ಡಿ.ಕೆ. ಶಿವಕುಮಾರ್  
ರಾಜ್ಯ

ಬೆಂಗಳೂರು: ಡಿ.ಕೆ ಶಿವಕುಮಾರ್ ನಿವಾಸದ ಬಳಿ ನಿಲ್ಲಿಸಿದ್ದ ನಿಗೂಢ ಕಾರಿನ ಮೂಲ ಪತ್ತೆ!

ಶಿವಕುಮಾರ್ ಅವರ ನಿವಾಸದ ಸಮೀಪದ 18ನೇ ಕ್ರಾಸ್‌ನಲ್ಲಿ ಸೆ.7ರಂದು ಕೆಎ-51 ಎಂಡಬ್ಲ್ಯು 6814 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಂತಿತ್ತು. ಅದರ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸದ ಬಳಿ ನಕಲಿ ನಂಬರ್‌ಪ್ಲೇಟ್ ಅಳವಡಿಸಿದ್ದ ಫಾರ್ಚೂನರ್ ಕಾರಿನ ಪ್ರಕರಣ ತನಿಖೆ ಚುರುಕುಗೊಂಡಿದೆ.

ಅಚ್ಚರಿಯೆಂದರೆ ಫಾರ್ಚೂನರ್‌ ಕಾರು ಜಪ್ತಿ ಮಾಡಿ ಐದು ದಿನ ಕಳೆದರೂ ಯಾರೊಬ್ಬರೂ ಕಾರು ತಮ್ಮದು ಎಂದು ಪೊಲೀಸರ ಮುಂದೆ ಬಂದಿಲ್ಲ. ಕಾರು ಪುನಃ ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿಲ್ಲ. ಈ ನಿಟ್ಟಿನಲ್ಲಿ ಕಾರಿನ ಅಸಲಿ ಮಾಲೀಕರು ಯಾರು? ನಕಲಿ ನಂಬರ್‌ಪ್ಲೇಟ್‌ ಅಳವಡಿಸಿ ಬಳಕೆ ಮಾಡುತ್ತಿದ್ದದ್ದು ಏಕೆ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರು, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರಿನಲ್ಲಿ ಇರುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ಆ ಕಾರನ್ನು ಕಾಂಗ್ರೆಸ್ ಕಾರ್ಯಕರ್ತ ಕೃಷ್ಣಮೂರ್ತಿ ಅವರು ಬಳಸುತ್ತಿರುವುದೂ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಶಿವಕುಮಾರ್ ಅವರ ನಿವಾಸದ ಸಮೀಪದ 18ನೇ ಕ್ರಾಸ್‌ನಲ್ಲಿ ಸೆ.7ರಂದು ಕೆಎ-51 ಎಂಡಬ್ಲ್ಯು 6814 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಫಾರ್ಚೂನರ್ ಕಾರು ನಿಂತಿತ್ತು. ಅದರ ಮೂಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಅರ್ಧ ದಿನ ಕಳೆದರೂ ಕಾರು ಸ್ಥಳದಲ್ಲೇ ನಿಂತಿದ್ದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅಡಚಣೆ ಆಗಬಹುದು ಎಂದು ಸಂಚಾರ ಪೊಲೀಸರು ಅದನ್ನು ತೆರವುಗೊಳಿಸಲು ಮುಂದಾಗಿದ್ದರು.

ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಿದಾಗ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನೆಲಸಿರುವ ದೀಪಕ್ ಅವರ ಕಾರು ಎಂದು ಕಂಡುಬಂದಿತ್ತು. ಅವರಿಗೆ ಕರೆ ಮಾಡಿ, ಕಾರು ತೆರವುಗೊಳಿಸುವಂತೆ ಪೊಲೀಸರು ತಿಳಿಸಿದ್ದರು. ಆದರೆ, ದೀಪಕ್ ಅವರು ಕಾರು ತಮ್ಮ ಮನೆ ಮುಂದೆಯೇ ನಿಲ್ಲಿಸಲಾಗಿದೆ ಎಂದಿದ್ದರು.

ಅಚ್ಚರಿಗೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಈ ನಂಬರ್ ಪ್ಲೇಟ್ ಹಿಂದೆ ಮತ್ತೊಂದು ನಂಬರ್ ಪ್ಲೇಟ್ ಇರುವುದು ಪತ್ತೆಯಾಗಿತ್ತು. ಕೆಎ–42 ಪಿ 6606 ಸಂಖ್ಯೆಯ ನಂಬರ್ ಪ್ಲೇಟ್ ಪತ್ತೆಯಾಗಿತ್ತು.

ನಂತರ, ಕಾರನ್ನು ಠಾಣೆಗೆ ತೆಗೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಮಾಗಡಿಯ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರಿನಲ್ಲಿ ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಆಗಿರುವುದು ಕಂಡುಬಂದಿತ್ತು. ಆ ಬಳಿಕ ಮಂಜುನಾಥ್ ಅವರಿಗೆ ನೋಟಿಸ್ ಕೊಟ್ಟು ಮಾಹಿತಿ ಕೇಳಲಾಗಿತ್ತು.

ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೃಷ್ಣಮೂರ್ತಿ ಎಂಬ ಕಾರ್ಯಕರ್ತನಿಗೆ ಈ ಕಾರನ್ನು ಕೊಡಲಾಗಿತ್ತು. ಈಗಲೂ ಅವರೇ ಕಾರು ಬಳಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ 'ಮಹಾಘಟಬಂಧನ್' ಗೆ ತಿಲಾಂಜಲಿ; ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್ 'ಮಹಾ' ನಿರ್ಧಾರ!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

SCROLL FOR NEXT