ಸಂಗ್ರಹ ಚಿತ್ರ 
ರಾಜ್ಯ

ಬಳ್ಳಾರಿ: 1.5 ಲಕ್ಷ ರೂ ಗೆ ನವಜಾತ ಶಿಶು ಮಾರಾಟ; ನಾಲ್ವರ ಬಂಧನ

ಮಗು ಅಪಹರಣ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಎಸ್‌ಪಿ ಶೋಭಾ ರಾಣಿ ವಿಜೆ ಅವರು ಪ್ರಕರಣವನ್ನು ಬೇಧಿಸಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಆಸ್ಪತ್ರೆಯಿಂದ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಒಂದು ವಾರದೊಳಗೆ ಬಳ್ಳಾರಿಯಲ್ಲಿ ದಾಖಲಾಗಿರುವ 2ನೇ ಪ್ರಕರಣ ಇದಾಗಿದೆ. ನವಜಾತ ಶಿಶು ಅಪಹರಣ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಗೊಳಗಾಗಿದ್ದ 65 ವರ್ಷದ ವ್ಯಕ್ತಿ ಮತ್ತು ಇತರ ಮೂವರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಶಮಿನ್ ಇಸ್ಮಾಯಿಲ್ (25), ಇಸ್ಮಾಯಿಲ್ ಯಾಕೋಬ್ ಸಬ್ (65), ಬಾಷಾ ಸಾಬ್ (55) ಮತ್ತು ಬಸವರಾಜ ಸಜ್ಜನ್ (43) ಎಂದು ಗುರ್ತಿಸಲಾಗಿದೆ.

ಆರೋಪಿಗಳಲ್ಲಿ ಒಬ್ಬರಾದ ಸಜ್ಜನ್ ದತ್ತು ಪಡೆಯಲು ಬಿಐಎಂಎಸ್ ಆಸ್ಪತ್ರೆಯ ಬಳಿ ವಾಸವಿದ್ದ ಇಸ್ಮಾಯಿಲ್ ಅವರನ್ನು ಸಂಪರ್ಕಿಸಿದ್ದು, ಆರೋಪಿಗಳು ದತ್ತು ಬದಲು ಮಗುವನ್ನು ಅಪಹರಣ ಮಾಡುವ ಸಲಹೆ ನೀಡಿದ್ದಾರೆ.

ಇದರಂತೆ ಇಸ್ಮಾಯಿಲ್ ಮಗುವನ್ನು ಅಪಹರಿಸಿ ಸೆಪ್ಟೆಂಬರ್ 12 ರಂದು ಆರೋಗ್ಯ ತಪಾಸಣೆಗಾಗಿ ಬಿಐಎಂಎಸ್‌ಗೆ ಬಂದಿದ್ದ ಸಜ್ಜನ್‌ಗೆ ರೂ.1.5 ಲಕ್ಷಕ್ಕೆ ಮಾರಾಟ ಮಾಡಿದ್ದ.

ಈ ನಡುವೆ ಮಗು ಅಪಹರಣ ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಎಸ್‌ಪಿ ಶೋಭಾ ರಾಣಿ ವಿಜೆ ಅವರು ಪ್ರಕರಣವನ್ನು ಬೇಧಿಸಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಆಸ್ಪತ್ರೆಯ ಸಿಸಿಟಿವಿ ದಾಖಲೆಗಳು ಮತ್ತು ಇತರ ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ಪ್ರಕರಣ ಬೇಧಿಸಲಾಯಿತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 137(2), 143(4), 3(5) ಮತ್ತು ಬಿಎನ್‌ಎಸ್-2003 ಅಡಿಯಲ್ಲಿ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ, ವಿಜಯನಗರದಲ್ಲಿ ನವಜಾತ ಶಿಶು ಅಪಹರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆಶಾ ಕಾರ್ಯಕರ್ತೆಯರು ಸೇರಿದಂತೆ ನಾಲ್ವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಆರೋಪಿಗಳು ಹೆಣ್ಣು ಮಗುವನ್ನು ರೂ.10,000ಗೆ ಮಾರಾಟ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಬಂಧಿತ ವೈದ್ಯೆಗೆ 'ಜೈಶ್ ಇ ಮಹಮದ್' ಉಗ್ರ ಸಂಘಟನೆಯ ಮಹಿಳಾ ಘಟಕ ಸ್ಥಾಪನೆ 'ಟಾಸ್ಕ್': ವರದಿ

ದೆಹಲಿ ಸ್ಫೋಟದ ಲಿಂಕ್: ಫರಿದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರ ಬಂಧನ; NIA ತನಿಖೆ

ಮತಾಂಧತೆಯ ಸ್ಫೋಟ: ಕುಟುಂಬದ ಏಕೈಕ ಆಧಾರಗಳು ಬಲಿ; ಕಣ್ಣೀರ ಕಡಲಲ್ಲಿ ದಿಕ್ಕು ಕಾಣದಂತಾದ ಪೋಷಕರು, ಪತ್ನಿ, ಮಕ್ಕಳು!

ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಭೀಕರ ಸ್ಫೋಟ: ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ ಬಾಂಬ್ ಸ್ಫೋಟ, ಕನಿಷ್ಠ 12 ಮಂದಿ ಸಾವು

Delhi blast: 'ಅತ್ಯಂತ ಅಸಮರ್ಥ ಗೃಹ ಸಚಿವ' ಯಾರಾದರೂ ಇದ್ದರೆ ಅದು ಅಮಿತ್ ಶಾ; ಪ್ರಿಯಾಂಕಾ ಖರ್ಗೆ ಕಿಡಿ- Video

SCROLL FOR NEXT