ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ 
ರಾಜ್ಯ

Greater Bengaluru Authority ಚುನಾವಣೆ ಬಳಿಕ ಮತ್ತಷ್ಟು ವಾರ್ಡ್ ಗಳ ಸೇರ್ಪಡೆ: DCM ಡಿ.ಕೆ ಶಿವಕುಮಾರ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯ ನಂತರ ನಗರದ ಹೊರವಲಯದ ಕೆಲವು ಪ್ರದೇಶಗಳನ್ನು ಸೇರಿಸುವ ಮೂಲಕ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯ ನಂತರ, ನಗರದ ಹೊರವಲಯದ ಕೆಲವು ಪ್ರದೇಶಗಳನ್ನು ಪರಿಗಣಿಸಿ ಇನ್ನೂ 140-150 ವಾರ್ಡ್‌ಗಳನ್ನು ಸೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯ ನಂತರ ನಗರದ ಹೊರವಲಯದ ಕೆಲವು ಪ್ರದೇಶಗಳನ್ನು ಸೇರಿಸುವ ಮೂಲಕ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮತ್ತು ಜನಸ್ನೇಹಿ ಆಡಳಿತವನ್ನು ದೃಷ್ಟಿಯಲ್ಲಿಟ್ಟುಕೊಂಡು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ನಗರವನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ಈ ಮಹತ್ವದ ಪುನಾರಚನೆಯಲ್ಲಿ ಒಟ್ಟು 368 ವಾರ್ಡ್ಗಳನ್ನು ರಚಿಸಲಾಗಿದ್ದು, ಆಡಳಿತದ ವಿಕೇಂದ್ರೀಕರಣದ ಮೂಲಕ ನಾಗರಿಕರಿಗೆ ಉತ್ತಮ ಸೇವೆ ತಲುಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಅಕ್ಷೇಪಣೆಗಳಿದ್ದರೆ ಜನರು ಸಲ್ಲಿಸಬಹುದು. ಸರ್ಕಾರ್ ಸಮಸ್ಯೆಗಳನ್ನು ಸರಿಪಡಿಸಲು ಸಿದ್ಧವಿದೆ. ಸಂವಿಧಾನದ 74ನೇ ತಿದ್ದುಪಡಿಯ ಪ್ರಕಾರ, ಜನರಿಗೆ ಅಧಿಕಾರ ನೀಡಬೇಕು. ಚುನಾವಣೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಟೀಕೆ ಬರವಿ. ಅವುಗಳು ಹೋಗುತ್ತವೆ. ಆದರೆ, ಕೆಲಸ ಉಳಿಯುತ್ತದೆ. ನಾವು ಕೆಲಸ ಮಾಡುತ್ತೇವೆ ಮತ್ತು ಬೆಂಗಳೂರಿಗೆ ಹೊಸ ಮುಖವನ್ನು ನೀಡುತ್ತೇವೆ. ಸರ್ಕಾರ ನಗರಕ್ಕೆ ನೀಡಿರುವ ಕಾರ್ಯಕ್ರಮಗಳನ್ನು ಶೀಘ್ರದಲ್ಲೇ ಪಟ್ಟಿ ಮಾಡುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವ ಕ್ರಾಂತಿಯು ಇಲ್ಲ, ಕೇವಲ ''ಮಾಧ್ಯಮ ಸೃಷ್ಟಿ''; ನನ್ನ ಸ್ಥಾನ ಈಗಲೂ ಗಟ್ಟಿ, ಮುಂದೆಯೂ ಗಟ್ಟಿ

Delhi Blast: ವೈದ್ಯನಾದರೂ ತಲೆ ತುಂಬ 'ಇಸ್ಲಾಮ್ ಮೂಲಭೂತವಾದ' ತುಂಬಿಕೊಂಡಿದ್ದ ಬಾಂಬರ್! ರೋಗಿಗಳಿಗೆ ಏನು ಹೇಳ್ತಿದ್ದ ಗೊತ್ತಾ?

Delhi Blast: ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಪರಿಶೀಲನೆ, 200 ವೈದ್ಯರು, ಸಿಬ್ಬಂದಿಗಳ ವಿಚಾರಣೆ

ಪಾಕ್ ಆಟಗಾರರೊಂದಿಗೆ 'ಹ್ಯಾಂಡ್ ಶೇಕ್ ಇಲ್ಲ' ನೀತಿಗೆ ತೀಲಾಂಜಲಿ: ಫ್ಯಾನ್ಸ್ ಗೆ ಅಚ್ಚರಿ ಮೂಡಿಸಿದ ಹರ್ಭಜನ್ ಸಿಂಗ್! Video

5th Generation Fighter: "ಭಾರತಕ್ಕೆ ಬೇಕಾದ್ದು ಕೊಡ್ತೇವೆ": ವಿಶ್ವದ ಯಾವುದೇ ರಾಷ್ಟ್ರ ಮಾಡದ 'ಸಾಹಸ' ಮಾಡಿದ ರಷ್ಯಾ!

SCROLL FOR NEXT