ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ; ನಗರದ ಹಲವಡೆ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗಗಳು ಹೀಗಿವೆ...

ಪ್ರಪಂಚದಾದ್ಯಂತ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್-ಎ-ಮಿಲಾದ್ ಎಂದು ಆಚರಿಸುತ್ತಾರೆ. ಈ ದಿನವನ್ನು ನಬಿದ್, ಮೌಲಿದ್ ಅಥವಾ ಮೌಲಿದ್ ಆನ್-ನಬಿ ಎಂದೂ ಕರೆಯಲಾಗುತ್ತದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ನಗರ ಪೊಲೀಸರು ಹಲವೆಡೆ ಸಂಚಾರ ಬದಲಾವಣೆ ಮಾಡಿದ್ದಾರೆ.

ಕೆ.ಜಿ.ಹಳ್ಳಿ, ಪುಲಿಕೇಶಿನಗರ, ಶಿವಾಜಿನಗರ ಭಾಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಇಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೆ.ಜಿ.ಹಳ್ಳಿ, ಪುಲಿಕೇಶಿನಗರ ಮತ್ತು ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸಂಚಾರ ನಿರ್ಬಂಧ:

  • ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ವರೆಗೆ ಸಂಚಾರ ನಿಲ್ಲಿಸಲಾಗುವುದು.

  • ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆಗೆ ಹೋಗುವ ಮಾರ್ಗ ಮುಚ್ಚಲಾಗುವುದು.

  • ಎಂ.ಎಂ. ರಸ್ತೆಯಲ್ಲಿ ಮಾಸ್ಕ್ ಜಂಕ್ಷನ್‌ನಿಂದ ನೇತಾಜಿ ಜಂಕ್ಷನ್ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ಬರಲಿದೆ.

  • ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್‌ವರೆಗೆ ಹೇನ್ಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳು

  • ನಾಗವಾರ ಜಂಕ್ಷನ್‌ನಿಂದ ಶಿವಾಜಿನಗರಕ್ಕೆ: ಹೆಣ್ಣೂರು – ಕಾಚರಕನಹಳ್ಳಿ – ಲಿಂಗರಾಜಪುರಂ ಪ್ರೈಓವರ್ – ರಾಬರ್ಟ್‌ನ್ ರಸ್ತೆ – ಹೇನ್ಸ್ ರಸ್ತೆ ಮೂಲಕ.

  • ಶಿವಾಜಿನಗರದಿಂದ ನಾಗವಾರಕ್ಕೆ: ಸ್ಪೆನ್ಸರ್ ರಸ್ತೆ – ಕೋಲ್ಸ್ ರಸ್ತೆ – ವೀಲರ್ಸ್ ರಸ್ತೆ ಮುಖಾಂತರ.

  • ಆರ್.ಟಿ.ನಗರದಿಂದ ನಾಗವಾರಕ್ಕೆ: ಕಾವಲ್ ಬೈರಸಂದ್ರ – ಪುಷ್ಪಾಂಜಲಿ ಟಾಕೀಸ್ – ವೀರಣ್ಣ ಪಾಳ್ಯ ಮೂಲಕ.

  • ಟ್ಯಾನರಿ ರಸ್ತೆ ಬಳಿಯಿಂದ ನಾಗವಾರ ಕಡೆಗೆ: ನೇತಾಜಿ ಜಂಕ್ಷನ್ – ಮಾಸ್ಕ್ ಜಂಕ್ಷನ್ – ಕ್ಲಾರೆನ್ಸ್ ರೈಲ್ವೆ ಓವರ್‌ಬ್ರಿಜ್ – ಹೆಣ್ಣೂರು ರಸ್ತೆ – ಲಿಂಗರಾಜಪುರಂ ಪ್ರೈಓವರ್ ಮೂಲಕ.

  • ಮಾಸ್ಕ್ ಜಂಕ್ಷನ್‌ನಿಂದ ನೇತಾಜಿ ಜಂಕ್ಷನ್ ಕಡೆಗೆ: ಕೋಲ್ಸ್ ರಸ್ತೆ – ಸೌಂಡರ್ಸ್ ರಸ್ತೆ – ಸೆಂಟ್ ಜಾನ್ಸ್ ಚರ್ಚ್ ರಸ್ತೆ – ಕೋಲ್ಸ್ ಪಾರ್ಕ್ ಜಂಕ್ಷನ್ – ಹೇನ್ಸ್ ಜಂಕ್ಷನ್ ಮೂಲಕ.

  • ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್ ಕಡೆಗೆ: ಎಂ.ಎಂ ರಸ್ತೆ – ಮಾಸ್ಕ್ ರಸ್ತೆ – ಕೋಲ್ಸ್ ರಸ್ತೆ – ಸೌಂಡರ್ಸ್ ರಸ್ತೆ – ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ.

ಪಾರ್ಕಿಂಗ್ ನಿಷೇಧ

  • ಪಾಟರಿ ಸರ್ಕಲ್‌ನಿಂದ ನಾಗವಾರ ಸಿಗ್ನಲ್,

  • ಗೋವಿಂದಪುರ ಜಂಕ್ಷನ್‌ನಿಂದ ಗೋವಿಂದಪುರ ಕಾ&ಸು ಪೊಲೀಸ್ ಠಾಣೆವರೆಗೆ,

  • ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್‌ವರೆಗೆ,

  • ನೇತಾಜಿ ರಸ್ತೆ, ಹೇನ್ಸ್ ರಸ್ತೆ, ಎಂ.ಎಂ ರಸ್ತೆ, ಮಾಸ್ಕ್ ರಸ್ತೆ, ಕೋಲ್ಸ್ ರಸ್ತೆ, ಸೌಂಡರ್ಸ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮತ್ತು ಮಿಲ್ಲರ್ಸ್ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಪ್ರಪಂಚದಾದ್ಯಂತ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್-ಎ-ಮಿಲಾದ್ ಎಂದು ಆಚರಿಸುತ್ತಾರೆ. ಈ ದಿನವನ್ನು ನಬಿದ್, ಮೌಲಿದ್ ಅಥವಾ ಮೌಲಿದ್ ಆನ್-ನಬಿ ಎಂದೂ ಕರೆಯಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Russia-Ukraine War: ರಷ್ಯಾ ದಾಳಿಯಿಂದ ಶಿಶು ಸೇರಿದಂತೆ ನಾಲ್ವರು ಸಾವು,18 ಮಂದಿಗೆ ಗಾಯ, ಪ್ರತೀಕಾರವಾಗಿ ಉಕ್ರೇನ್ ಮಾಡಿದ್ದೇನು?

ಹೋಗಿ ಮೋದಿ, ಶಾ ಹತ್ತಿರ ಕೇಳು: ಕಷ್ಟ ಹೇಳಲು ಬಂದಿದ್ದ ಯುವ ರೈತನ ವಿರುದ್ಧ ಖರ್ಗೆ ಆಕ್ರೋಶ!

ಹೆಸರಘಟ್ಟದಲ್ಲಿ ಕ್ವಾಂಟಮ್-ಸಿಟಿ ನಿರ್ಮಾಣಕ್ಕೆ 6.17 ಎಕರೆ ಭೂಮಿ ಮಂಜೂರು: ಸಚಿವ ಎನ್ಎಸ್ ಬೋಸರಾಜು

ನಡು ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಹುಚ್ಚಾಟ: ಯುವಕನಿಗೆ ಸಿಕ್ತು 'Police Special Treatment' , Video

'ಮತಗಳ್ಳತನ' ವಿಷಯದಲ್ಲಿ ಚುನಾವಣಾ ಆಯೋಗ ನಿರ್ಣಾಯಕ ಮಾಹಿತಿಯನ್ನು ಮರೆಮಾಚಿದೆ: ಮಲ್ಲಿಕಾರ್ಜುನ ಖರ್ಗೆ

SCROLL FOR NEXT