ಬೆಂಗಳೂರು ಎಟಿಎಂ ದರೋಡೆ ಪ್ರಕರಣ 
ರಾಜ್ಯ

ATM Robbery: 'ನಾನೇ ಬರ್ಬೇಕು ಅಂದ್ಕೊಡಿದ್ದೆ.. ನೀವೇ ಬಂದ್ರಿ..': ಪೊಲೀಸರ ಬಳಿ ಕಿಂಗ್ ಪಿನ್ ರವಿ ಪತ್ನಿ ಸ್ಫೋಟಕ ಹೇಳಿಕೆ, ರಿಕವರಿ ಹಣ ಏನಾಯ್ತು?

ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದ್ದ 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ರವಿ ಮತ್ತು ಆತನ ಪತ್ನಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ರವಿಯ ಪತ್ನಿಯನ್ನೂ ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆಕೆ ಸ್ಫೋಟಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿದ್ದ 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ರವಿ ಮತ್ತು ಆತನ ಪತ್ನಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣದ ಕಿಂಗ್​ಪಿನ್​ ರವಿ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ರವಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇದೇ ವೇಳೆ ರವಿ ಪತ್ನಿಯನ್ನೂ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ನಾನೇ ಬರ್ಬೇಕು ಅಂದ್ಕೊಡಿದ್ದೆ

ಇನ್ನು ಅಧಿಕಾರಿಗಳ ವಿಚಾರಣೆ ವೇಳೆ ರವಿ ಪತ್ನಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಪ್ರಮುಖವಾಗಿ ಆಕೆಯೇ ಪೊಲೀಸರ ಬಳಿ ಬಂದು ನಡೆದ ವಿಚಾರವನ್ನುಹೇಳಬೇಕು ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ.

'ಪತಿ ಕೃತ್ಯದಲ್ಲಿ ಭಾಗಿಯಾಗಿರೋದನ್ನು ರವಿ ಪತ್ನಿ ಒಪ್ಪಿಕೊಂಡಿದ್ದು, ನಾನೇ ಪೊಲೀಸ್ ಠಾಣೆಗೆ ಬರಬೇಕು ಎಂದುಕೊಂಡಿದ್ದೆ, ನೀವೇ ಬಂದ್ರಿ ಎಂದು ಪೊಲೀಸರ ಜೊತೆಗೆ ಬಂದಿದ್ದಾರೆ.

ಟ್ರಾವೆಲ್ ಏಜೆನ್ಸಿ ಲಾಸ್, ಕೆಲಸ ಇರಲಿಲ್ಲ

ಇನ್ನು ರವಿ ಪತ್ನಿ ಹೇಳಿರುವಂತೆ ಆಕೆಯ ಪತಿ ಹಾಗೂ ಪ್ರಕರಣದ ಕಿಂಗ್ ಪಿನ್ ರವಿ ಬೆಂಗಳೂರಿನಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಲಾಸ್​ ಆಗಿ ಕೆಲಸ ಇಲ್ಲದೆ ಮನೆಯಲ್ಲಿದ್ದರು. ಈ ವೇಳೆ ಏರಿಯಾದ ಹುಡುಗರನ್ನು ಸೇರಿಸಿಕೊಂಡು ರಾಬರಿಗೆ ಸಂಚು ರೂಪಿಸಿ ಹಣ ದರೋಡೆಗೆ ಪ್ಲ್ಯಾನ್ ಮಾಡಿದ್ದರು. ಸದ್ಯ ರವಿ ಬಗ್ಗೆ ಪತ್ನಿಯಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

7.11 ಕೋಟಿ ರೂನಲ್ಲಿ 5.30 ಕೋಟಿ ರೂ. ಮಾತ್ರ ರಿಕವರಿ ಉಳಿದದ್ದು?

ಇನ್ನು ದರೋಡೆ ಪ್ರಕರಣದಲ್ಲಿ ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಕೇಸ್​​ನ ಕಿಂಗ್​ಪಿನ್ (Kingpin)​ ರವಿ ಪತ್ನಿಯನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ದರೋಡೆ ಪ್ರಕರಣದಲ್ಲಿ ಆಂಧ್ರ ಪ್ರದೇಶದಲ್ಲಿ ಪೊಲೀಸರು 5.30 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಹಣಕ್ಕಾಗಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಮಾಸ್ಟರ್ ಮೈಂಡ್ ಅಣ್ಣಪ್ಪ ಕೂಡ ಲಾಕ್

ಅಂತೆಯೇ ಈ ಇಡೀ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್​ಟೇಬಲ್ ಅಣ್ಣಪ್ಪನನ್ನೂ ಕೂಡ ಪೊಲೀಸರು ಲಾಕ್ ಮಾಡಿದ್ದು, ಅಣ್ಣಪ್ಪ ಮತ್ತವನ ಸ್ನೇಹಿತ ಸಿಎಂಎಸ್​ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ನೌಕರ ಕ್ಸೇವಿಯರ್ 7 ಕೋಟಿ ರೂ ಲೂಟಿಯ ಸೂತ್ರದಾರರು ಎನ್ನಲಾಗಿದೆ. ಈ ಇಬ್ಬರೂ ರಾಬರಿ ಪ್ಲ್ಯಾನ್​​ ನ ಮಾಸ್ಟರ್ ಮೈಂಡ್ ಗಳಾಗಿದ್ದಾರೆ.

ರಾಬರಿ ಪ್ಲಾನ್ ನಿಂದು.. ಎಸ್ಕೇಪ್ ಪ್ಲಾನ್ ನಂದು ಎಂದು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ಪೊಲೀಸರ ತನಿಖೆಯಿಂದ ದರೋಡೆಕೋರರ ಪ್ಲಾನ್ ಕೈಕೊಟ್ಟಿದೆ. ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ಒಟ್ಟು 5 ಕೋಟಿ 30 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.

ವಾಟ್ಸಪ್ ಕಾಲ್

ದರೋಡೆಕೊರರು ಎಲ್ಲಿಯೂ ಫೋನ್‌ ಮೂಲಕ ನಾರ್ಮಲ್ ಕಾಲ್‌ನಲ್ಲಿ ಮಾತನಾಡದೇ ವಾಟ್ಸಪ್‌ ಕಾಲ್‌ಗಳಲ್ಲಿ ಮಾತ್ರ ಮಾತನಾಡುತ್ತಿದ್ದರು. ನಾರ್ಮಲ್ ಕಾಲ್ ಮಾತನಾಡಿದರೆ ಸುಲಭವಾಗಿ ಪೊಲೀಸರು ಪತ್ತೆ ಮಾಡ್ತಾರೆ ಅನ್ನೋ ಕಾರಣಕ್ಕೆ ಕಿರಾತಕರು ವಾಟ್ಸಪ್ ಕಾಲ್‌ಗಳಲ್ಲಿ ಮಾತ್ರ ಮಾತನಾಡಿರುವುದು ಕಂಡು ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬೈ ಏರ್ ಶೋ ವೇಳೆ ದುರಂತ; ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು! ತನಿಖೆಗೆ IAF ಆದೇಶ

Asia Cup Rising stars: ಸೂಪರ್ ಓವರ್ ನಲ್ಲಿ ಮುಗ್ಗರಿಸಿದ ಭಾರತ, ವೈಭವ್ ಸೂರ್ಯವಂಶಿಯನ್ನು ಯಾಕೆ ಬ್ಯಾಟಿಂಗ್ ಗೆ ಕಳುಹಿಸಲಿಲ್ಲ? ಅಭಿಮಾನಿಗಳ ಆಕ್ರೋಶ

ಸ್ಥಳೀಯ ಸಂಸ್ಥೆ ಚುನಾವಣೆ: ಮಹಾ ಸಿಎಂ ಫಡ್ನವೀಸ್, ಇಬ್ಬರು ಸಚಿವರ ಸಂಬಂಧಿ ಅವಿರೋಧ ಆಯ್ಕೆ; ಪ್ರತಿಪಕ್ಷ ಕಿಡಿ

ರಾಜ್ಯ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆ; ಶಾಸಕರಿಗೆ ಡಿಸಿಎಂ ಗಾಳ?: ಪರಪ್ಪನ ಅಗ್ರಹಾರಕ್ಕೆ ಡಿಕೆ ಶಿವಕುಮಾರ್ ಭೇಟಿ!

ನಾನು AK 47 ಥರ, ವಿಜಯೇಂದ್ರ ಬದಲಾಗದಿದ್ದರೆ ಹೊಸ ಪಕ್ಷ ಕಟ್ಟುತ್ತೇನೆ: ಯತ್ನಾಳ್

SCROLL FOR NEXT