ಮಧು ಬಂಗಾರಪ್ಪ 
ರಾಜ್ಯ

KPS ಅಡಿಯಲ್ಲಿ ಸರ್ಕಾರಿ ಶಾಲೆಗಳ ವಿಲೀನ: ತಜ್ಞರ ವಿರೋಧ, ಸಾರ್ವಜನಿಕರಿಂದ ವ್ಯಾಪಕ ಟೀಕೆ

ವಿದ್ಯಾರ್ಥಿಗಳು ಒಂದೇ ಶಾಲೆಯಲ್ಲಿ ಉಳಿಯುವಂತೆ ಎಲ್‌ಕೆಜಿಯಿಂದ 12 ನೇ ತರಗತಿಗೆ ಒಂದೇ ಸೂರಿನಡಿ ಪ್ರಾರಂಭಿಸುವುದಾಗಿ ಅವರು ಪ್ರಸ್ತಾಪಿಸಿದರು. ಶಿಕ್ಷಣವು ದ್ವಿಭಾಷಾ ಮಾಧ್ಯಮದಲ್ಲಿರುತ್ತದೆ ಮತ್ತು ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಆಯ್ಕೆ ಮಾಡಬಹುದು ಎಂದು ಹೇಳಲಾಗಿತ್ತು.

ಬೆಂಗಳೂರು: ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಸ್ (ಕೆಪಿಎಸ್) ಆಗಿ ಮೇಲ್ದರ್ಜೆಗೇರಿಸಬೇಕು ಎಂಬ ಶಿಕ್ಷಣ ಇಲಾಖೆಯ ಘೋಷಣೆಯು ಶಿಕ್ಷಣ ತಜ್ಞರಿಂದ ಟೀಕೆಗೆ ಗುರಿಯಾಗಿದೆ.

ಇಲಾಖೆಯು ಶಾಲೆಯ 5 ಕಿ.ಮೀ. ವ್ಯಾಪ್ತಿಯೊಳಗಿನ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ತಿಂಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿದರು.

ವಿದ್ಯಾರ್ಥಿಗಳು ಒಂದೇ ಶಾಲೆಯಲ್ಲಿ ಉಳಿಯುವಂತೆ ಎಲ್‌ಕೆಜಿಯಿಂದ 12 ನೇ ತರಗತಿಗೆ ಒಂದೇ ಸೂರಿನಡಿ ಪ್ರಾರಂಭಿಸುವುದಾಗಿ ಅವರು ಪ್ರಸ್ತಾಪಿಸಿದರು. ಶಿಕ್ಷಣವು ದ್ವಿಭಾಷಾ ಮಾಧ್ಯಮದಲ್ಲಿರುತ್ತದೆ ಮತ್ತು ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಆಯ್ಕೆ ಮಾಡಬಹುದು ಎಂದು ಹೇಳಲಾಗಿತ್ತು.

ಬೆಂಗಳೂರು ದಕ್ಷಿಣದ ಚನ್ನಪಟ್ಟಣ ತಾಲ್ಲೂಕಿನಲ್ಲಿರುವ ನಾಲ್ಕು ಉನ್ನತ ಪ್ರಾಥಮಿಕ ಶಾಲೆಗಳು ಮತ್ತು ಮೂರು ಪ್ರಾಥಮಿಕ ಶಾಲೆಗಳನ್ನು ಹೊಂಗನೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ವಿಲೀನಗೊಳಿಸಲಾಗುವುದು ಮತ್ತು ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತ ದಾಖಲೆಗಳಿಂದ ತಿಳಿದು ಬಂದಿದೆ.

ಏಳು ಶಾಲೆಗಳ ವಿಲೀನದ ಕುರಿತು ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರೊಂದಿಗೆ ಸಭೆ ನಡೆಸಲಾಗುವುದು. ಏಳು ಶಾಲೆಗಳನ್ನು ಮುಚ್ಚಿದ ನಂತರ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಅದೇ ರೀತಿ, ಹೊಸ ಕೆಪಿಎಸ್‌ನ 5 ಕಿಮೀ ವ್ಯಾಪ್ತಿಯಲ್ಲಿರುವ 19 ಸರ್ಕಾರಿ ಶಾಲೆಗಳನ್ನು ಮುಚ್ಚಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು ಶಾಲೆಯಾಗಿ ವಿಲೀನಗೊಳಿಸಲಾಗುವುದು.

ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರೊಂದಿಗೆ ಸಭೆ ನಡೆಸಲು ತಿಳಿಸಲಾಗಿದೆ.

ಶಿಕ್ಷಣ ತಜ್ಞ ಡಾ. ನಿರಂಜನರಾಧ್ಯ ವಿ.ಪಿ. ಮಾತನಾಡಿ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಮುಚ್ಚಿ ಸಾರ್ವಜನಿಕ ಶಾಲೆಗಳನ್ನು ಪ್ರಾರಂಭಿಸುವ ಸರ್ಕಾರದ ಕ್ರಮವನ್ನು ಟೀಕಿಸಿದರು. ಅಸ್ತಿತ್ವದಲ್ಲಿರುವ ಶಾಲೆಗಳಿಗೆ ಗುಣಮಟ್ಟದ ಮೂಲಸೌಕರ್ಯ, ಶಿಕ್ಷಣ ಮತ್ತು ಅರ್ಹ ಶಿಕ್ಷಕರನ್ನು ಒದಗಿಸುವ ಬದಲು, ಅವುಗಳನ್ನು ಒಂದೇ ಶಾಲೆಗೆ ವಿಲೀನಗೊಳಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿತ್ತು ಆದರೆ ಈಗ ಅದು ಏನು ಮಾಡುತ್ತಿದೆ? ಎನ್‌ಇಪಿ ಶಾಲೆಗಳ ವಿಲೀನದ ಬಗ್ಗೆ ಮಾತನಾಡುತ್ತದೆ ಎಂದು ಅವರು ಹೇಳಿದರು.

ಕೆಪಿಎಸ್ ಶಾಲೆಗಳಲ್ಲಿ 10 ಮತ್ತು 12 ನೇ ತರಗತಿಯಿಂದ ನಿರ್ಗಮಿಸುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ಆಗುವ ಅಪಾಯಗಳನ್ನು ಬಗ್ಗೆ ತಿಳಿಸಿದ್ದಾರೆ. ಸರ್ಕಾರಿ ಆದೇಶವು 6 ನೇ ತರಗತಿಯಿಂದಲೇ ವೃತ್ತಿಪರ ತರಬೇತಿಯನ್ನು ಪ್ರಾರಂಭಿಸುವ ಬಗ್ಗೆ ಮಾತನಾಡುತ್ತದೆ.

ಪಠ್ಯಕ್ರಮವನ್ನು ಪಿಪಿಪಿ ಮಾದರಿಯಲ್ಲಿ, ಖಾಸಗಿಯವರ ಸಹಯೋಗದೊಂದಿಗೆ ನಡೆಸಲಾಗುವುದು ಮತ್ತು ವೃತ್ತಿಪರ ತರಬೇತಿಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಕೊಪ್ಪಳದ ಸರ್ಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ "ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ 2,000 ಕೋಟಿ ರೂ. ಸಾಲವು ಕರ್ನಾಟಕದ ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್ ಸ್ವಾಧೀನಪಡಿಸಿಕೊಳ್ಳುವ ಸುಲಭ ಮಾರ್ಗ ಆಗಿದೆ. 500 ಕೆಪಿಎಸ್ ಸ್ಥಾಪಿಸುವ ಸರ್ಕಾರದ ನಿರ್ಧಾರವು ಉತ್ತಮವಲ್ಲ, ಅದರ ಬದಲಾಗಿ ಕರ್ನಾಟಕದಲ್ಲಿ ಸಾರ್ವಜನಿಕ ಶಿಕ್ಷಣಕ್ಕೆ ಮರಣದಂಡನೆಯಾಗಿದೆ" ಎಂದು ಹೇಳಿದರು.

ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೆಪಿಎಸ್ ಮಾದರಿಯಲ್ಲಿ ಒಟ್ಟು 482.5 ಕೋಟಿ ರೂ. ವೆಚ್ಚದಲ್ಲಿ 100 ಸರ್ಕಾರಿ ಉರ್ದು ಶಾಲೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜೆಡಿಯು ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆ; ನಾಳೆ ಬಿಹಾರ ನೂತನ ಸಿಎಂ ಆಗಿ ಪ್ರಮಾಣ

'ಯಕ್ಷಗಾನ ಕಲಾವಿದರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: KDA ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕೊಟ್ಟ ಸ್ಪಷ್ಟನೆಯೇನು?

ಮಹಾಯುತಿಯಲ್ಲಿ ಭಿನ್ನಮತ ಸ್ಫೋಟ: ಬಿಜೆಪಿಗೆ ಇನ್ಮುಂದೆ ಏಕನಾಥ್ ಶಿಂಧೆ ಅಗತ್ಯವಿಲ್ಲ; ಮೈತ್ರಿಕೂಟ ತೊರೆಯುವಂತೆ ಮನವಿ

ಉಗ್ರ ಸಂಘಟನೆ ಸೇರಲು ಹೆತ್ತ ಅಮ್ಮ, ಮಲತಂದೆ ಒತ್ತಾಯ: ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ ಮಗ!

Delhi Red Fort blast: ಜವಾಬ್ದಾರಿ ಮರೆತ ಕೆಲ ಮಾಧ್ಯಮಗಳಿಂದ ಸ್ಫೋಟಕ ತಯಾರಿಸುವ ಕುರಿತು ವರದಿ; ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

SCROLL FOR NEXT