ಬೆಂಗಳೂರು: ಲವರ್ ಜೊತೆ ಪರಾರಿಯಾದ ಮೂರು ಮಕ್ಕಳ ತಾಯಿ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದ್ದು, ಹಾಲಿ ಗಂಡ ಕೂಡ ಆಕೆಯ ಮೊದಲನೆ ಗಂಡ ಅಲ್ಲ ಎಂದು ಹೇಳಲಾಗಿದೆ.
ಹೌದು.. 11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನ ಬಿಟ್ಟು ಮೂರು ಮಕ್ಕಳ ತಾಯಿ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ (Bannerghatta) ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿತ್ತು.
11 ವರ್ಷಗಳ ಹಿಂದೆ ಪ್ರೀತಿಸಿ ಮಂಜುನಾಥ್ ಎನ್ನುವಾತನನ್ನು ಲೀಲಾವತಿ ಎನ್ನುವಾಕೆ ಮದುವೆಯಾಗಿದ್ದಳು. ಮೂರು ಮಕ್ಕಳು ಸಹ ಇದ್ದವು.
ಇತ್ತೀಚೆಗೆ ಮಹಿಳೆ ಲೀಲಾವತಿ ತನ್ನ ಮತ್ತೋರ್ವ ಲವರ್ ಸಂತೋಷ್ ಎಂಬಾತನ ಜೊತೆ ಓಡಿ ಹೋಗಿದ್ದಾಳೆ ಎಂದು ಪತಿ ಮಂಜುನಾಥ್ ಆರೋಪಿಸಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಇದೀಗ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರೆತಿದ್ದು ಹಾಲಿ ಪತಿ ಎಂದು ಹೇಳಲಾಗುತ್ತಿರುವ ಮಂಜುನಾಥ್ ಕೂಡ ಲೀಲಾವತಿಯ ಮೊದಲ ಗಂಡ ಅಲ್ಲವಂತೆ. ಆತ 2ನೇ ಪತಿಯಾಗಿದ್ದು 11 ವರ್ಷಗಳ ಹಿಂದೆ ಮಂಜುನಾಥ್ ಜೊತೆ ಓಡಿ ಬಂದು ಲೀಲಾವತಿ ವಿವಾಹವಾಗಿದ್ದರು ಎಂದು ಮಂಜುನಾಥ್ ಹೇಳಿಕೊಂಡಿದ್ದಾರೆ.
ಲೀಲಾವತಿಗೆ ಈಗ ಇರುವ ಗಂಡನಿಗಿಂತಲೂ ಮೊದಲೇ ಮತ್ತೊಬ್ಬನೊಂದಿಗೆ ಮದುವೆಯಾಗಿತ್ತು ಎಂದು ಗಂಡ ಆರೋಪಿಸಿದ್ದಾನೆ. ಈಗ ನನ್ನನ್ನು ಬಿಟ್ಟು ಮತ್ತೊಬ್ಬನ ಹಿಂದೆ ಹೋಗಿದ್ದಾಳೆ ಎಂದು ಮಂಜುನಾಥ್ ಗೋಳಾಡಿದ್ದಾನೆ.
11 ವರ್ಷದ ಪ್ರೀತಿ, ಮೂರು ಮಕ್ಕಳು!
ಬಸವನಪುರದಲ್ಲಿ ವಾಸವಿದ್ದ ಲೀಲಾವತಿ, ಮಂಜುನಾಥ್ ದಂಪತಿ 11 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದರು. ಮಂಜುನಾಥ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈ ದಂಪತಿಗೆ ಮೂರು ಮಕ್ಕಳು ಕೂಡ ಇದ್ದರು.
ಆದರೆ ಕಳೆದ 2 ವರ್ಷಗಳ ಹಿಂದೆ ಲೀಲಾವತಿಗೆ ಪ್ರಿಯಕರ ಸಂತೋಷ್‌ನ ಪರಿಚಯವಾಗಿತ್ತು. ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅಕ್ರಮ ಸಂಬಂಧ ಕೂಡ ಬೆಳೆದಿತ್ತು. ಸಾಕಷ್ಟು ಬಾರಿ ಮಂಜುನಾಥ್ ಇದನ್ನ ಪ್ರಶ್ನೆ ಮಾಡಿದ್ದ.
'ನನ್ನನ್ನು ಮದುವೆಯಾಗುವುದಕ್ಕೂ ಮೊದಲೇ ಮತ್ತೊಬ್ಬನನ್ನು ಮದುವೆಯಾಗಿದ್ದಳು ಎಂದು ಗಂಡ ಆರೋಪಿಸಿದ್ದಾನೆ. ಅಲ್ಲದೇ 2 ವರ್ಷಗಳಿಂದ ಸತೋಷ್ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದ ಆಂಟಿ ಲೀಲಾವತಿ ಇನ್ನೊಬ್ಬಾತನೊಂದಿಗೂ ಸಂಪರ್ಕದಲ್ಲಿದ್ದಳು ಎಂದು ಮಂಜುನಾಥ್ ಆರೋಪಿಸಿದ್ದರು.
ಸಾಕಷ್ಟು ಬಾರಿ ಬುದ್ದಿ ಹೇಳಿದರೂ ಬುದ್ಧಿ ಕಲಿಯದ ಲೀಲಾವತಿ ಭಾನುವಾರ ಮನೆಯಿಂದ ಪರಾರಿ ಆಗಿದ್ದಾಳೆ. ಈ ಕುರಿತು ಪತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಬಳಿಕ ಠಾಣೆಗೆ ಹಾಜರಾದ ಲೀಲಾವತಿ ತನಗೆ ಪ್ರಿಯಕರನೇ ಬೇಕೆಂದು ತಾಳಿ ಕಿತ್ತು ಗಂಡನ ಕೈಗೆ ಕೊಟ್ಟು ಹೋಗಿದ್ದಾಳೆ.