ಮನೆಗಳ ಮೇಲೆ ಬಿದ್ದ ಮರ  
ರಾಜ್ಯ

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮನೆಗಳ ಮೇಲೆ ಬಿದ್ದ ಮರ, ವಾಹನಗಳು ಜಖಂ, ಹಲವು ರಸ್ತೆಗಳು ಜಲಾವೃತ

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ರಾಜಾಜಿನಗರದ 4ನೇ ಬ್ಲಾಕ್​​ನಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದಿದೆ. ಚಂದ್ರಮ್ಮ, ಪೀಟರ್​ ಎಂಬುವರ ಮನೆಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಪ್ರಾಣಹಾನಿ ಉಂಟಾಗಿಲ್ಲ.

ತೀವ್ರ ಮಳೆ ಗಾಳಿಗೆ ಮರ ಬಿದ್ದು 5 ಕಾರು, ಟಾಟಾ ಏಸ್​ ವಾಹನ, 3-4 ಬೈಕ್​ಗಳು ಜಖಂಗೊಂಡಿವೆ. ಮನೆಗಳ ಮೇಲೆ ಮರ ಬಿದ್ದ ಪರಿಣಾಮ 2 ಕುಟುಂಬಗಳ ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಉಂಟಾಗಿದೆ.

ರಾತ್ರಿ ಸುಮಾರು 2 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದೆ. ಕೆಲವೆಡೆ ಬೃಹತ್​ ಮರಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಅಲ್ಲಲ್ಲಿ ನಿಧಾನಗತಿಯ ಸಂಚಾರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ABVP ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು? Video

2ನೇ ಸ್ಥಾನಕ್ಕೆ ಕುಸಿದ ಕೆಲ ಗಂಟೆಗಳಲ್ಲೇ Larry ellison ಹಿಂದಿಕ್ಕಿ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ಪಟ್ಟಕೇರಿದ Elon Musk!

ನೇಪಾಳ: 'ರಕ್ತಪಾತ'ಕ್ಕೆ ವಯಸ್ಸಾದ ನಾಯಕರೇ ಕಾರಣ! Gen-Z ನಾಯಕರು ಯಾಕಿಷ್ಟು ಆಕ್ರೋಶ..?

ಹಿರಿಯ ನಾಗರಿಕರ ಕಾಯ್ದೆಯಡಿ 10,000 ರೂ. ಮಿತಿ ಪರಿಷ್ಕರಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಶಿಫಾರಸು

ನೇಪಾಳ ಜೈಲುಗಳಿಂದ ತಪ್ಪಿಸಿಕೊಂಡು ಬಂದ 35 ಕೈದಿಗಳನ್ನು ಬಂಧಿಸಿದ ಭಾರತ

SCROLL FOR NEXT