ಟಿಜೆಎಸ್ ಜಾರ್ಜ್ 
ರಾಜ್ಯ

TJS ಜಾರ್ಜ್ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ದತ್ತಿ ಪ್ರಶಸ್ತಿ ಸ್ಥಾಪನೆ: MLC ಕೆ. ಶಿವಕುಮಾರ್‌ ಘೋಷಣೆ

ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಈಗಾಗಲೇ ಸಾಮಾಜಿಕ ನ್ಯಾಯದ ಕುರಿತು ಬರೆಯುವ ಅಂಕಣಕಾರರಿಗೆ “ಮೂಕನಾಯಕ ಡಾ. ಬಿ.ಆರ್.‌ ಅಂಬೇಡ್ಕರ್‌ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯಡಿಯಲ್ಲಿನ ಮಾಧ್ಯಮ ಸಂಸ್ಥೆಗಳ ಸಂಪಾದಕರನ್ನು ಗೌರವಿಸಲು ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಅವರ ಹೆಸರಿನಲ್ಲಿ ರಾಷ್ಟ್ರೀಯ ಮಟ್ಟದ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಕೆ ಶಿವಕುಮಾರ್ ಶನಿವಾರ ಘೋಷಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಕೆಲಸದಲ್ಲಿ ನಿಷ್ಪಕ್ಷಪಾತತೆಯನ್ನು ಎತ್ತಿಹಿಡಿಯುವ ಪತ್ರಕರ್ತರನ್ನು ಗುರುತಿಸಲು ಜಾರ್ಜ್ ಅವರ ಹೆಸರಿನಲ್ಲಿ 1.5 ಲಕ್ಷ ರೂ.ಗಳ ದತ್ತಿ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಈಗಾಗಲೇ ಸಾಮಾಜಿಕ ನ್ಯಾಯದ ಕುರಿತು ಬರೆಯುವ ಅಂಕಣಕಾರರಿಗೆ “ಮೂಕನಾಯಕ ಡಾ. ಬಿ.ಆರ್.‌ ಅಂಬೇಡ್ಕರ್‌ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಟಿ.ಜೆ.ಎಸ್.‌ ಜಾರ್ಜ್‌ ಅವರು ನಿಷ್ಪಕ್ಷಪಾತಿ ಪತ್ರಕರ್ತರಾಗಿದ್ದರು. ಅವರು ಸ್ವತಃ ಪತ್ರಕರ್ತರ ವರದಿಗಳನ್ನು ತಿದ್ದಿ, ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.

ಟಿಜೆಎಸ್ ಜಾರ್ಜ್ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರನ್ನು ಗುರುತಿಸುವ ಸಲುವಾಗಿ 1.5 ಲಕ್ಷ ರೂ.ಗಳ ದತ್ತಿನಿಧಿ ಸ್ಥಾಪಿಸುವುದಾಗಿ ತಿಳಿಸಿದರು.

ನಾನು ಇನ್ನೂ ಪತ್ರಿಕೋದ್ಯಮದಿಂದ ಹೊರ ಬಂದಿಲ್ಲ. ಸದನದಲ್ಲಿಯೂ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಕುರಿತು ದನಿ ಎತ್ತುತ್ತೇನೆ ಎಂದರು.

ಇದೇ ವೇಳೆ ತಮ್ಮ ಪತ್ರಕರ್ತ ವೃತ್ತಿ ಜೀವನ ಹಾಗೂ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಣೆಯ ಸಂದರ್ಭಗಳನ್ನು ಮೆಲುಕು ಹಾಕಿದ ಅವರು, ಅಕಾಡೆಮಿಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು, ಶಿವಕುಮಾರ್‌ ಅವರು ಮೂರು ದಶಕಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದು, ತಮ್ಮ ನಿಷ್ಠುರ ವರದಿಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ಇಂದು ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವುದು ಪತ್ರಕರ್ತರಿಗೆಲ್ಲ ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಪಂಚಾಯಿತಿ ಪ್ರತಿನಿಧಿಗಳಿಗೆ ಭತ್ಯೆ ಹೆಚ್ಚಳ, ಪಿಂಚಣಿ, ವಿಮೆ ಸೌಲಭ್ಯ: ತೇಜಸ್ವಿ ಯಾದವ್

Cabinet reshuffle: ಡಿಸೆಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆ; ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ರಾ?

ಅಮೆರಿಕ ಬೆದರಿಕೆಗೆ ಬಗ್ಗದ ಭಾರತ; ಅಕ್ಟೋಬರ್ ನಲ್ಲಿ ರಷ್ಯಾದಿಂದ ತೈಲ ಆಮದು ಪ್ರಮಾಣ ಇನ್ನೂ ಹೆಚ್ಚಳ!

ಸಚಿವ ಸಂಪುಟ ಪುನರಾಚನೆ: ಸಿದ್ದುಗೆ ಬೆಂಬಲ, ಸಿಎಂ ಆಗಿ ಮುಂದುವರೆಯುತ್ತಾರೆಂದರೆ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದ ಸಚಿವರು

'' ಸರಿಯಾಗಿ ಆಡು, ಇಲ್ಲದಿದ್ರೆ ತಂಡದಿಂದ ಹೊರಗೆ ಕೂರಿಸ್ತೀನಿ'' ಹರ್ಷಿತ್ ರಾಣಾ ಗೆ ಬೈದಿದ್ದ ಗಂಭೀರ್! ಫೋನ್ ಸಂಭಾಷಣೆ ಬಹಿರಂಗ

SCROLL FOR NEXT