ಬೆಂಗಳೂರು: ತಮ್ಮ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಿದ್ದ ರಾಜ್ಯ ಸರ್ಕಾರ, ಇದೀಗ ಸಾಮಾಜಿಕ ಜಾಲತಾಣವನ್ನೂ ಬಳಸದಂತೆ ನಿರ್ಬಂಧ ಹೇರಿರುವುದಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರು ತೀವ್ರವಾಗಿ ಕಿರಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕ ಸರ್ಕಾರ ನನ್ನ ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಕಿತ್ತು ಕೊಂಡಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ಮಾತಾಡಬಾರದು ಎಂದು ಮೊನ್ನೆ ನನ್ನ ವಿರುದ್ಧ ನಿರ್ಬಂಧ ಏರಲಾಗಿತ್ತು ಈಗ ಮುಂದುವರಿದು ಪುನೀತ್ ಕೆರೆಹಳ್ಳಿ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು ಎಂದು ನಿರ್ಬಂಧ ಏರಿದೆ.
ನಾನು ತಪ್ಪು ಮಾಡಿದ್ದರೆ ಮೊದಲು ನ್ಯಾಯಾಲಯದಲ್ಲಿ ಅದನ್ನು ರುಜುವಾತು ಮಾಡಲಿ ನಂತರ ನನ್ನ ಮೇಲೆ ನಿರ್ಬಂಧ ಏರಲಿ. ಅದು ಬಿಟ್ಟು ಈ ರೀತಿ ಕಾನೂನು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನನ್ನ ಮೇಲೆ ನಿರ್ಬಂಧ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಟ್ವೀಟ್ ನನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ನಾಯಕ ಸಿಟಿ ರವಿ, ಪ್ರತಾಪ್ ಸಿಂಹ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರಿಗೂ ಟ್ಯಾಗ್ ಮಾಡಿದ್ದಾರೆ.