ಬೆಂಗಳೂರು: ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಪರಿಚಯವಾಗಿದ್ದ ವ್ಯಕ್ತಿಯೋರ್ವ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಸೆಕ್ಸ್ ಮಾಡಿ ಇದೀಗ ವಂಚಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಥಣಿಸಂದ್ರದ ಸರೈ ಪಾಳ್ಯದ ನಿವಾಸಿ 30 ವರ್ಷದ ಮೊಹಮ್ಮದ್ ಇಶಾಕ್ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿ ಸಂತ್ರಸ್ತ ಮಹಿಳೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. 2024ರ ಅಕ್ಟೋಬರ್ ನಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಮೊಹಮ್ಮದ್ ಇಶಾಕ್ ಪರಿಚಯವಾಗಿತ್ತು. ನಂತರ ಇಬ್ಬರು ಪರಸ್ಪ ಚಾಟಿಂಗ್ ಮಾಡುತ್ತಿದ್ದೇವೆ. ಸಲುಗೆ ಬೆಳೆದಂತೆ ನನಗೆ ಮದುವೆಯಾಗುವ ಭರವಸೆ ನೀಡಿದನು. ಆನಂತರ ಹೆಬ್ಬಾಳ, ದಾಸರಹಳ್ಳಿ ಬಳಿಯ ಹೋಟೆಲ್‌ಗೆ ತನ್ನನ್ನು ಕರೆದೊಯ್ದು ಸೆಕ್ಸ್ ಮಾಡಿದ್ದನು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ನನ್ನನ್ನು ಮದುವೆಯಾಗುವುದಾಗಿ ಹೇಳುತ್ತಿದ್ದವನ್ನು ಇದೀಗ ಬೇರೋಬ್ಬ ಮಹಿಳೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. 2025ರ ಸೆಪ್ಟೆಂಬರ್ ನಲ್ಲಿ ಆತ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಷಯ ತಿಳಿದು ನಾನು ಈ ಬಗ್ಗೆ ಪ್ರಶ್ನಿಸಿದೆ ಅದಕ್ಕೆ ಇಶಾಕ್, ನಿನ್ನ ದಾರಿ ನೀನು ನೋಡಿಕೋ ಎಂದು ಹೇಳಿದ್ದನು. ಅಲ್ಲದೆ ಈ ವಿಷಯವಾಗಿ ಪದೇ ಪದೇ ಕರೆ ಮಾಡಿದರೆ ನಿನ್ನನ್ನು ಕೊಲ್ಲಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದನು ಎಂದು ಮಹಿಳೆ ಆರೋಪಿಸಿದ್ದಾಳೆ. ಮಹಿಳೆಯ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಪೊಲೀಸರು ತಿಳಿಸಿದ್ದಾರೆ.