ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ರಕ್ಷಕರೇ ಭಕ್ಷಕರಾದರೇ ಹೇಗೆ? ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿ, 10 ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು!

ಕಳೆದ ಹತ್ತು ತಿಂಗಳಲ್ಲಿ, 10 ಇನ್ಸ್‌ಪೆಕ್ಟರ್‌ಗಳು ಮತ್ತು 82 ಕಾನ್ಸ್‌ಟೇಬಲ್ ಸಿಬ್ಬಂದಿ ಸೇರಿದಂತೆ ವಿವಿಧ ಶ್ರೇಣಿಯ 124 ಪೊಲೀಸ್ ಸಿಬ್ಬಂದಿಯನ್ನು ದರೋಡೆ, ಭ್ರಷ್ಟಾಚಾರ, ಮಾದಕವಸ್ತು ಮಾರಾಟದಲ್ಲಿ ಕರ್ತವ್ಯ ಲೋಪ ಮತ್ತಿತರ ಅಪರಾಧಗಳಲ್ಲಿ ಭಾಗಿಯಾದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.

ಬೆಂಗಳೂರು: ಇದು 'ಬೇಲಿಯೇ ಎದ್ದು ಹೊಲ ಮೇಯ್ದಂತೆ' 'ರಕ್ಷಕರೇ ಭಕ್ಷಕರಾದರೇ ಹೇಗೆ? ಹೌದು. ಪೊಲೀಸರು ಅಂದ್ರೆ ಅಪರಾಧಿಗಳಲ್ಲಿ ಭಯ ಮತ್ತು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಹುಟ್ಟುಹಾಕುವ ನಿರೀಕ್ಷೆ ಹುಸಿಯಾಗುತಿದ್ದು, ಬೆಂಗಳೂರು ನಗರ ಪೊಲೀಸರು ವಿಶ್ವಾಸಾರ್ಹತೆಯ ಕೊರತೆ ಎದುರಿಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಯ ಭ್ರಷ್ಟಾಚಾರದ ಪ್ರಕರಣಗಳು ಹೊಸದಲ್ಲವಾದರೂ, ಇತ್ತೀಚಿನ ಪ್ರಕರಣಗಳಲ್ಲಿ ಅಧಿಕಾರಿಗಳೇ ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗಿರುವುದು ಕಂಡುಬಂದಿದೆ.

ಕಳೆದ ಹತ್ತು ತಿಂಗಳಲ್ಲಿ, 10 ಇನ್ಸ್‌ಪೆಕ್ಟರ್‌ಗಳು ಮತ್ತು 82 ಕಾನ್ಸ್‌ಟೇಬಲ್ ಸಿಬ್ಬಂದಿ ಸೇರಿದಂತೆ ವಿವಿಧ ಶ್ರೇಣಿಯ 124 ಪೊಲೀಸ್ ಸಿಬ್ಬಂದಿಯನ್ನು ದರೋಡೆ, ಭ್ರಷ್ಟಾಚಾರ, ಮಾದಕವಸ್ತು ಮಾರಾಟದಲ್ಲಿ ಕರ್ತವ್ಯ ಲೋಪ ಮತ್ತಿತರ ಅಪರಾಧಗಳಲ್ಲಿ ಭಾಗಿಯಾದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.

ಪೊಲೀಸರು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಮಾನತುಗೊಂಡವರಲ್ಲಿ 10 ಇನ್ಸ್‌ಪೆಕ್ಟರ್‌ಗಳು, 16 ಸಬ್-ಇನ್‌ಸ್ಪೆಕ್ಟರ್‌ಗಳು, 16 ಸಹಾಯಕ ಸಬ್-ಇನ್‌ಸ್ಪೆಕ್ಟರ್‌ಗಳು, 41 ಹೆಡ್ ಕಾನ್ಸ್‌ಟೇಬಲ್‌ಗಳು ಮತ್ತು 41 ಕಾನ್ಸ್‌ಟೇಬಲ್‌ಗಳು ಸೇರಿದ್ದಾರೆ.

ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು?

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಮತ್ತು ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿಸುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಎಲ್ಲಾ ಜಂಟಿ ಆಯುಕ್ತರು ಮತ್ತು ಪೊಲೀಸ್ ಉಪ ಆಯುಕ್ತರು ತಮ್ಮ ವಿಭಾಗಗಳಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಇಲಾಖಾ ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದ್ದೇನೆ. ಶಿಸ್ತು ಪಾಲಿಸಲು ವಿಫಲರಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ದುಷ್ಕೃತ್ಯ ಅಥವಾ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದಾಗಲೆಲ್ಲಾ ಇಲಾಖಾ ವಿಚಾರಣೆ ನಡೆಸಲಾಗುತ್ತದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದರು.

ಪೊಲೀಸರು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ, DE ಜೊತೆಗೆ FIR ದಾಖಲಿಸಲಾಗುತ್ತದೆ. ಆರೋಪಿ ಅಧಿಕಾರಿಯ ಶ್ರೇಣಿಯನ್ನು ಅವಲಂಬಿಸಿ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಅಪರಾಧದ ಸ್ವರೂಪದ ಆಧಾರದ ಮೇಲೆ, ಶಿಕ್ಷೆಯು ಬದಲಾಗುತ್ತದೆ, ಸೇವೆಯಿಂದ ವಜಾಗೊಳಿಸುವುದು ಅಥವಾ ವಜಾಗೊಳಿಸುವುದರಿಂದ ಹಿಡಿದು ಬಡ್ತಿ ಕಡಿತ ಅಥವಾ ಕಡ್ಡಾಯ ರಜೆ ಮತ್ತಿತರ ಶಿಕ್ಷೆಯಾಗುತ್ತದೆ. ಸುಮಾರು ಶೇ.90 ರಷ್ಟು ಅಮಾನತುಗಳು ಕರ್ತವ್ಯ ಲೋಪದಿಂದಾಗಿವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಎಂ ಕುರ್ಚಿ ಗುದ್ದಾಟ: ಖರ್ಗೆ ಬೆಂಗಳೂರಿನಲ್ಲಿದ್ದರೂ ರಾತ್ರೋರಾತ್ರಿ ದೆಹಲಿಗೆ ತೆರಳಿದ ಡಿಕೆಶಿ ಬಣದ ಮೂರನೇ ಬ್ಯಾಚ್! ತುರ್ತು ಸಭೆಗೆ ಒತ್ತಡ

ಪವರ್ ಶೇರಿಂಗ್ ಫೈಟ್ ಮೆಗಾ ಸೀರಿಯಲ್: ಉ.ಕರ್ನಾಟಕ ಶಾಸಕರ ಜೊತೆ ಯತೀಂದ್ರ ನಂಬರ್‌ ಗೇಮ್‌; ಡಿಕೆಶಿ ಜತೆ ಸಂಧಾನಕ್ಕೆ ಜಾರ್ಜ್‌ ಯತ್ನ!

ಸಿಎಂ ಕುರ್ಚಿಗಾಗಿ ಗುದ್ದಾಟ: ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರ, ಸಚಿವ ಸ್ಥಾನಕ್ಕೆ ಕೋಟಿಗಟ್ಟಲೆ ಡೀಲ್, ಏನಿದು ಛಲವಾದಿ ನಾರಾಯಣ ಸ್ವಾಮಿ ಆರೋಪ?

ಯಾರೋ ಒಬ್ಬರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ: ಹಲವರ ಪರಿಶ್ರಮವಿದೆ; ಡಿಕೆಶಿಗೆ ಸತೀಶ್ ಜಾರಕಿಹೊಳಿ ಟಾಂಗ್

ಸಿಎಂ ಸ್ಥಾನದಿಂದ ಸಿದ್ದು ಕೆಳಗಿಳಿಸುವ ಪ್ರಯತ್ನ: 'ಬೆಂಕಿಯೊಂದಿಗೆ ಸರಸ' ಬೇಡ- ವಾಟಾಳ್ ನಾಗರಾಜ್ ಎಚ್ಚರಿಕೆ!

SCROLL FOR NEXT