ಬಿಡಬ್ಲ್ಯುಎಸ್ ಎಸ್ ಬಿ 
ರಾಜ್ಯ

BWSSB ಸ್ವಚ್ಛತಾ ಕಾರ್ಮಿಕರಿಗೆ 'ಅನ್ನಪೂರ್ಣ ಯೋಜನೆ': ಸ್ಮಾರ್ಟ್ ಕಾರ್ಡ್‌ ಬಿಡುಗಡೆ

ಮಂಡಳಿಯಲ್ಲಿ ಕೆಲಸ ಮಾಡುತ್ತಿರುವ 700 ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರಿಗೆ ಆಕ್ಸಿಸ್ ಬ್ಯಾಂಕ್‌ನಿಂದ ನಡೆಸಲ್ಪಡುವ ಸ್ಮಾರ್ಟ್ ಕಾರ್ಡ್'ಗಳನ್ನು ನೀಡಲಾಗುತ್ತದೆ. ಪ್ರತಿ ಕಾರ್ಡ್‌ಗೆ 1,500 ರೂ.ಗಳ ಮಾಸಿಕ ಭತ್ಯೆಯನ್ನು ನೇರವಾಗಿ ಜಮಾ ಮಾಡಲಾಗುತ್ತದೆ.

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯು ಮಂಡಳಿಯ ಸ್ವಚ್ಛತಾ ಕಾರ್ಮಿಕರಿಗ ವಿಶಿಷ್ಟ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಕಾರ್ಮಿಕರಿಗೆ ಸ್ಮಾರ್ಟ್ ವಿತರಿಸಲು ಮುಂದಾಗಿದೆ.

ಮಂಡಳಿಯ ನೈರ್ಮಲ್ಯೀಕರಣ ಕಾರ್ಮಿಕರ ಜೀವನ ಗುಣಮಟ್ಟ ಹೆಚ್ಚಿಸುವ ಮತ್ತು ಅವರಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಜಲಮಂಡಳಿ ಅನ್ನಪೂರ್ಣ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಯೋಜನೆಯಡಿ, ಕಾರ್ಮಿಕರಿಗೆ ಉಪಹಾರಕ್ಕಾಗಿ ಪ್ರತಿದಿನ ರೂ.50ರಂತೆ ಮಾಸಿಕ ರೂ.1500 ಅನ್ನು ಸ್ಮಾರ್ಟ್ ಕಾರ್ಡ್‌ಗಳ ಮೂಲಕ ನೇರವಾಗಿ ಪಾವತಿಸಲಾಗುತ್ತದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಹಸ್ತಾಂತರಿಸುವ ಮೂಲಕ ಯೋಜನೆಗೆ ಇಂದು ಚಾಲನೆ ನೀಡಲಿದ್ದಾರೆ.

ಯೋಜನೆ ಕುರಿತು ಮಾಹಿತಿ ನೀಡಿರುವ ಜಲಮಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ಯೋಜನೆಯ ಭಾಗವಾಗಿ, ಮಂಡಳಿಯಲ್ಲಿ ಕೆಲಸ ಮಾಡುತ್ತಿರುವ 700 ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರಿಗೆ ಆಕ್ಸಿಸ್ ಬ್ಯಾಂಕ್‌ನಿಂದ ನಡೆಸಲ್ಪಡುವ ಸ್ಮಾರ್ಟ್ ಕಾರ್ಡ್'ಗಳನ್ನು ನೀಡಲಾಗುತ್ತದೆ. ಪ್ರತಿ ಕಾರ್ಡ್‌ಗೆ 1,500 ರೂ.ಗಳ ಮಾಸಿಕ ಭತ್ಯೆಯನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ನಂತರ ಈ ಕಾರ್ಡ್ ಗಳನ್ನು ಕಾರ್ಮಿಕರು ತಮ್ಮ ಆಯ್ಕೆಯ ಆಹಾರ ಮಳಿಗೆಗಳಲ್ಲಿ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.

ನಮ್ಮ ನಗರವನ್ನು ಸ್ವಚ್ಛವಾಗಿ ಇಡಲು ಹಗಲು-ರಾತ್ರಿ ಶ್ರಮಿಸುತ್ತಿರುವ ಕಾರ್ಮಿಕರಿಗೆ, ಅನ್ನಪೂರ್ಣ ಯೋಜನೆಯ ಮೂಲಕ ಅವರ ಶ್ರಮವನ್ನು ಗೌರವಿಸುತ್ತಿದ್ದೇವೆ. ಎಲ್ಲ ಕಾರ್ಮಿಕರ ದಿನದ ಆರಂಭ ಆರೋಗ್ಯಪೂರ್ಣವಾಗಿರಲಿ ಎಂಬ ಆಶಯ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಇದು ದೇಶದಲ್ಲಿಯೇ ಇಂತಹ ತಂತ್ರಜ್ಞಾನ ಆಧಾರಿತ ನೇರ ಹಣ ವರ್ಗಾವಣೆ ಮಾಡುವ ಮೊದಲ ಯೋಜನೆಯಾಗಿದೆ. ಜಲಮಂಡಳಿಯ ಈ ಯೋಜನೆಯನ್ನು ಸ್ಮಾರ್ಟ್ ನಗರದ - ಮಾನವೀಯ ವಿಸ್ತರಣೆ ಎಂದು ಪರಿಗಣಿಸುತ್ತಿದೆ. ತಂತ್ರಜ್ಞಾನ ಮತ್ತು ಮಾನವೀಯತೆಯ ಸಮ್ಮಿಲನದ ಮೂಲಕ, ಈ ಯೋಜನೆ ಇತರೆ ನಗರಗಳ ಪಾಲಿಗೆ ಮಾದರಿಯೂ ಆಗಬಹುದಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ವಿರುದ್ಧ ಯುದ್ಧ ಮಾಡಿದರೆ ಸೋಲು ಖಚಿತ: ಪಾಕಿಸ್ತಾನಕ್ಕೆ ಮಾಜಿ CIA ಅಧಿಕಾರಿ ಎಚ್ಚರಿಕೆ

Maharashtra: ಮಹಿಳಾ ಡಾಕ್ಟರ್ ಆತ್ಮಹತ್ಯೆ ಪ್ರಕರಣ, ಓರ್ವನ ಬಂಧನ; ಪ್ರಮುಖ ಆರೋಪಿಗಾಗಿ ಪೊಲೀಸರ ಶೋಧ!

'ನೀವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ' ಶಿಷ್ಯರ ಬೀದಿ ಜಗಳ, ಕಿತ್ತಾಟಕ್ಕೆ ಬ್ರೇಕ್ ಹಾಕಲು ಎಂಟ್ರಿಯಾದ ಗುರು!

Kurnool Bus Fire- ಬಸ್ಸಿನ ಸೀಟುಗಳನ್ನು ಅಕ್ರಮವಾಗಿ ಸ್ಲೀಪರ್ ಕೋಚ್ ಆಗಿ ಮಾರ್ಪಡಿಸಲಾಗಿತ್ತು: ದಾಖಲೆಗಳಿಂದ ಬಹಿರಂಗ

ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಸಚಿವ ಕೃಷ್ಣ ಭೈರೇಗೌಡ ಅಚ್ಚರಿ ಹೇಳಿಕೆ !

SCROLL FOR NEXT