ತುಮಕೂರು: ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಲು ಆಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಹೇಳುವ ಮೂಲಕ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಮತ್ತೆ ವಿವಾದದ ಕಿಡಿಹೊತ್ತಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಕೆಆರೆಸ್‌ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಅವರು, ನಾನು ಓದಿರುವ ಪ್ರಕಾರ, ಕನ್ನಂಬಾಡಿ ಕಟ್ಟೆಯನ್ನು ಪ್ರಾರಂಭ ಮಾಡಿದ್ದೆ ಟಿಪ್ಪು, ಆನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಂಪೂರ್ಣವಾಯಿತು ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಂಪೂರ್ಣ ಮಾಡುವಾಗ ಹಣ ಕಾಸಿನ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರುತ್ತಾರೆ ಎಂದು ತಿಳಿಸಿದರು.
ಅದೇ ಟಿಪ್ಪು ನಾಲ್ಕು ಯುದ್ಧ ಮಾಡುತ್ತಾನೆ. ಮೂರನೇ ಯುದ್ಧದಲ್ಲಿ ಸೋತು ಬಿಡುತ್ತಾನೆ. ಬ್ರಿಟಿಷರು ಯುದ್ಧದ ಖರ್ಚು 3 ಕೋಟಿ 30 ಲಕ್ಷವನ್ನು ಕೇಳುತ್ತಾರೆ. ಆಗ ವಿಧಿಯಿಲ್ಲದೆ ಮಕ್ಕಳನ್ನು ಅಡವಿಡುತ್ತಾನೆ. ಎಂದರು.
ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕಾದರೆ ನಾಲ್ಕನೇ ಮೈಸೂರು ಯುದ್ಧದಲ್ಲಿ ಮೀರಸಾಧಿಕ್ ಕಥೆಯಿಂದಾಗಿ ಸೋತು ಹೋಗುತ್ತಾನೆ. ಮೀರಸಾಧಿಕ್ ದ್ರೋಹ ಮಾಡದೆ ಇದಿದ್ದರೆ, ಶಸ್ತ್ರಗಾರ ಡ್ಯಾಮೇಜ್ ಆಗದೆ ಇದ್ದಿದ್ದರೆ ಅವನು ಸೋಲುತ್ತಿರಲಿಲ್ಲ. ನಮ್ಮ ರಾಜ್ಯದಲ್ಲಿ ರೇಷ್ಮೆ ಬರಲು ಟಿಪ್ಪು ಕಾರಣ. ಟಿಪ್ಪುರೇಷ್ಮೆಯ ಜನಕ, ಪರ್ಷಿಯಾದಿಂದ ಕಡ್ಡಿ ತಂದಿದ್ದೇ ಟಿಪ್ಪು, ರಾಮನಗರ ಎಲ್ಲಾ ಕಡೆ ಮುಸ್ಲಿಂರು ಹೆಚ್ಚು ರೇಷ್ಮೆ ಕೃಷಿ ಮಾಡುತ್ತಾರೆ ಎಂದರು.
ಟಿಪ್ಪು ಆನೆಗೆ ಕಣ್ಣು ಹೋದಾಗ ನಂಜುಂಡೇಶ್ವರನಿಗೆ ಹರಕೆ ಮಾಡಿಕೊಳ್ಳುತ್ತಾನೆ. ಹರಿಕೆ ಮಾಡಿಕೊಂಡಾಗ ಆನೆಗೆ ಕಣ್ಣು ಬರುತ್ತದೆ. ಇವತ್ತು ನಂಜುಂಡೇಶ್ವರನ ಮೇಲೆ ಪಚ್ಚೆಯನ್ನು ನಂಜುಂಡೇಶ್ವರನ ಲಿಂಗದ ಮೇಲಿಟ್ಟು ಪೂಜೆ ಮಾಡುತ್ತಾರೆ. ಆಗಿನಿಂದ ಹಕ್ಕಿಂ ನಂಜುಂಡೇಶ್ವರ ಅಂತ ಹೆಸರು ಕೊಡೋದು. ಇದೆಲ್ಲಾ ಟಿಪ್ಪು ಸುಲ್ತಾನ್ ಬಗ್ಗೆ ಇರುವ ಒಳ್ಳೆ ಅಂಶಗಳು ಎಂದರು.
ನಮ್ಮ ಮಕ್ಕಳಿಗೆ ಇತಿಹಾಸ ಸ್ಪಷ್ಟವಾಗಿ ತಿಳಿಬೇಕು. ಇತಿಹಾಸ ತಿರುಚಬಾರದು ಎಂದ ಅವರು ಮಾತು ಎತ್ತಿದರೆ ಹಿಂದೂತ್ವ ಅಂತಾರೆ. ನಾವೆಲ್ಲಾ ಹಿಂದೂಗಳಲ್ವಾ ಎಂದು ಪ್ರಶ್ನಿಸಿದರು.
ಶ್ರೀರಾಮ ದೇವಸ್ಥಾನ ನಮ್ಮೂರಿನಲ್ಲಿ ನಮ್ಮ ಮುತ್ತಾತಂದಿರು ಕಟ್ಟಿಸಿಲ್ವಾ? ಇದೆಲ್ಲಾ ರಾಜಕೀಯಕ್ಕಾಗಿ ವೋಟಿಗಾಗಿ ಮರಳು ಮಾಡಲು ಹೋಗಿ ನಮ್ಮ ಇತಿಹಾಸ ಹಾಗೂ ಜನರು ಹೋಗಬೇಕಾದ ದಾರಿ ತಪ್ಪಿಸಿದ್ದೇವೆ. ಗೋಡ್ಸೆ ಹಿಂದುತ್ವ. ಗಾಂಧಿ ಹಿಂದುತ್ವ ಎಂದು ಎರಡಿದೆ. ನಾವೆಲ್ಲಾ ಗಾಂಧಿ ಹಿಂದುತ್ವ ಫಾಲೋ ಮಾಡುತ್ತಿರುವುದು, ವೋಟ್ ಗೋಸ್ಕರ ಹಿಂದುತ್ವ ಹೇಳುತ್ತಾರಲ್ಲ ಅವರೆಲ್ಲಾ ಗೋಡ್ಸೆ ಹಿಂದೂತ್ವ ವಾದಿಗಳು. ಇದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರು.