ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಡಿಕೆ.ಶಿವಕುಮಾರ್. 
ರಾಜ್ಯ

ಅಧಿಕಾರ ಹಂಚಿಕೆ ಕಗ್ಗಂಟು: ಸಿದ್ದು ನಿವಾಸದಲ್ಲಿ ಡಿಕೆಶಿ; Breakfast ಮೀಟಿಂಗ್ ನಲ್ಲಿ ಮುಖಾಮುಖಿ; ಯಾರು-ಯಾರಿಗೆ ಮನವೊಲಿಸುತ್ತಾರೆ?

ಸ್ಪೆಷಲ್‌ ರೂಮ್‌ನಲ್ಲಿ ಕುಳಿತಿರುವ ಇಬ್ಬರೂ ನಾಯಕರು ಬ್ರೇಕ್‌ಫಾಸ್ಟ್‌ ಶುರು ಮಾಡಿದ್ದು, ಅಲ್ಲಿಯೇ ಇಬ್ಬರೂ ಒನ್‌ ಟು ಒನ್‌ ಮೀಟಿಂಗ್‌ ಶುರು ಮಾಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರಿರುವ ನಡುವಲ್ಲೇ ಬ್ರೇಕ್'ಫಾಸ್ಟ್ ಮೀಟಿಂಗ್ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶನಿವಾರ ಭೇಟಿ ನೀಡಿದ್ದು, ಈ ಭೇಟಿ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.

ಡಿಕೆ.ಶಿವಕುಮಾರ್ ಅವರು ಕಾವೇರಿ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು.

ಇದೀಗ ಸ್ಪೆಷಲ್‌ ರೂಮ್‌ನಲ್ಲಿ ಕುಳಿತಿರುವ ಇಬ್ಬರೂ ನಾಯಕರು ಬ್ರೇಕ್‌ಫಾಸ್ಟ್‌ ಶುರು ಮಾಡಿದ್ದಾರೆ. ಅಲ್ಲಿಯೇ ಇಬ್ಬರೂ ಒನ್‌ ಟು ಒನ್‌ ಮೀಟಿಂಗ್‌ ಶುರು ಮಾಡಿದ್ದು, ಇತರರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಮುಖ್ಯಮಂತ್ರಿ ಕಾವೇರಿ ನಿವಾಸದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 3 ಕೆಎಸ್‌ಆರ್‌ಪಿ ತುಕಡಿ, 2 ಬಸ್ ನಿಯೋಜನೆ ಮಾಡಲಾಗಿದೆ.

ತೀವ್ರ ಗೊಂದಲ ಹುಟ್ಟುಹಾಕಿರುವ ಕುರ್ಚಿ ಗುದ್ದಾಟವನ್ನು ಹೈಕಮಾಂಡೇ ಬಗೆಹರಿಸಲಿದೆ ಎಂದು ಇಡೀ ಕಾಂಗ್ರೆಸ್ ಸಮೂಹ ಕಾದು ಕುಳಿತಿರುವ ಈ ಹಂತದಲ್ಲಿ ಪರಸ್ಪರ ಭೇಟಿ ಮಾಡಿ ಹೊಂದಾಣಿಕೆಗೆ ಪ್ರಯತ್ನಿಸಿ ಎಂಬ ಸ೦ದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದ್ದು, ಅದರಂತೆ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್‌ ಮೀಟಿಂಗ್ ನಡೆಯುತ್ತಿದೆ.

ರಾಜ್ಯ ಬಿಕ್ಕಟ್ಟಿನ ಬಗ್ಗೆ ತನ್ನ ಅಂತಿಮ ನಿಲುವು ಪ್ರಕಟಿಸುವ ಮುನ್ನ ಉಭಯ ನಾಯಕರು ಹೊಂದಾಣಿಕೆಗೆ ಅಂತಿಮ ಯತ್ನ ನಡೆಸಲಿ ಎಂಬ ಉದ್ದೇಶದಿಂದ ಹೈಕಮಾಂಡ್ ಈ ನಿಲುವು ತಳೆದಂತಿದ್ದು, ಹೀಗಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಉಪಾಹಾರ ಸಭೆ ನಡೆಯುತ್ತಿದೆ.

ಸಭೆಯಲ್ಲಿ ಕೇವಲ ಸಿಎಂ ಹಾಗೂ ಡಿಸಿಎಂ ಮಾ ಇರಲಿದ್ದು, ಸಭೆಯ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಮೂಡಿಸಿದೆ.

ಬ್ರೇಕ್ ಫಾಸ್ಟ್ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೈಕಮಾಂಡ್ ತೀರ್ಮಾನಕ್ಕೆ ತಾವು ಬದ್ಧ ಎಂಬ ನಿಲುವನ್ನು ಮತ್ತೆ ವ್ಯಕ್ತಪಡಿಸಿದ್ದರು. ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲೂ ಇದೇ ನಿಲುವು ಹೇಳುವುದಾಗಿ ಸ್ಪಷ್ಟಪಡಿಸಿದ್ದರು.

ಇನ್ನು ಡಿಸಿಎಂ ಕೂಡ ಎರಡೂವರೆ ವರ್ಷ ಒಪ್ಪಂದ ಪಾಲನೆಯಾಗಬೇಕು ಎಂಬ ನಿಲುವನ್ನು ಈ ಉಪಾಹಾರ ಸಭೆಯಲ್ಲಿ ಸಡಿಲಿಸುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನರೇಗಾ ಹೆಸರು ಬದಲಾವಣೆ: 'ಸೀತಾ-ರಾಮ ಅಥವಾ ದಶರಥ ರಾಮ ಅಲ್ಲ, ಅದು ಗೋಡ್ಸೆ ರಾಮ'; ಸಿದ್ದರಾಮಯ್ಯ

ಮನ್ರೇಗಾಕ್ಕಿಂತ ದೊಡ್ಡ ಉಪಯುಕ್ತ ಯೋಜನೆ ಬೇರೊಂದಿಲ್ಲ: ಹೋರಾಟಕ್ಕೆ ಆಸಕ್ತಿ ತೋರದವರನ್ನು ಕಿತ್ತೊಗೆಯುತ್ತೇನೆ; ಡಿ ಕೆ ಶಿವಕುಮಾರ್

ಜಮ್ಮು-ಕಾಶ್ಮೀರ: ಮತ್ತೆ ಗಡಿಯೊಳಗೆ ನುಗ್ಗಿದ 'ಪಾಕ್ ಡ್ರೋನ್' ಗಳು, ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ!

'ಕರ್ನಾಟಕದ ಹಿತಕ್ಕಿಂತ, ಹೈಕಮಾಂಡ್ ಹಂಗೇ ಹೆಚ್ಚಾಯಿತೇ? ಜರ್ಮನಿ ಚಾನ್ಸೆಲರ್ ಸ್ವಾಗತಿಸದ CM, DCM, ವಿರುದ್ಧ ಬಿಜೆಪಿ ಕಿಡಿ!

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಬಿ- ರಿಪೋರ್ಟ್, ಜ. 22ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ!

SCROLL FOR NEXT