ರಾಜ್ಯ

ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಿ: ಅಧಿಕಾರಿಗಳಿಗೆ ಬೆಂಗಳೂರು ಉತ್ತರ ಪಾಲಿಕೆ ಆಯುಕ್ತ ಸೂಚನೆ

ತಪಾಸಣೆ ವೇಳೆ ರಸ್ತೆಗಳಲ್ಲಿದ್ದ ಕಸದ ರಾಶಿಯನ್ನು ಗಮನಿಸಿದ ಅವರು, ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿರಂತರ ನಿರ್ಲಕ್ಷ್ಯಗಳನ್ನು ಸಹಿಸುವುದಿಲ್ಲ.

ಬೆಂಗಳೂರು: ರಸ್ತೆ ಬದಿಗಳಲ್ಲಿ, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಬೆಂಗಳೂರು ನಗರ ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಗುರುವಾರ ಸೂಚನೆ ನೀಡಿದ್ದಾರೆ.

ಬಾಣಸವಾಡಿ ಮತ್ತು ಸುಬ್ಬಯ್ಯನ ಪಾಳ್ಯದಲ್ಲಿ ತಪಾಸಣೆ ಗುರುವಾರ ತಪಾಸಣೆ ನಡೆಸಿದ ಅವರು, ವಿಧಾನವನ್ನು ಬದಲಾಯಿಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಘನತ್ಯಾಜ್ಯ ನಿರ್ವಹಣಾ ಸಿಬ್ಬಂದಿ ಸೂಚನೆ ನೀಡಿದರು.

ಅಲ್ಲದೆ, ಕಸ ವಿಲೇವಾರಿಯು ಹೀಗೆಯೇ ಅತೃಪ್ತಿಕರವಾಗಿ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ತಪಾಸಣೆ ವೇಳೆ ರಸ್ತೆಗಳಲ್ಲಿದ್ದ ಕಸದ ರಾಶಿಯನ್ನು ಗಮನಿಸಿದ ಅವರು, ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಿರಂತರ ನಿರ್ಲಕ್ಷ್ಯಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಎಲ್ಲೆಲ್ಲಿ ಕಸದ ಬ್ಲ್ಯಾಕ್ ಸ್ಪಾಟ್ ಗಳು ಹೆಚ್ಚಾಗಿ ಕಂಡು ಬರುತ್ತದೆಯೋ ಅಂತಹ ಪ್ರದೇಶಗಳಲ್ಲಿ ಮಾರ್ಷಲ್ ಗಳು ರಾತ್ರಿ ಗಸ್ತು ತಿರುಗುತ್ತಾ ಕಸ ಹಾಕುವವರನ್ನು ಗುರುತಿಸಿ, ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಘನತ್ಯಾಜ್ಯ ವಿಲೇವಾರಿಯಲ್ಲಿ ಕಾರ್ಯವೈಖರಿ ಸುಧಾರಣೆಗೊಳ್ಳದಿದ್ದಲ್ಲಿ, ಕಸ ವಿಲೇವಾರಿಯ ಕಾರ್ಯವು ಸಮರ್ಪಕವಾಗಿ ನಿರ್ವಹಣೆಯಾಗದಿದ್ದಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದಾದ ಮೇಲೆ ಆಯುಕ್ತರು ಸರ್ವಜ್ಞನಗರದ ಹೆಚ್‌ಬಿಆರ್ ಲೇಔಟ್‌ನಲ್ಲಿರುವ ಟ್ರಾನ್ಸ್‌ಫರ್ ಸ್ಟೇಷನ್ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸ್ಪಷ್ಟ ಉದ್ದೇಶದೊಂದಿಗೆ ಆರಂಭಗೊಂಡ Operation Sindoor ಗುರಿ ತಲುಪಿದ ಮೇಲೆ ಬೇಗನೆ ನಿಲ್ಲಿಸಲಾಯಿತು: IAF ಮುಖ್ಯಸ್ಥ

ಪ್ರಧಾನಿ ಮೋದಿ 'ಆಧುನಿಕ ರಾವಣ: ಶೀಘ್ರವೇ ಅವರ ಚಿನ್ನದ ಅರಮನೆ ಸುಟ್ಟು ಬೂದಿಯಾಗಲಿದೆ; ಉದಿತ್ ರಾಜ್

ಆಡಳಿತ ವೈಫಲ್ಯದ ಲಾಭ ಪಡೆಯಲೂ ವಿಫಲವಾಗಿರುವ ಪ್ರತಿಪಕ್ಷ ಬಿಜೆಪಿ (ನೇರ ನೋಟ)

ಲಡಾಖ್: ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಾಂಗ್ಚುಕ್ ಪತ್ನಿ ಗೀತಾಂಜಲಿ

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

SCROLL FOR NEXT