ಮರವೇರಿ ಕುಳಿತಿದ್ದ ವ್ಯಕ್ತಿ 
ರಾಜ್ಯ

ಗದಗ: ಕಳ್ಳನೆಂದು ಭಾವಿಸಿ ಅಟ್ಟಾಡಿಸಿದ ಸ್ಥಳೀಯರು; 4 ಗಂಟೆಗಳ ಕಾಲ ಮರದ ಮೇಲೆ ಕುಳಿತ ಆಸಾಮಿ!

ಬೆಳಗಾವಿಯಿಂದ ಬಂದ ಬಸವರಾಜ ಸೊಲ್ಲಾಪುರ ವಿವೇಕಾನಂದ ನಗರಕ್ಕೆ ಬಂದು ಬಾಗಿಲು ತಮ್ಮ ಸ್ನೇಹಿತನ ಮನೆ ಎಂದು ಬಾಗಿಲು ತಟ್ಟಿದ್ದಾನೆ. ಆದರೆ ಅದು ಅವನು ಹುಡುಕುತ್ತಿದ್ದ ತನ್ನ ಸ್ನೇಹಿತನ ಮನೆ ಅಲ್ಲ ಎಂದು ತಿಳಿದ ನಂತರ ಅಲ್ಲಿಂದ ಹೊರಟಿದ್ದಾನೆ.

ಗದಗ: ಸೋಮವಾರ ಗದಗದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಸ್ಥಳೀಯರು ಕಳ್ಳನೆಂದು ಭಾವಿಸಿದ್ದರಿಂದ ವ್ಯಕ್ತಿಯೊಬ್ಬ ತೆಂಗಿನ ಮರ ಹತ್ತಿ ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲೇ ಕುಳಿತಿದ್ದ.

ಬೆಳಗಾವಿಯಿಂದ ಬಂದ ಬಸವರಾಜ ಸೊಲ್ಲಾಪುರ ವಿವೇಕಾನಂದ ನಗರಕ್ಕೆ ಬಂದು ಬಾಗಿಲು ತಮ್ಮ ಸ್ನೇಹಿತನ ಮನೆ ಎಂದು ಬಾಗಿಲು ತಟ್ಟಿದ್ದಾನೆ. ಆದರೆ ಅದು ಅವನು ಹುಡುಕುತ್ತಿದ್ದ ತನ್ನ ಸ್ನೇಹಿತನ ಮನೆ ಅಲ್ಲ ಎಂದು ತಿಳಿದ ನಂತರ ಅಲ್ಲಿಂದ ಹೊರಟಿದ್ದಾನೆ. ಇದರಿಂದ ಅನುಮಾನಗೊಂಡ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಬಂದಾಗ, ಬಸವರಾಜ್ ಸಿಕ್ಕಿಬೀಳುವ ಭಯದಿಂದ ಹತ್ತಿರದ ತೆಂಗಿನ ಮರ ಹತ್ತಿದ್ದಾನೆ. ಪೊಲೀಸರು ಮತ್ತು ನಿವಾಸಿಗಳು ಹಲವಾರು ಗಂಟೆಗಳ ಕಾಲ ಆ ಪ್ರದೇಶದಲ್ಲಿ ಆತನಿಗಾಗಿ ಹುಡುಕಾಡಿದರೂ ಸಿಗಲಿಲ್ಲ. ಆದರೆ ಯಾರೋ ಮರದ ಮೇಲೆ ಕುಳಿತಿದ್ದನ್ನು ನೋಡಿದರು. ಪೊಲೀಸರು ಮತ್ತು ಸ್ಥಳೀಯರು ಪದೇ ಪದೇ ಮನವಿ ಮಾಡಿದರೂ, ಬಸವರಾಜ್ ಕೆಳಗೆ ಬರಲು ನಿರಾಕರಿಸಿದ.

ಆಗ 50 ರಿಂದ 60 ಜನರ ಗುಂಪು ಸ್ಥಳದಲ್ಲಿ ಜಮಾಯಿಸಿ, ಅವನನ್ನು ಕಳ್ಳನೆಂದು ಭಾವಿಸಿದರು. ಅಗ್ನಿಶಾಮಕ ದಳದವರು ಏಣಿಯೊಂದಿಗೆ ಬಂದು ಅವರಿಗೆ ಯಾವುದೇ ರೀತಿ ತೊಂದರೆ ನೀಡುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟ ನಂತರ ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಮತಕ್ಕಾಗಿ 'ಭರತ ನಾಟ್ಯ'ನೂ ಮಾಡ್ತಾರೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

Video: 17 ಮಕ್ಕಳು ಸೇರಿ 19 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವ್ಯಕ್ತಿ ಮುಂಬೈ ಪೊಲೀಸ್ ಗುಂಡಿಗೆ ಬಲಿ!

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

ಚುನಾವಣಾ ಆಯೋಗದ SIR ಗೆ ಹೆದರಿ ಆತ್ಮಹತ್ಯೆಗೆ ಶರಣಾದ ಪಶ್ಚಿಮ ಬಂಗಾಳದ ವ್ಯಕ್ತಿ!

Bihar Poll: ನಿತೀಶ್ ಕುಮಾರ್ ಸಿಎಂ ಆಗಲ್ವಾ? ಅಮಿತ್ ಶಾ ದೊಡ್ಡ ಸುಳಿವು!

SCROLL FOR NEXT