ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ನಿರ್ಮಾಣ 
ರಾಜ್ಯ

HAL ಗೇ ಠಕ್ಕರ್, ಟಾಟಾ-Airbus ನಿಂದ ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ನಿರ್ಮಾಣ!

ಕರ್ನಾಟಕದ ಕೋಲಾರದ ವೇಮಗಲ್‌ನಲ್ಲಿ ಏರ್‌ಬಸ್ H125 ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಅಂತಿಮ ಜೋಡಣೆ ಮಾರ್ಗವನ್ನು (ಎಫ್‌ಎಎಲ್) ಸ್ಥಾಪಿಸಲಿವೆ ಎಂದು ಉಭಯ ಕಂಪನಿಗಳು ಬುಧವಾರ ಘೋಷಿಸಿವೆ.

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಏರ್‌ಬಸ್ ಮತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಸಂಸ್ಥೆಗಳು ಜಂಟಿಯಾಗಿ H125 ಹೆಲಿಕಾಪ್ಟರ್ ಗಳ ನಿರ್ಮಾಣಕ್ಕೆ ಮುಂದಾಗಿದ್ದು, ಪ್ರಮುಖವಾಗಿ ಕರ್ನಾಟಕದಲ್ಲಿ ಈ ನಿರ್ಮಾಣ ಘಟಕ ಇರಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಕೋಲಾರದ ವೇಮಗಲ್‌ನಲ್ಲಿ ಏರ್‌ಬಸ್ H125 ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಅಂತಿಮ ಜೋಡಣೆ ಮಾರ್ಗವನ್ನು (ಎಫ್‌ಎಎಲ್) ಸ್ಥಾಪಿಸಲಿವೆ ಎಂದು ಉಭಯ ಕಂಪನಿಗಳು ಬುಧವಾರ ಘೋಷಿಸಿವೆ.

ಟಾಟಾ ಗ್ರೂಪ್ ಮತ್ತು ಏರ್‌ಬಸ್‌ ಕಂಪನಿಗಳು ಕರ್ನಾಟಕದ ಕೋಲಾರದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಲಿವೆ. ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ, ಕಠಿಣ ಪರಿಸ್ಥಿತಿಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಎಚ್‌125 ಹೆಲಿಕಾಪ್ಟರ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ.

2027ರ ಆರಂಭದ ವೇಳೆಗೆ ಸಂಪೂರ್ಣ ಭಾರತದಲ್ಲೇ ತಯಾರಾದ ಮೊದಲ ಹೆಲಿಕಾಪ್ಟರ್ ವಿತರಣೆಯ ಗುರಿಯನ್ನು ಕಂಪನಿಗಳು ಹಾಕಿಕೊಂಡಿವೆ.

ಎಚ್ ಎಎಲ್ ಗೆ ಠಕ್ಕರ್

ಈ ಮಹತ್ವದ ಯೋಜನೆಗಾಗಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವು (ಎಫ್‌ಎಎಲ್‌) ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ಸ್ಥಾಪನೆಯಾಗಲಿದೆ. ಇದು ದೇಶದ ಖಾಸಗಿ ವಲಯದ ಮೊದಲ ಹೆಲಿಕಾಪ್ಟರ್‌ ಘಟಕವಾಗಿದ್ದು, ಈವರೆಗೆ ಕೇವಲ ಎಚ್‌ಎಲ್‌ ಮಾತ್ರ ಹೆಲಿಕಾಪ್ಟರ್‌ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿತ್ತು.

ಟಾಟಾ ಸಮೂಹದ ಅಂಗಸಂಸ್ಥೆಯಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್‌) ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಈ ತಯಾರಿಕಾ ಘಟಕವನ್ನು ಸ್ಥಾಪಿಸಲಿದೆ. 2027ರ ಆರಂಭದ ವೇಳೆಗೆ ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಮೊದಲ ಎಚ್‌125 ಹೆಲಿಕಾಪ್ಟರ್ ಅನ್ನು ವಿತರಿಸುವ ಗುರಿಯನ್ನು ಕಂಪನಿ ಹೊಂದಿದೆ. ಈ ಘಟಕದಲ್ಲಿ ಹೆಲಿಕಾಪ್ಟರ್‌ಗಳ ಜೋಡಣೆ, ಪರೀಕ್ಷೆ ಮತ್ತು ದೇಶೀಯ ಹಾಗೂ ರಫ್ತು ಮಾರುಕಟ್ಟೆಗಳಿಗೆ ವಿತರಣೆ ಮಾಡುವ ಸಂಪೂರ್ಣ ಪ್ರಕ್ರಿಯೆ ನಡೆಯಲಿದೆ.

ಟಾಟಾ-ಏರ್‌ಬಸ್ ಸಹಭಾಗಿತ್ವ

ಈ ಹಿಂದೆ ಗುಜರಾತ್‌ನ ವಡೋದರಾದಲ್ಲಿ ಸಿ295 ಮಿಲಿಟರಿ ವಿಮಾನ ತಯಾರಿಕಾ ಘಟಕವನ್ನು ಸ್ಥಾಪಿಸಿದ ನಂತರ, ಇದು ಟಾಟಾ ಮತ್ತು ಏರ್‌ಬಸ್ ನಡುವಿನ ಎರಡನೇ ಪ್ರಮುಖ ಜೋಡಣಾ ಘಟಕವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನ ಸಿಇಒ ಸುಕರನ್ ಸಿಂಗ್, "ಭಾರತದಲ್ಲಿ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಮೊದಲ ಖಾಸಗಿ ಕಂಪನಿ ಎಂಬ ಹೆಮ್ಮೆ ನಮ್ಮದಾಗಿದೆ. ಇದು ಟಾಟಾ ಮತ್ತು ಏರ್‌ಬಸ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ತಿಳಿಸಿದ್ದಾರೆ.

"ಭಾರತವು ಹೆಲಿಕಾಪ್ಟರ್‌ಗಳಿಗೆ ಸೂಕ್ತವಾದ ದೇಶವಾಗಿದ್ದು, 'ಮೇಡ್ ಇನ್ ಇಂಡಿಯಾ' ಹೆಲಿಕಾಪ್ಟರ್‌ಗಳು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿವೆ" ಎಂದು ಏರ್‌ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜುರ್ಗೆನ್ ವೆಸ್ಟರ್‌ಮೇಯರ್ ಅಭಿಪ್ರಾಯಪಟ್ಟಿದ್ದಾರೆ.

ಮಿಲಿಟರಿ ಹೆಲಿಕಾಪ್ಟರ್‌ಗಳ ಉತ್ಪಾದನೆ

ಈ ಘಟಕದಲ್ಲಿ ಎಚ್‌125ಎಂ ಎಂಬ ಮಿಲಿಟರಿ ಮಾದರಿಯ ಹೆಲಿಕಾಪ್ಟರ್‌ಗಳನ್ನು ಸಹ ಉತ್ಪಾದಿಸಲಾಗುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ಅಗತ್ಯತೆಗಳನ್ನು, ವಿಶೇಷವಾಗಿ ಹಿಮಾಲಯದ ಗಡಿಭಾಗದ ಎತ್ತರದ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚಿನ ಸ್ವದೇಶಿ ಘಟಕಗಳನ್ನು ಬಳಸಿ ಇವುಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ 'ಮೇಡ್ ಇನ್ ಇಂಡಿಯಾ' ಹೆಲಿಕಾಪ್ಟರ್‌ಗಳು ತುರ್ತು ವೈದ್ಯಕೀಯ ಸೇವೆಗಳು, ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ, ಕಾನೂನು ಜಾರಿ ಮತ್ತು ಪ್ರಯಾಣಿಕರ ಸಾರಿಗೆಯಂತಹ ಹಲವು ಕ್ಷೇತ್ರಗಳಲ್ಲಿ ಬಳಕೆಗೆ ಬರಲಿದೆ. ಇದು ರಕ್ಷಣಾ ಏರೋಸ್ಪೇಸ್ ವಲಯದಲ್ಲಿ ಭಾರತದ 'ಆತ್ಮನಿರ್ಭರ ಭಾರತ' ದೃಷ್ಟಿಕೋನಕ್ಕೂ ದೊಡ್ಡ ಶಕ್ತಿ ತುಂಬಲಿದೆ.

ಎಚ್‌125 ಹೆಲಿಕಾಪ್ಟರ್ ವಿಶೇಷತೆ

H125 ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಏಕ-ಎಂಜಿನ್ ಹೆಲಿಕಾಪ್ಟರ್ ಆಗಿದ್ದು, ಪ್ರಯಾಣಿಕರ ಸಾರಿಗೆ, ತುರ್ತು ವೈದ್ಯಕೀಯ ಸೇವೆಗಳು, ವಿಪತ್ತು ಪರಿಹಾರ, ಪ್ರವಾಸೋದ್ಯಮ, ಕಾನೂನು ಜಾರಿ ಮತ್ತು ವೈಮಾನಿಕ ಕೆಲಸಗಳಂತಹ ವೈವಿಧ್ಯಮಯ ಬಳಕೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಮಿಲಿಟರಿ ರೂಪಾಂತರದಲ್ಲಿ ಸಶಸ್ತ್ರ ಪಡೆಗಳಿಗೆ ನೀಡಲಾಗುವುದು ಎಂದು ಏರ್‌ಬಸ್ ಹೇಳಿದೆ.

"ಭಾರತ ಒಂದು ಆದರ್ಶ ಹೆಲಿಕಾಪ್ಟರ್ ದೇಶ. 'ಭಾರತದಲ್ಲಿ ತಯಾರಾದ ಹೆಲಿಕಾಪ್ಟರ್' ಈ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಮತ್ತು ಹೆಲಿಕಾಪ್ಟರ್‌ಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯ ಸಾಧನವಾಗಿ ಇರಿಸಲು ಸಹಾಯ ಮಾಡುತ್ತದೆ" ಎಂದು ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜರ್ಗೆನ್ ವೆಸ್ಟರ್ಮಿಯರ್ ಹೇಳಿದರು.

"ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಹೆಲಿಕಾಪ್ಟರ್‌ಗಳನ್ನು ನಿರ್ಮಿಸಿದ ಭಾರತದ ಮೊದಲ ಖಾಸಗಿ ವಲಯದ ಕಂಪನಿಯಾಗಲು ಹೆಮ್ಮೆಪಡುತ್ತದೆ. ಇದು ಏರ್‌ಬಸ್‌ನ ಸಹಯೋಗದೊಂದಿಗೆ ನಮ್ಮ ಎರಡನೇ FAL ಆಗಿದೆ ಮತ್ತು ಟಾಟಾ ಮತ್ತು ಭಾರತಕ್ಕಾಗಿ ಏರ್‌ಬಸ್ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು TASL ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಕರಣ್ ಸಿಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ: RSS ಕಾರ್ಯಕ್ರಮಕ್ಕೆ ಹೋಗಲ್ಲ- CJI ಗವಾಯಿ ತಾಯಿ

Asia Cup 2025: 'ಪಾಕಿಗಳ ನೋಡಿದ್ರೆ ಅವನ ರಕ್ತ ಕುದಿಯುತ್ತಿತ್ತು'; ಟೀಂ ಇಂಡಿಯಾ 'Hero' ಕೋಚ್ Kapil Dev Pandey ಮಾತು!

1st Test: ಮೊದಲ ದಿನದಾಟ ಅಂತ್ಯ, ವಿಂಡೀಸ್ ವಿರುದ್ಧ ಭಾರತ ಮೇಲುಗೈ, 41 ರನ್ ಹಿನ್ನಡೆ!

'RSS-BJP' ಸೈದ್ಧಾಂತಿಕತೆಯ ಹೃದಯದಲ್ಲಿ ಹೇಡಿತನವಿದೆ: ಕೊಲಂಬಿಯಾದಲ್ಲಿ ಗುಡುಗಿದ ರಾಹುಲ್ ಗಾಂಧಿ!

SCROLL FOR NEXT