ಆಲಮಟ್ಟಿ ಜಲಾಶಯ 
ರಾಜ್ಯ

ಆಲಮಟ್ಟಿ ಜಲಾಶಯದಲ್ಲಿ 7.556 ಟಿಎಂಸಿ ಅಡಿ ಹೂಳು: ನೀರು ಸಂಗ್ರಹ ಸಾಮರ್ಥ್ಯ ಕುಸಿತ; ಅಧ್ಯಯನ

2023ರಲ್ಲಿ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಕೆಇಆರ್‌ಎಸ್‌) ನಡೆಸಿದ ಆಲಮಟ್ಟಿ ಜಲಾಶಯ ಸೇರಿ ರಾಜ್ಯದ ವಿವಿಧ ಜಲಾಶಯಗಳ ಹಿನ್ನೀರಿನ ಹೂಳು ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಈ ಅಂಶ ಬಹಿರಂಗವಾಗಿದೆ.

ವಿಜಯಪುರ: ಕರ್ನಾಟಕದ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಆಲಮಟ್ಟಿ ಜಲಾಶಯವು 123.081 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ, ಆದರೆ ಕಳೆದ ಎರಡು ದಶಕಗಳಲ್ಲಿ ಹೂಳು ಶೇಖರಣೆಯಿಂದಾಗಿ 7.556 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ.

2023ರಲ್ಲಿ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಕೆಇಆರ್‌ಎಸ್‌) ನಡೆಸಿದ ಆಲಮಟ್ಟಿ ಜಲಾಶಯ ಸೇರಿ ರಾಜ್ಯದ ವಿವಿಧ ಜಲಾಶಯಗಳ ಹಿನ್ನೀರಿನ ಹೂಳು ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಈ ಅಂಶ ಬಹಿರಂಗವಾಗಿದೆ.

ಅಧ್ಯಯನದ ಸಂಪೂರ್ಣ ವರದಿಯನ್ನು ಆಯಾ ಜಲಾಶಯದ ಮುಖ್ಯ ಎಂಜಿನಿಯರ್‌ಗಳಿಗೂ ಸಲ್ಲಿಸಲಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಶೆ.6.1ನೀರಿನ ಕುಸಿತವಾಗಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಹಿಪ್ಪರಗಿ ಜಲಾಶಯದವರೆಗೆ 487 ಚದರ ಕಿ.ಮೀವರೆಗೆ ಮೂರು ತಿಂಗಳ ಅಧ್ಯಯನ ನಡೆಸಲಾಗಿತ್ತು ಎಂದು ಕೆಇಆರ್‌ಎಸ್ ನಿರ್ದೇಶಕ ಕೆ ಜಿ ಮಹೇಶ ತಿಳಿಸಿದರು.

ಬೋಟ್‌ನಲ್ಲಿ ಅಳವಡಿಸಲಾಗಿರುವ ಎಕೋ ಸೌಂಡ್ ಸಿಸ್ಟಂ ಮೂಲಕ ಹೊರಬರುವ ಧ್ವನಿ ತರಂಗಗಳನ್ನು ನೀರಿನ ಆಳದೊಳಗೆ ಬಿಟ್ಟು, ಅದರಿಂದ ಬರುವ ಪ್ರತಿಧ್ವನಿಯ ಆಧಾರದ ಮೇಲೆ ಉಪಕಾರಣದಲ್ಲಿ ಅಳವಡಿಸಿರುವ ನೂತನ ಸಾಫ್ಟ್‌ವೇರ್ ಮೂಲಕ ಎಷ್ಟು ಪ್ರಮಾಣದಲ್ಲಿ ನೀರಿದೆ, ಎಷ್ಟು ಪ್ರಮಾಣದಲ್ಲಿ ಹೂಳಿನ ಅಂಶವಿದೆ ಎಂಬುದನ್ನು ಅಧ್ಯಯನ ನಡೆಸಲಾಗಿತ್ತು. ಅಧ್ಯಯನ ಅಂಕಿ ಅಂಶಗಳ ಸಂಪೂರ್ಣ ವೈಜ್ಞಾನಿಕವಾಗಿ ವಿಶ್ಲೇಷಣೆಗೊಳಿಸಿ, ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಆರಂಭಗೊಂಡ 22ವರ್ಷಗಳಲ್ಲಿ ಅಂದರೆ 2023ವರೆಗೆ ಜಲಾಶಯದಲ್ಲಿ 7.556 ಟಿಎಂಸಿ ಅಡಿ ಹೂಳಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ ಅಡಿ, ಹೂಳಿನ ಕಾರಣ ಜಲಾಶಯದ ಸಂಗ್ರಹ ಸಾಮರ್ಥ್ಯ 115.552 ಟಿಎಂಸಿ ಅಡಿಗೆ ಕುಸಿತಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೂಳಿನಿಂದ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 115.552 ಟಿಎಂಸಿ ಅಡಿಗೆ ಕುಸಿದರೊ ನೀರಾವರಿ ಸೇರಿದಂತೆ ಮತ್ತಿತರರ ಬಳಕೆಗೆ ಯಾವುದೇ ನೀರಿನ ಕೊರೆತೆ ಉಂಟಾಗುವುದಿಲ್ಲ ಎಂದು ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್‌ಎಲ್) ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಹೂಳಿನ ಮಟ್ಟವನ್ನು ಅಧ್ಯಯನವು ಹೋಲಿಸಿದೆ. 2022 ರಲ್ಲಿ ಸಮೀಕ್ಷೆ ಮಾಡಲಾದ ನಾರಾಯಣಪುರ ಜಲಾಶಯವು ರಾಜ್ಯದಲ್ಲಿ ಅತಿ ಹೆಚ್ಚು ಹೂಳು ಶೇಖರಣೆಯನ್ನು ದಾಖಲಿಸಿದೆ. ನಾರಾಯಣಪುರವು 10.550 ಟಿಎಂಸಿಎಫ್‌ಟಿ ಹೂಳು ಸಂಗ್ರಹಿಸಿತ್ತು, ಇದರ ಪರಿಣಾಮವಾಗಿ 27.292 ಟಿಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯದ ನಷ್ಟವಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಹೂಳಿನಿಂದಾಗಿ ನೀರು ಸಂಗ್ರಹ ನಷ್ಟದ ವಿಷಯದಲ್ಲಿ ತುಂಗಭದ್ರಾ ಜಲಾಶಯ ಎರಡನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

Karur stampede: ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Karnataka Rains- ಬೆಂಗಳೂರು ಸೇರಿ ರಾಜ್ಯಾದ್ಯಂತ ಅ.9ರವರೆಗೆ ಮಳೆ

SCROLL FOR NEXT