ಹೊರಮಾವಿನಲ್ಲಿ ಗಣತಿದಾರರಿಂದ ಸಮೀಕ್ಷೆ 
ರಾಜ್ಯ

ಬೆಂಗಳೂರು: ಸಮೀಕ್ಷೆಯಲ್ಲಿ ಭಾಗವಹಿಸಲು ಜನರ ನಿರಾಸಕ್ತಿ; ಗಣತಿದಾರರಿಗೆ ಬಾಗಿಲು ತೆರೆಯದೆ ದುರ್ವರ್ತನೆ

ಬನಶಂಕರಿಯಲ್ಲಿ, 30 ಫ್ಲಾಟ್‌ಗಳಲ್ಲಿ, ಕೇವಲ ಇಬ್ಬರು ಮಾತ್ರ ಸಹಕರಿಸಿದ್ದಾರೆ. ಇದು ಕೇವಲ ಒಂದು ಘಟನೆಯಲ್ಲ, ಇದು ನಗರದಾದ್ಯಂತ ನಡೆಯುತ್ತಿರುವ ಒಂದು ಮಾದರಿಯಾಗಿದೆ.

ಬೆಂಗಳೂರು: ಶೇ. 15 ಕ್ಕಿಂತ ಹೆಚ್ಚು ಮನೆಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವುದರಿಂದ ಬೆಂಗಳೂರಿನಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿರುವ ಸರ್ಕಾರಿ ನೌಕರರ ತಂಡಕ್ಕೆ ನಿರಾಸಕ್ತಿ ಮೂಡಿದೆ.

ಬನಶಂಕರಿಯಲ್ಲಿ, 30 ಫ್ಲಾಟ್‌ಗಳಲ್ಲಿ, ಕೇವಲ ಇಬ್ಬರು ಮಾತ್ರ ಸಹಕರಿಸಿದ್ದಾರೆ. ಇದು ಕೇವಲ ಒಂದು ಘಟನೆಯಲ್ಲ, ಇದು ನಗರದಾದ್ಯಂತ ನಡೆಯುತ್ತಿರುವ ಒಂದು ಮಾದರಿಯಾಗಿದೆ. ನಾವು ಕೆಲವು ಮನೆಗಳಿಗೆ ನಾಲ್ಕೈದು ಬಾರಿ ಭೇಟಿ ನೀಡಿದ್ದೇವೆ. ಅವರು ಬಾಗಿಲು ತೆರೆಯುವುದಿಲ್ಲ. ಕೆಲವರು ಅವಮಾನ ವ್ಯಕ್ತ ಪಡಿಸುತ್ತಾರೆ. ಆದರೆ ನಾವು ನಮ್ಮ ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ ಎಂದು ದಣಿದ ಗಣತಿದಾರರು ಹೇಳಿದರು.

ಕೆಲವು ಗಣತಿದಾರರ ವಿರುದ್ಧ ಜನರು ತೀವ್ರ ದ್ವೇಷ ಕಾರಿದ್ದಾರೆ. ವಿಶೇಷವಾಗಿ ರಾಜ್ಯದ ಹೊರಗಿನಿಂದ ಕರ್ನಾಟಕದಲ್ಲಿ ನೆಲೆಸಿರುವವರಿಂದ, ರಾಜ್ಯದ ಅಭಿವೃದ್ಧಿಯಲ್ಲಿ ಯಾವುದೇ ಸ್ಪಷ್ಟ ಪಾಲು ಇಲ್ಲ. ಹೀಗಾಗಿ ನಿಮ್ಮ ಸರ್ಕಾರಕ್ಕೆ ಕೆಲಸವಿಲ್ಲ, ಮತ್ತು ನಿಮಗೂ ಕೆಲಸವಿಲ್ಲ ಅದಕ್ಕಾಗಿಯೇ ನೀವು ನಮಗೆ ತೊಂದರೆ ನೀಡುತ್ತಿದ್ದೀರಿ ಎಂದು ಒಬ್ಬ ವ್ಯಕ್ತಿ ಗಣತಿದಾರರ ಮೇಲೆ ಗುಡುಗಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಶೇ.40 ಕ್ಕಿಂತ ಕಡಿಮೆ ಕೆಲಸ ಪೂರ್ಣಗೊಂಡಿರುವುದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 24 ರಿಂದ 31 ರವರೆಗೆ ಗಡುವನ್ನು ವಿಸ್ತರಿಸಿದ್ದಾರೆ. ದೀಪಾವಳಿಗೆ ಅಕ್ಟೋಬರ್ 21 ರಿಂದ 23 ರವರೆಗೆ ಸಣ್ಣ ವಿರಾಮವನ್ನು ಸಹ ಘೋಷಿಸಲಾಗಿದೆ.

ತಾಂತ್ರಿಕ ದೋಷಗಳು ಮತ್ತು ಸಮೀಕ್ಷೆಯ ಮಧ್ಯದ ಸಾಫ್ಟ್‌ವೇರ್ ಬದಲಾವಣೆಗಳನ್ನು ಸಹ ಸಮೀಕ್ಷಕರು ವಿಳಂಬಕ್ಕೆ ಕಾರಣವೆಂದು ತಿಳಿಸಿದ್ದಾರೆ. ಮೂವತ್ತು ವರ್ಷಗಳ ಹಿಂದೆ, ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳನ್ನು ಕೇಳಿತು. ನಾಗರಿಕರು ಸಹಕರಿಸದಿದ್ದರೆ ನಾವು ಅದನ್ನು ಹೇಗೆ ಮಾಡಬಹುದು ಎಂದು ಸಮೀಕ್ಷಕರೊಬ್ಬರು ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ನಾಗರಿಕರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸಿ, ಇದು ಸಮಗ್ರ ಅಭಿವೃದ್ಧಿಗಾಗಿ ಸಮೀಕ್ಷೆ. ಭಾಗವಹಿಸುವುದು ನಾಗರಿಕ ಕರ್ತವ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ.. ಸುಳ್ಳು ಸುದ್ದಿ ಹರಡಿದ್ರೆ ಕೇಸ್ ಹಾಕ್ತೀವಿ': ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯ ಸರ್ಕಾರಕ್ಕೆ ಸೆಡ್ಡು: ಕಲಬುರಗಿಯಲ್ಲಿ ನಡೆದ RSS ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ವೈದ್ಯ, Congress ಕಾರ್ಯಕರ್ತರು!

ತಮ್ಮ ಪಕ್ಷದ ಡಿಸಿಎಂಗೆ ಮತ ಹಾಕಬೇಡಿ ಎಂದು ಬಿಹಾರಿಗಳಿಗೆ ಬಿಜೆಪಿ ನಾಯಕ ಮನವಿ!

'96 ಲಕ್ಷ ನಕಲಿ ಮತದಾರರ ಸೇರ್ಪಡೆ': ಚುನಾವಣಾ ಆಯೋಗದ ವಿರುದ್ಧ ರಾಜ್ ಠಾಕ್ರೆ ಕಿಡಿ

ಶಿಮ್ಲಾದಲ್ಲಿ ಪಂಚಾಯತ್ ಮುಖ್ಯಸ್ಥನಿಂದ ಬಾಲಕಿ ಮೇಲೆ ಅತ್ಯಾಚಾರ!

SCROLL FOR NEXT