ಸಂಗ್ರಹ ಚಿತ್ರ 
ರಾಜ್ಯ

ಹೆಣ್ಣು ಮಗು ಜನನ: ಪತಿ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಶರಣು

ಆರೋಪಿ ಹೆಣ್ಣು ಮಗುವನ್ನು ರವೀಶ್‌ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಮಗುವಿನ ಕಿವಿಯನ್ನೂ ಸುಟ್ಟಿದ್ದರು. ಮಗು ಜನಿಸಿದಾಗ ಆಸ್ಪತ್ರೆ ಬಿಲ್‌ ಅನ್ನೂ ಪಾವತಿ ಮಾಡಿರಲಿಲ್ಲ. ಈ ಹಿಂದೆಯೂ ಗಲಾಟೆ ನಡೆದಿತ್ತು.

ಬೆಂಗಳೂರು: ಹೆಣ್ಣು ಮಗು ಜನನ ಹಿನ್ನೆಲೆ ಪತಿ ನೀಡಿದ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲಗ್ಗೆರೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಲಗ್ಗೆರೆ ಬಳಿಯ ಮುನೇಶ್ವರ ಬ್ಲಾಕ್ ನಿವಾಸಿ ರಕ್ಷಿತಾ (26) ಎಂದು ಗುರುತಿಸಲಾಗಿದೆ. ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ರವೀಶ್ ಮತ್ತು ಅವರ ಸಹೋದರ ಲೋಕೇಶ್ ವಿರುದ್ಧ ರಕ್ಷಿತಾ ತಂದೆ ದೂರು ದಾಖಲಿಸಿದ್ದು, ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿ, ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತುಮಕೂರು ಮೂಲದ ರವೀಶ್ ಮತ್ತು ಹಾಸನ ಜಿಲ್ಲೆಯ ಅರಸೀಕೆರೆಯ ರಕ್ಷಿತಾ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗಳಿಗೆ ಮೂರು ವರ್ಷದ ಮಗಳಿದ್ದಾಳೆ.

ಆರೋಪಿ ತನ್ನ ಅತ್ತೆ-ಮಾವಂದಿರಿಂದ ದೂರವಿದ್ದು, ಪತ್ನಿ ಕೂಡ ದೂರ ಇರುವಂತೆ ಮಾಡಿದ್ದ. ಯಾವುದೇ ಕಾರ್ಯಕ್ರಮಗಳಿಗೂ ಹೋಗದಂತೆ ಮಾಡಿದ್ದ. ‘ಹೆಣ್ಣು ಮಗು ಬೇಡ. ಗಂಡು ಮಗು ಬೇಕೆಂದು ರವೀಶ್ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ.

ಹೆಣ್ಣು ಮಗುವನ್ನು ರವೀಶ್‌ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಮಗುವಿನ ಕಿವಿಯನ್ನೂ ಸುಟ್ಟಿದ್ದರು. ಮಗು ಜನಿಸಿದಾಗ ಆಸ್ಪತ್ರೆ ಬಿಲ್‌ ಅನ್ನೂ ಪಾವತಿ ಮಾಡಿರಲಿಲ್ಲ. ಈ ಹಿಂದೆಯೂ ಗಲಾಟೆ ನಡೆದಿತ್ತು.

ಮಗಳಿಂದ ಕೆಲ ದಿನಗಳಿಂದ ಫೋನ್ ಬಾರದ ಕಾರಣ ಮನೆಗೆ ಹೋಗಿದ್ದೆವು. ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ಬಳಿಕ ಮಾಲೀಕರಿಂದ ಹೆಚ್ಚುವರಿ ಕೀ ಪಡೆದು, ಒಳಗೆ ಹೋಗಿ ನೋಡಿದಾಗ ಮಗಳು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರು ಹಿನ್ನೆಲೆಯಲ್ಲಿ ನಂದಿನಿ ಲೇಔಟ್ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕೌಟುಂಬಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

4 ಲಕ್ಷ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದವರಿಂದ ಪಾಠದ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಗುಡುಗಿದ ಭಾರತ

ನನ್ನ ಸೂಚನೆ ಪರಿಣಾಮಕಾರಿಯಾಗಿತ್ತು, ಹೀಗಾಗಿ ಯುದ್ಧ ನಿಲ್ಲಿಸಿದರು: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಛಾರ

ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರ ಆದ್ರು 'SC ಜಾತಿ ಪ್ರಮಾಣಪತ್ರ': ರಾಜ್ಯ ಸರ್ಕಾರದ ಆದೇಶ!

Uttar Pradesh: ರಾತ್ರಿ ಹೊತ್ತಲ್ಲಿ 'ಹಾವಾಗಿ' ಕಚ್ಚಲು ಓಡಾಡಿಸುವ ಪತ್ನಿ: ಅಧಿಕಾರಿಗಳ ದುಂಬಾಲು ಬಿದ್ದ ಪತಿ!

CJI ಮೇಲೆ 'ಶೂ' ಎಸೆತ: ಯಾವುದೇ ಪಶ್ಚಾತ್ತಾಪವಿಲ್ಲ, ನಾನು ಮಾಡಿದ್ದು ಸರಿಯಿದೆ ಎಂದ ವಕೀಲ ರಾಕೇಶ್ ಕಿಶೋರ್

SCROLL FOR NEXT