ಅಗ್ನಿ ಅವಘಡದ ದೃಶ್ಯ 
ರಾಜ್ಯ

ವಿಜಯಪುರ: ಸಿಲಿಂಡರ್ ಸ್ಫೋಟದಿಂದ ಗೂಡಂಗಡಿಗಳು ಸುಟ್ಟು ಕರಕಲು

ಕಳೆದ ತಡರಾತ್ರಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಐದು ತಳ್ಳುಗಾಡಿಗಳು ಮತ್ತು ರಟ್ಟಿನ ಪೆಟ್ಟಿಗೆಗಳನ್ನು ಸಂಗ್ರಹಿಸಿದ್ದ ಗೋದಾಮು ಸುಟ್ಟು ಕರಕಲಾಗಿದೆ. ನಗರದ ಲಿಂಗದಗುಡಿ ರಸ್ತೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ವಿಜಯಪುರ: ಕಳೆದ ತಡರಾತ್ರಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಐದು ತಳ್ಳುಗಾಡಿಗಳು ಮತ್ತು ರಟ್ಟಿನ ಪೆಟ್ಟಿಗೆಗಳನ್ನು ಸಂಗ್ರಹಿಸಿದ್ದ ಗೋದಾಮು ಸುಟ್ಟು ಕರಕಲಾಗಿದೆ. ನಗರದ ಲಿಂಗದಗುಡಿ ರಸ್ತೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ತೆರೆದ ಪ್ರದೇಶದಲ್ಲಿ ಈ ಅಂಗಡಿಗಳಿತ್ತು. ತೆರೆದ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದರಿಂದ ಯಾವುದೇ ಸಾವುನೋವು ಅಥವಾ ಗಾಯದ ವರದಿಯಾಗಿಲ್ಲ.

ಮೂಲಗಳ ಪ್ರಕಾರ, ಬೆಂಕಿಗೆ ಕಾರಣ ಬಹುಶಃ ಸಿಗರೇಟ್ ಕಿಡಿ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ರಾತ್ರಿ 11:00ರ ಸುಮಾರಿಗೆ ಘಟನೆ ನಡೆದಿದ್ದು ಬೆಂಕಿಯಿಂದಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು ಅಂಗಡಿಗಳು ಸುಟ್ಟು ಕರಕಲಾಗಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕನಿಷ್ಠ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಹತ್ತಿರದ ಮನೆಯ ಗೋಡೆಗೆ ಹಾನಿಯಾಗಿದ್ದು ಮಾತ್ರವಲ್ಲದೆ ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ಇರಿಸಲಾಗಿದ್ದ ರಟ್ಟಿನ ಪೆಟ್ಟಿಗೆಗಳು ಸಹ ಸುಟ್ಟುಹೋಗಿವೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮನೆಯಲ್ಲಿದ್ದ ನಿವಾಸಿಗಳು ಆಘಾತಕ್ಕೊಳಗಾಗಿ ಮನೆಯಿಂದ ಹೊರಬಂದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸುಮಾರು ಐದು ಅಗ್ನಿಶಾಮಕ ಯಂತ್ರಗಳನ್ನು ಬಳಸಿದ್ದರೂ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ, ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್!

ವೀರ್ ಸಾವರ್ಕರ್‌ಗೆ 'ಭಾರತ ರತ್ನ' ನೀಡಿದರೆ, ಪ್ರಶಸ್ತಿಯ ಘನತೆ ಮತ್ತಷ್ಟು ಹೆಚ್ಚುತ್ತದೆ: ಮೋಹನ್ ಭಾಗವತ್

ಸೂರಜ್`ಕುಂಡ್ ಸ್ವಿಂಗ್ ದುರಂತ: ಆಪರೇಟರ್, ಮಾಲೀಕರ ಬಂಧನ, ಸರ್ಕಾರಿ ಗೌರವಗಳೊಂದಿಗೆ 'ಹೀರೋ ಇನ್ಸ್ ಪೆಕ್ಟರ್' ಅಂತ್ಯ ಸಂಸ್ಕಾರ!

ಅಮೆರಿಕ-ಭಾರತ ನಡುವಿನ ವ್ಯಾಪಾರ ಒಪ್ಪಂದ: 72 ಕೋಟಿ ರೈತರ ಪಾಲಿಗೆ ಮರಣಶಾಸನ- ಸಿಎಂ ಸಿದ್ದರಾಮಯ್ಯ

ನಟರಿಗೆ ನಿರ್ಮಾಪಕರಿಂದ ಕಾಂಡೋಮ್ ಸಪ್ಲೈ ಹೇಳಿಕೆ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ FIR ದಾಖಲು

SCROLL FOR NEXT