ರಷ್ಯಾ ಮಹಿಳೆ ಯೂಲಿಯಾ 
ರಾಜ್ಯ

ಮನೆ ಬಾಡಿಗೆ 1.25 ಲಕ್ಷ, ಮನೆ ಕೆಲಸದಾಕೆ ಸಂಬಳವೇ 45 ಸಾವಿರ ರೂ: ರಷ್ಯಾ ಮಹಿಳೆಯ ಬೆಂಗಳೂರು ಲೈಫ್; ಲೆಕ್ಕಾಚಾರ ವೈರಲ್!

ರಷ್ಯಾ ಮೂಲದ ಕಟೆಂಟ್ ಕ್ರಿಯೇಟರ್ ಒಬ್ಬರು ಬೆಂಗಳೂರಿನ ಲೈಫ್ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಬಲು ದುಬಾರಿಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ಉದಾಹರಣೆ ದೊರೆತಿದ್ದು, ರಷ್ಯಾ ಮಹಿಳೆಯೊಬ್ಬರ ಬೆಂಗಳೂರು ಲೈಫ್ ಲೆಕ್ಕಾಚಾರ ಮಧ್ಯಮ ತರಗತಿ ಜನರ ತಲೆ ತಿರುಗುವಂತೆ ಮಾಡುತ್ತದೆ.

ಹೌದು.. ರಷ್ಯಾ ಮೂಲದ ಕಟೆಂಟ್ ಕ್ರಿಯೇಟರ್ ಒಬ್ಬರು ಬೆಂಗಳೂರಿನ ಲೈಫ್ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಯೂಲಿಯಾ ಎಂಬ ರಷ್ಯಾದ ಮಹಿಳೆ ಬೆಂಗಳೂರಿನಲ್ಲಿ ತಮ್ಮ ಮಾಸಿಕ ಖರ್ಚುಗಳನ್ನು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮನೆ ಬಾಡಿಗೆ 1.25 ಲಕ್ಷ ರೂ

ಆಕೆ ಮನೆ ಬಾಡಿಗೆಗೆಂದೇ ಬರೊಬ್ಬರಿ 1.25 ಲಕ್ಷ ರೂ. ನೀಡುತ್ತಿದ್ದು, ತಮ್ಮ ಮನೆ ಕೆಲಸದಾಕೆಗೆ 45,000 ರೂ. ಪಾವತಿಸುತ್ತಿರುವುದಾಗಿ ಹೇಳಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿರುವ ಕಂಟೆಂಟ್ ಕ್ರಿಯೇಟರ್ ಯೂಲಿಯಾ, "ಬೆಂಗಳೂರಿನಲ್ಲಿ ಜೀವನವು ನಿಜವಾಗಿಯೂ ಎಷ್ಟು ವೆಚ್ಚವಾಗುತ್ತದೆ" ಎಂಬ ಶೀರ್ಷಿಕೆಯ ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ, ಇದು ಆನ್‌ಲೈನ್ ಬಳಕೆದಾರರು ಅವರ ಖರ್ಚುಗಳ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದು, ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

"ಸರಿ, 11 ವರ್ಷಗಳ ಹಿಂದೆ, ನಾನು ನನ್ನ ಕೆಲಸದ ನಿಮಿತ್ತ ಯೋಜನೆಗಾಗಿ ಬೆಂಗಳೂರಿಗೆ ಬಂದಾಗ, ಎಲ್ಲವೂ ನನಗೆ ತುಂಬಾ ಸಮಂಜಸವಾಗಿತ್ತು. ಬಹುಶಃ ನನ್ನ ಸ್ವಂತ ದೇಶದ ಕರೆನ್ಸಿ ಸೂಪರ್ ಸ್ಟ್ರಾಂಗ್ ಆಗಿದ್ದರಿಂದ ಮತ್ತು ನಾನು ಎಲ್ಲಾ ಬೆಲೆಗಳನ್ನು ಅರ್ಧದಷ್ಟು ಭಾಗಿಸುತ್ತಿದ್ದೆ," ಎಂದು ಯೂಲಿಯಾ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

"HSR ಲೇಔಟ್ ಸುತ್ತಮುತ್ತಲಿನ ಗೇಟೆಡ್ ಕಮ್ಯುನಿಟಿಯಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಇರುವ ಸುಂದರವಾದ 2 BHK (ಅರೆ ಸುಸಜ್ಜಿತ ಆದರೆ ಹೊಸ, ತಾಜಾ) ಮನೆಯನ್ನು 25 ಸಾವಿರ ರೂ.ಗೆ ಬಾಡಿಗೆಗೆ ಪಡೆಯಬಹುದಾಗಿತ್ತು ಎಂದು ನನಗೆ ಇನ್ನೂ ನೆನಪಿದೆ. ವಿಮಾನ ನಿಲ್ದಾಣಕ್ಕೆ ಮೇರು ಕ್ಯಾಬ್‌ಗಳಲ್ಲಿ ಸುಮಾರು 700 ರೂ. ವೆಚ್ಚವಾಗಿದ್ದವು" ಎಂದು ಅವರು ಹೇಳಿದರು.

ವೀಡಿಯೊದಲ್ಲಿ, ಅವರು ತಮ್ಮ ಖರ್ಚುಗಳನ್ನು ವಿವರಿಸಿದ್ದು, ಪ್ರಸ್ತುತ ಮನೆ ಬಾಡಿಗೆ ರೂ. 1,25,000, ಶಾಲೆ: ರೂ. 30,000, ಆಹಾರ ಮತ್ತು ಮನೆ ಖರ್ಚು: ರೂ. 75,000, ಮನೆ ಕೆಲಸದಾಕೆಗೆ: ರೂ. 45,000, ಆರೋಗ್ಯ ಮತ್ತು ಫಿಟ್‌ನೆಸ್: ರೂ. 30,000 ಮತ್ತು ಪೆಟ್ರೋಲ್: ರೂ. 5,000 ರೂ ವೆಚ್ಚವಾಗುತ್ತಿದೆ ಎಂದು ಹೇಳಿದ್ದಾರೆ.

ಇದಲ್ಲದೆ, "ನನ್ನ ಮಾಸಿಕ ವೆಚ್ಚಗಳು ಬದಲಾಗುತ್ತವೆ ಮತ್ತು ನನ್ನ ಆಪ್ಟಿಮೈಸೇಶನ್ ಯೋಜನೆ/ಅಗತ್ಯಗಳು ಮತ್ತು ಸಂದರ್ಭಗಳನ್ನು ಅವಲಂಬಿಸಿರುತ್ತದೆ. ನಾನು ರೂ. 25-35 ಸಾವಿರ ರೂ ದಷ್ಟು ಕಡಿಮೆ ವೈಯಕ್ತಿಕ ಖರ್ಚುಗಳನ್ನು ನಿರ್ವಹಿಸಬಲ್ಲೆ (ನನ್ನ ಫಿಟ್‌ನೆಸ್, ಉತ್ತಮ ಪೋಷಣೆ ಮತ್ತು ಮನಶ್ಶಾಸ್ತ್ರಜ್ಞರೊಂದಿಗೆ ಯಾವುದೇ ಮಾತುಕತೆಗೆ ಒಳಪಡುವುದಿಲ್ಲ) ಆದರೆ ಕುಟುಂಬದ ವೆಚ್ಚಗಳು ಬೇರೆ ಮಟ್ಟದಲ್ಲಿವೆ" ಎಂದು ಅವರು ಹೇಳಿಕೊಂಡಿದ್ದಾರೆ.

"ಬೆಂಗಳೂರಿನಲ್ಲಿ 3 ಜನರ ಕುಟುಂಬವು ಬ್ಲೂ-ರೋಡ್‌ನಲ್ಲಿ ಯೋಗ್ಯವಾಗಿ ಚೆನ್ನಾಗಿ ಬದುಕಲು ಕನಿಷ್ಠ 2.5 ಲಕ್ಷವಾದರೂ ಬೇಕು. ಗುರ್ಗಾಂವ್ ಮತ್ತು ಮುಂಬೈನಲ್ಲಿ ಜೀವನ ವೆಚ್ಚ ಇನ್ನೂ ಹೆಚ್ಚಾಗಿದೆ ಎಂದು ನಾನು ಕೇಳಿದೆ" ಎಂದು ಯೂಲಿಯಾ ಹೇಳಿದ್ದಾರೆ.

'ನೀವು ಹೆಚ್ಚು ಪಾವತಿಸುತ್ತಿದ್ದೀರಿ'-ಕಮೆಂಟ್ ಗಳ ಸುರಿಮಳೆ

ಯೂಲಿಯಾ ಅವರ ಈ ಪೋಸ್ಟ್ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದು, ಈ ವಿಡಿಯೋವನ್ನು ಸುಮಾರು ಮೂರು ಲಕ್ಷ ಬಾರಿ ವೀಕ್ಷಿಸಲಾಗಿದ್ದು, ನೂರಾರು ಕಾಮೆಂಟ್‌ಗಳು ಬಂದಿವೆ. ಹೆಚ್ಚಿನ ಬಳಕೆದಾರರು ಅವರ ಖರ್ಚಿನಿಂದ ಗೊಂದಲಕ್ಕೊಳಗಾಗಿದ್ದಾರೆ.

"ನಿಮ್ಮ ವೆಚ್ಚಗಳು ಇಲ್ಲಿ ಹೆಚ್ಚಿನ ಭಾರತೀಯರಿಗಿಂತ ಖಂಡಿತವಾಗಿಯೂ ಹೆಚ್ಚಿವೆ. ಆದರೆ ನಿಮ್ಮ ಜೀವನಶೈಲಿಯೂ ವಿಭಿನ್ನವಾಗಿದೆ ಎಂದು ನನಗೆ ಖಚಿತವಾಗಿದೆ" ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬರು, "ಮನೆ ಕೆಲಸದಾಕೆಗೆ 45000 ಸಾವಿರ... ನೀವು ನಿಜವಾಗಿಯೂ ಹೆಚ್ಚು ಪಾವತಿಸುತ್ತಿದ್ದೀರಿ ಮತ್ತು ಅದು ಸ್ಥಳೀಯರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ.

ಮೂರನೆಯವರು, "20ಕ್ಕೂ ಅಧಿಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಾನು ಒಂದೇ ತಿಂಗಳಲ್ಲಿ ಇಲ್ಲಿ ಉಲ್ಲೇಖಿಸಿದ ಮೊತ್ತದ ಅರ್ಧವನ್ನು ಸಹ ಖರ್ಚು ಮಾಡಿಲ್ಲ ಎಂದು ಹೇಳಿದ್ದಾರೆ.

ನಾಲ್ಕನೆಯವರು "ನೀವೇನು ತಾಜ್ ಹೋಟೆಲ್‌ನಲ್ಲಿ ವಾಸಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದು, ಖಂಡಿತವಾಗಿಯೂ ಪ್ರತಿಷ್ಠಿತ ಅಪಾರ್ಟ್ಮೆಂಟ್ ನ 3bhk ಸಹ ಮನೆ ಕೂಡ ತಿಂಗಳಿಗೆ 40k ವರೆಗೆ ಹೋಗುತ್ತದೆ, ಅಷ್ಟೇ." ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ಸಂಸತ್ ನಲ್ಲಿ ಹೈಡ್ರಾಮಾ: ಟ್ರಂಪ್ ಭಾಷಣ ವೇಳೆ Palestine ಪರ ಸಂಸದರ ಘೋಷಣೆ! ಹೊರದಬ್ಬಿದ ಭದ್ರತಾ ಸಿಬ್ಬಂದಿ

'ಕಾರ್ಯತಂತ್ರವೋ ಅಥವಾ ತಪ್ಪಿದ ಅವಕಾಶವೋ': ಗಾಜಾ ಶೃಂಗಸಭೆಗೆ ಕೆ.ವಿ ಸಿಂಗ್ ಪ್ರಾತಿನಿಧ್ಯ ಕುರಿತು ಶಶಿ ತರೂರ್ ಟೀಕೆ!

2ನೇ ಟೆಸ್ಟ್: ವಿಂಡೀಸ್ ವೇಗಿಯ ಪೆಟ್ಟಿಗೆ ಮೈದಾನದಲ್ಲೇ ಒದ್ದಾಡಿದ ಕೆಎಲ್ ರಾಹುಲ್, ಕೂದಲೆಳೆ ಅಂತರದಲ್ಲಿ ಅಪಾಯ ಮಿಸ್! Video

ಧಾರವಾಡ ರಂಗಾಯಣ ನಿರ್ದೇಶಕ, ಹಾಸ್ಯ ಚಿತ್ರನಟ ರಾಜು ತಾಳಿಕೋಟಿ ನಿಧನ

ಕಾಂತಾರ: ಅಧ್ಯಾಯ 1: ಕರ್ನಾಟಕದಲ್ಲಿ 11 ದಿನಕ್ಕೆ ಹೊಸ ಮೈಲಿಗಲ್ಲು; KGF 2 ಒಟ್ಟಾರೆ ಕಲೆಕ್ಷನ್ ಧೂಳಿಪಟ; 250 ಕೋಟಿ ರೂ ಕಲೆಕ್ಷನ್ ನಿರೀಕ್ಷೆ!

SCROLL FOR NEXT