ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಕ್ರಮ ಸಂಬಂಧ ಪ್ರಕರಣ ವರದಿಯಾಗಿದ್ದು, ಮೂರು ಮಕ್ಕಳ ತಾಯಿಯೊಬ್ಬಳು ಲವರ್ ಜೊತೆ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ.
ಬೆಂಗಳೂರಿನ ಆನೇಕಲ್ ತಾಲೂಕಿನ ಬಸವನಪುರದಲ್ಲಿ ಮೂರು ಮಕ್ಕಳ ತಾಯಿಯೊಬ್ಬಳು ಲವರ್ ಜೊತೆ ಪರಾರಿಯಾಗಿದ್ದು, ಈ ಕುರಿತು ತನ್ನ ಗಂಡ ಮಾಧ್ಯಮಗಳೊಂದಿಗೆ ಕಷ್ಟ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಜೀವನಪೂರ್ತಿ ಜೊತೆಗಿರುತ್ತೇನೆ ಎಂದು ಬಂದವಳು ಲವರ್ ಗೋಸ್ಕರ ಮೂರು ಮಕ್ಕಳು ಸೇರಿ ಗಂಡನನ್ನು ಬಿಟ್ಟು ಓಡಿ ಹೋಗಿರುವಂತಹ ಘಟನೆ ಬನ್ನೇರುಘಟ್ಟ (Bannerughatta) ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ. ನನಗೆ ಪ್ರಿಯಕರನೇ ಬೇಕೆಂದು ಓಡಿಹೋದ ಹೆಂಡತಿಗಾಗಿ ಗಂಡ ಕಣ್ಣೀರು ಹಾಕಿದ್ದಾರೆ.
'ಪತಿ ನೀಡಿರುವ ಮಾಹಿತಿಯಂದೆ ಇದೇ ಬಸವನಪುರ ನಿವಾಸಿ ಸಂತೋಷ್ ಎಂಬಾತ ನಾನು ಕೆಲಸಕ್ಕೆ ಹೋದ ಬಳಿಕ ನನ್ನ ಹೆಂಡತಿಯನ್ನು ಪುಸಲಾಯಿಸಿ ಆಕೆಯನ್ನು ಬಲೆಗೆ ಬೀಳಿಕೊಂಡಿದ್ದಾನೆ. ನಾನು ಕೆಲಸಕ್ಕೆ ಹೋದ ಮನೆಗೆ ಬಂದು ಆಕೆಯೊಂದಿಗೆ ಚಕ್ಕಂದವಾಡುತ್ತಿದ್ದ. ಈ ಕುರಿತ ಸಾಕಷ್ಟು ವಿಡಿಯೋ ಮತ್ತು ಫೋಟೋಗಳು ನನ್ನ ಬಳಿ ಇವೆ ಎಂದು ಪತಿ ಹೇಳಿಕೊಂಡಿದ್ದಾರೆ.
ಮದುವೆಯಾಗಿ 11 ವರ್ಷ ಆಯಿತು. ನಮಗೆ ಮೂರು ಜನ ಮಕ್ಕಳಿದ್ದಾರೆ. ಈಗ ನನ್ನ ಹೆಂಡತಿ ಸಂತೋಷ್ ಜೊತೆ ಪರಾರಿಯಾಗಿದ್ದಾಳೆ. ಈ ಕುರಿತು ಅವನನ್ನು ವಿಚಾರಿಸಿದರೆ ಆಕೆಯೇ ನನ್ನೊಂದಿಗೆ ಬಂದಿದ್ದಾಳೆ ಎಂದು ನಿರ್ಲಕ್ಷ್ಯ ಉತ್ತರ ನೀಡಿದ್ದಾನೆ ಎಂದು ಪತಿ ಹೇಳಿದ್ದಾನೆ. ಕುರಿತು ಪೊಲೀಸ್ ದೂರು ದಾಖಲಿಸುವುದಾಗಿ ಪತಿ ಕಣ್ಣೀರು ಹಾಕಿದ್ದಾರೆ.