ಯು ಟಿ ಖಾದರ್ 
ರಾಜ್ಯ

ಎಲ್ಲ ರೋಗಕ್ಕೂ ಮದ್ದಿದೆ, ಅಸೂಯೆಗೆ ಮದ್ದಿಲ್ಲ: ಕಾಗೇರಿ ಭ್ರಷ್ಟಾಚಾರ ಆರೋಪಕ್ಕೆ UT ಖಾದರ್ ತಿರುಗೇಟು; Video

ಅವರ ಆರೋಪಗಳನ್ನು ಗಮನಿಸಿದ್ದೇನೆ. ಅವರು ಎಲ್ಲೋ ಕುಳಿತು ಮಾತನಾಡಿದಂತೆ, ನನಗೆ ಮಾತನಾಡಲು ಆಗುವುದಿಲ್ಲ. ಅವರು ಹೇಳಬೇಕಾದ ವಿಚಾರಗಳನ್ನು ಲಿಖಿತವಾಗಿ ನೀಡಿದರೆ, ಅದರಲ್ಲಿ ಏನಿದೆ ಪರಿಶೀಲಿಸುತ್ತೇನೆ.

ಮಂಗಳೂರು: ಎಲ್ಲ ರೋಗಕ್ಕೂ ಮದ್ದಿದೆ. ಆದರೆ, ಅಸೂಯೆಗೆ ಮದ್ದಿಲ್ಲ ಎಂದಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ತಮ್ಮ ವಿರುದ್ಧದ ಬಿಜೆಪಿ ನಾಯಕರು ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಸಭಾ ಕಾರ್ಯಾಲಯದ ಮೂಲಕ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ, ಮಾಹಿತಿ ಕೇಳುವುದಿದ್ದರೆ, ಏನಾದರೂ ಹೇಳುವುದಿದ್ದರೆ ನಾಳೆ ಕಚೇರಿಗೆ ಬಂದು ಲಿಖಿತವಾಗಿ ದೂರು ಸಲ್ಲಿಸಲಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ವಿಧಾನಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭಾ ಕಾರ್ಯಾಲಯದ ಬಗ್ಗೆ ಮಾಡಿರುವ ಆರೋಪಗಳಿಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಕಾಗೇರಿ ಅವರೂ ರಾಜಕೀಯ ವ್ಯಕ್ತಿ. ಶಾಸಕ, ಸಂಸದರಾಗಿ ಗೌರವಯುತ ಸ್ಥಾನದಲ್ಲಿದ್ದವರು. ಅವರ ಆಲೋಚನೆಗಳನ್ನು ನಾನು ಗೌರವಿಸುತ್ತೇನೆ.

ಅವರ ಆರೋಪಗಳನ್ನು ಗಮನಿಸಿದ್ದೇನೆ. ಅವರು ಎಲ್ಲೋ ಕುಳಿತು ಮಾತನಾಡಿದಂತೆ, ನನಗೆ ಮಾತನಾಡಲು ಆಗುವುದಿಲ್ಲ. ಅವರು ಹೇಳಬೇಕಾದ ವಿಚಾರಗಳನ್ನು ಲಿಖಿತವಾಗಿ ನೀಡಿದರೆ, ಅದರಲ್ಲಿ ಏನಿದೆ ಪರಿಶೀಲಿಸುತ್ತೇನೆ. ಅದರಂತೆ ವಿಧಾನಸಭೆ ಗೌರವ ಹೆಚ್ಚು ಮಾಡಲು ಕ್ರಮ ವಹಿಸುತ್ತೇನೆ. ಈ ಕುರಿತ ಸಕಾರಾತ್ಮಕ ಚರ್ಚೆಗೆ ಸಿದ್ಧ ಎಂದರು.

ಕರ್ನಾಟಕ ವಿಧಾನಸಭೆಗೆ ಈಗ ರಾಜ್ಯ ಮತ್ತು ದೇಶದಲ್ಲಿ ಮಾತ್ರವಲ್ಲ ಅಂತರರಾಷ್ಟ್ರಿಯ ಮಟ್ಟದಲ್ಲೂ ಗೌರವ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಅದಕ್ಕೆ ದೃಷ್ಟಿ ಬೀಳಬಾರದು ಎಂದು ಅವರು ಆರೋಪ ಮಾಡಿದ್ದಾರೆ. ಎಲ್ಲ ರೋಗಕ್ಕೆ ಮದ್ದು ಇದೆ. ಅಸೂಯೆಗೆ ಮದ್ದಿಲ್ಲ. ಹೊಸತಾಗಿ ಮನೆ ನಿರ್ಮಿಸುವವರು ಕಟ್ಟಡಕ್ಕೆ ದೃಷ್ಟಿ ಬೀಳಬಾರದು ಎಂದು ದೃಷ್ಟಿಬೊಂಬೆ ಕಟ್ಟುತ್ತಾರೆ. ಅವರ ಆರೋಪ ಕಟ್ಟಡದ ದೃಷ್ಟಿಬೊಂಬೆ ಇದ್ದಂತೆ ಎಂದರು.

ರಾಜಕೀಯವಾಗಿ ಹೇಳುವುದಕ್ಕೆ ನನಗೂ ಬಹಳಷ್ಟು ವಿಚಾರಗಳಿವೆ. ರಾಜಕೀಯವಾಗಿ ಅವರು ಮಾತನಾಡಬಹುದು. ಆದರೆ ನಾನು ಸಂವಿಧಾನಬದ್ಧ ಹುದ್ದೆಯಲ್ಲಿದ್ದೇನೆ. ನಾನೀಗ ಪ್ರತಿಪಕ್ಷದ ಮಿತ್ರ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: 17 ಮಕ್ಕಳು ಸೇರಿ 19 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವ್ಯಕ್ತಿ ಮುಂಬೈ ಪೊಲೀಸ್ ಗುಂಡಿಗೆ ಬಲಿ!

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

Bihar Poll: ನಿತೀಶ್ ಕುಮಾರ್ ಸಿಎಂ ಆಗಲ್ವಾ? ದೊಡ್ಡ ಸುಳಿವು ನೀಡಿದ ಅಮಿತ್ ಶಾ!

ಡಿಕೆಶಿ, ತೇಜಸ್ವಿ ಸೂರ್ಯ ಜಟಾಪಟಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಬಗ್ಗೆ ಕೇಂದ್ರ ಸಚಿವ ಖಟ್ಟರ್ ಹೇಳಿದ್ದೇನು?

ಮಹಾರಾಷ್ಟ್ರದ ಎಲ್ಲಾ ಶಾಲೆಗಳಿಗೆ 'ವಂದೇ ಮಾತರಂ' ಪೂರ್ಣ ಹಾಡಲು ಸೂಚನೆ

SCROLL FOR NEXT