ಸಂಗ್ರಹ ಚಿತ್ರ 
ರಾಜ್ಯ

Beautician ಮೇಲೆ ಖಾರದಪುಡಿ ಎರಚಿ ದರೋಡೆಗೆ ಯತ್ನ, ಮಹಿಳೆ ಬಂಧನ

ಮಧ್ಯಾಹ್ನ 12.30 ರ ಸುಮಾರಿಗೆ ಪಾರ್ಲರ್‌ಗೆ ಬಂದ ಆರೋಪಿತ ಮಹಿಳೆ, ತಾನು ಯಾರಿಗೋ ಕಾಯುತ್ತಿದ್ದೇನೆ ಎಂದು ಹೇಳಿ ಆಕೆ ತನ್ನ ಸರದಿಯನ್ನು ವಿಳಂಬ ಮಾಡುತ್ತಲೇ ಇದ್ದಳು.

ಬೆಂಗಳೂರು: ಬ್ಯೂಟಿಷಿಯನ್ ಮೇಲೆ ಖಾರದ ಪುಡಿ ಎರಚಿ ದರೋಡಗೆ ಯತ್ನ ನಡೆಸಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಚನ್ನಪಟ್ಟಣ ಪಟ್ಟಣದ ಎಂಜಿ ರಸ್ತೆಯಲ್ಲಿರುವ ಕೃತಿಕಾ ಬ್ಯೂಟಿ ಪಾರ್ಲರ್‌ನಲ್ಲಿ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆಯನ್ನು ಚನ್ನಪಟ್ಟಣ ಪಟ್ಟಣದ ನಿವಾಸಿ ಸರಿತಾ (44) ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಸಭಿಹಾ ಬಾನು (30) ಎಂಬ ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿ ಮಹಿಳೆ ಕೂಡ ಚನ್ನಪಟ್ಟಣ ಪಟ್ಟಣದ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 12.30 ರ ಸುಮಾರಿಗೆ ಪಾರ್ಲರ್‌ಗೆ ಬಂದ ಆರೋಪಿತ ಮಹಿಳೆ, ತಾನು ಯಾರಿಗೋ ಕಾಯುತ್ತಿದ್ದೇನೆ ಎಂದು ಹೇಳಿ ಆಕೆ ತನ್ನ ಸರದಿಯನ್ನು ವಿಳಂಬ ಮಾಡುತ್ತಲೇ ಇದ್ದಳು. ಸುಮಾರು ಎರಡು ಗಂಟೆಗಳ ನಂತರ ಸರಿತಾ ಒಬ್ಬಂಟಿಯಾಗಿರುವುದನ್ನು ಗಮನಿಸಿ, ಮುಖದ ಮೇಲೆ ಖಾರದ ಪುಡಿ ಎರಚುವ ಮೂಲಕ ಹಲ್ಲೆ ನಡೆಸಿದ್ದಾಳೆ. ಬಳಿಕ ಮಂಗಳ ಸೂಕ್ತ ಕಸಿದು ಪರಾರಿಯಾಗಲು ಯತ್ನಿಸಿದ್ದಾಳೆ.

ಈ ವೇಳೆ ಉರಿ ತಾಳಲಾರದೆ ಹೊರ ಹೊದ ಸರಿತಾ ಅವರು, ಸಹಾಯಕ್ಕಾಗಿ ಕೂಗಿದ್ದಾರೆ. ಈ ವೇಳೆ ಹತ್ತಿರದ ಮೆಡಿಕಲ್ ಸ್ಟೋರ್‌ನ ಮಾಲೀಕ ರವಿ ಅವರು ರಕ್ಷಣೆಗೆ ಧಾವಿಸಿದ್ದು, ಇದೇ ವೇಳೆ ಆರೋಪಿತ ಮಹಿಳೆಯನ್ನೂ ಹಿಡಿದಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರೋಪಿತ ಮಹಿಳೆಯಿಂದ 2 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದ್ದು, ಈಕೆಯ ಪೂರ್ವಾಪರಗಳನ್ನು ಪರಿಶೀಲಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಚನ್ನಪಟ್ಟಣ ಪೂರ್ವ ಪೊಲೀಸರು ಸಭಿಹಾ ಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 309 (4) ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಜನ ಸಾಮಾನ್ಯರಿಗಾಗಿ ಸುಪ್ರೀಂಕೋರ್ಟ್' : ಬಲವಾದ ಸಂದೇಶ ರವಾನಿಸಿದ CJI ಸೂರ್ಯಕಾಂತ್!

ಬೆಂಗಳೂರಿನಲ್ಲಿ 2,215 ಕೋಟಿ ರೂ. ಮೊತ್ತದ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಪುಟ ಅನುಮೋದನೆ!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

ಇಂಡಿಗೋ ವಿಮಾನಗಳಲ್ಲಿ ವ್ಯತ್ಯಯ: ಇತರೆ ಏರ್‌ಲೈನ್‌ಗಳಿಂದ ಟಿಕೆಟ್ ದರ ಏರಿಕೆಗೆ ಸರ್ಕಾರ ಬ್ರೇಕ್

Love jihad case: 'ಮತಾಂತರವಾಗದಿದ್ರೆ 32 ಪೀಸ್, ಖಾಸಗಿ ಫೋಟೋಗಳಿಂದ ಬ್ಲಾಕ್ ಮೇಲ್': ಹಿಂದೂ ಯುವತಿಗೆ ಉಸ್ಮಾನ್ ಬೆದರಿಕೆ! Video

SCROLL FOR NEXT