇರಿವೆ.

ಬಸನಗೌಡ ಪಾಟೀಲ್ ಹೇಳಿದ್ದೇನು?

ಗೃಹ ಸಚಿವರಾದ ಆದರ್ಶನೀಯ ಅಮಿತ್ ಶಾ ಅವರಲ್ಲಿ ನಾನು ಒತ್ತಾಯಿಸುತ್ತೇನೆ. ದೇಶದಲ್ಲಿ ಶಾಂತಿ ಪುನಃಸ್ಥಾಪನೆಗೆಸಲು ತಕ್ಷಣ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು.

  • ಮಕ್ಕಳನ್ನು ತೀವ್ರಗಾಮಿಗಳಾಗಿ ಪರಿವರ್ತಿಸುವ ಎಲ್ಲಾ ಮದರಸಾಗಳನ್ನು ನಿಷೇಧಿಸಿ

  • ಭಾರತ ವಿರೋಧಿ ಸಿದ್ಧಾಂತಗಳನ್ನು ಬೋಧಿಸುವ ಮೌಲಾನಾಗಳನ್ನು ನಿರ್ದಯವಾಗಿ ಜೈಲಿಗೆ ಹಾಕಿ

  • ಪತ್ರಕರ್ತರು, ರಾಜಕಾರಣಿಗಳು, ಸಾಹಿತಿಗಳು ಸೇರಿದಂತೆ ಭಯೋತ್ಪಾದಕರು ಮತ್ತು ಅವರ ಪರಿಸರ ವ್ಯವಸ್ಥೆಯ ವಿರುದ್ಧ ಮೃದು ನಿಲುವು ಹೊಂದಿರುವವರ ವಿರುದ್ಧ 24x7 ಕಣ್ಗಾವಲು.

  • ಪಾಕಿಸ್ತಾನಿ ನಿರೂಪಣೆಯನ್ನು ಪ್ರಚಾರ ಮಾಡುವವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಡಿಲೀಟ್ ಮಾಡಿ

  • ಮುಸ್ಲಿಮರಿಗೆ ಸಮಗ್ರ ನಾಗರಿಕ ನೋಂದಣಿ

  • ಮಸೀದಿ ಧರ್ಮೋಪದೇಶಗಳನ್ನು ದಾಖಲಿಸಿ

  • ವಿದೇಶಗಳಲ್ಲಿ ನೆಲೆಸಿರುವ ಆದರೆ ಭಾರತ ವಿರೋಧಿ ನೀತಿಯನ್ನು ಬೆಂಬಲಿಸುವ ಮತ್ತು ಪ್ರಚಾರ ಮಾಡುವ ಭಾರತೀಯರ OCI ಕಾರ್ಡ್‌ಗಳನ್ನು ರದ್ದುಗೊಳಿಸಿ

  • ಭಾರತ ವಿರೋಧಿ ನೀತಿಯನ್ನು ಬೆಂಬಲಿಸುವ ಅಥವಾ ಪ್ರಚಾರ ಮಾಡುವ NGOಗಳು ಮತ್ತು ಕಾರ್ಪೊರೇಟ್‌ಗಳ ಪರವಾನಗಿಗಳನ್ನು ರದ್ದುಗೊಳಿಸಿ

  • ಭಯೋತ್ಪಾದಕರಿಗೆ ಹಣಕಾಸು ಮತ್ತು ಕಾನೂನು ನೆರವು ನೀಡುತ್ತಿರುವ ಹಲಾಲ್ ಪ್ರಮಾಣೀಕರಣ ಸಂಸ್ಥೆಗಳನ್ನು ನಿಷೇಧಿಸಿ

  • ವೈದ್ಯಕೀಯ ವೃತ್ತಿಪರರು ಮತ್ತು ಇತರ ವೃತ್ತಿಪರರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವುದು ಕಂಡುಬಂದರೆ ಅವರ ಪರವಾನಗಿಗಳನ್ನು ರದ್ದುಗೊಳಿಸಿ

  • ಭಯೋತ್ಪಾದಕರು ಮತ್ತು ಅವರ ಸ್ಲೀಪರ್ ಸೆಲ್‌ಗಳಿಗೆ ಆಶ್ರಯ ನೀಡುವವರ ಕಟ್ಟಡಗಳನ್ನು ಕೆಡವಿ

  • ಆಧಾರ್ ಕಾರ್ಡ್‌ಗಳನ್ನು ಪಡೆಯುವ ವ್ಯವಸ್ಥೆಯನ್ನು ಬಲಪಡಿಸಿ

  • ಭಾರತ ವಿರೋಧಿ ಘೋಷಣೆಗಳು, ರ್ಯಾಲಿಗಳು, ಅಭಿಯಾನಗಳು, ಆನ್‌ಲೈನ್ ದ್ವೇಷ ಇತ್ಯಾದಿಗಳಿಗಾಗಿ ವಿದ್ಯಾರ್ಥಿಗಳನ್ನು ನಿರ್ದಯವಾಗಿ ಕ್ರಮ ಕೈಗೊಳ್ಳಿ

ಶತ್ರು ನಿಮ್ಮ ಮೇಲೆ ಮೇಲುಗೈ ಸಾಧಿಸುವ ಮೊದಲು ನೀವೇ ಶತ್ರುವಿನ ಮೇಲೆ ಮೇಲುಗೈ ಸಾಧಿಸಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಆಪರೇಷನ್ ಸಿಂದೂರ್ ಗೆ ಸೇಡು... 20 ಟೈಮರ್, 3000 ಕೆಜಿ ಸ್ಫೋಟಕ.. ಉಗ್ರರ ಯೋಜನೆ ಕಾರ್ಯಗತವಾಗಿದ್ದರೇ ಇತಿಹಾಸದ ಅತೀ ದೊಡ್ಡ 'ಭಯೋತ್ಪಾದಕ ದಾಳಿ'!

Delhi Red Fort blast: ಸ್ಪೂಟಕ್ಕೂ ಮುನ್ನ 3 ಗಂಟೆ ಕಾರು ಪಾರ್ಕಿಂಗ್! ನಿರ್ಣಾಯಕ 'ಮೂರು ಆಯಾಮ'ಗಳಲ್ಲಿ ಪೊಲೀಸರ ತನಿಖೆ

Delhi Blast: ಟೋಲ್ ಪ್ಲಾಜಾದಲ್ಲಿ 'ಸೂಸೈಡ್ ಬಾಂಬರ್'; ಹೊಸ CCTV ದೃಶ್ಯಾವಳಿ ಪತ್ತೆ..! Video

ಮತಾಂಧತೆಯ ಸ್ಫೋಟ: ಕುಟುಂಬದ ಏಕೈಕ ಆಧಾರಗಳು ಬಲಿ; ಕಣ್ಣೀರ ಕಡಲಲ್ಲಿ ದಿಕ್ಕು ಕಾಣದಂತಾದ ಪೋಷಕರು, ಪತ್ನಿ, ಮಕ್ಕಳು!

Delhi Blast: ಬಂಧಿತ ವೈದ್ಯೆಗೆ 'ಜೈಶ್ ಇ ಮಹಮದ್' ಉಗ್ರ ಸಂಘಟನೆಯ ಮಹಿಳಾ ಘಟಕ ಸ್ಥಾಪನೆ 'ಟಾಸ್ಕ್': ವರದಿ

SCROLL FOR NEXT