ದರ್ಶನ್  
ರಾಜ್ಯ

ಜೈಲಿನಲ್ಲಿ ಕನಿಷ್ಠ ಸೌಲಭ್ಯ ನಿರಾಕರಣೆ: ಮತ್ತೆ ನ್ಯಾಯಾಲಯ ಮೆಟ್ಟಿಲೇರಿದ ನಟ ದರ್ಶನ್, ಇಂದು ಅರ್ಜಿ ವಿಚಾರಣೆ

ಇಷ್ಟಕ್ಕೆ ತೃಪ್ತರಾಗದ ದರ್ಶನ್ ಮತ್ತೆ ಕೋರ್ಟ್‌ಗೆ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು: ನ್ಯಾಯಾಲಯದ ನಿರ್ದೇಶನ ಹೊರತಾಗಿಯೂ ಜೈಲಿನಲ್ಲಿ ಹಾಸಿಗೆ, ದಿಂಬಿನಂತಹ ಕನಿಷ್ಠ ಸೌಲಭ್ಯವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದ ನಟ ದರ್ಶನ್ (Darshan) ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ದರ್ಶನ್ ಕೆಲ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಳೆದ ವಾರ ಮೂಲ ಸೌಕರ್ಯ ನೀಡಿ, ಜೈಲಿನ ಮ್ಯಾನ್ಯುಯಲ್ ಪ್ರಕಾರ ಅಂತ ಕೋರ್ಟ್ ಆದೇಶ ಮಾಡಿತ್ತು. ಅದೇ ರೀತಿ ಜೈಲಿನ ಅಧಿಕಾರಿಗಳು ಜಮ್ಖಾನ, ದಿಂಬು ನೀಡಿದ್ದರು. ಜೊತೆಗೆ ವಾಕಿಂಗ್‌ಗೆ ಅವಕಾಶ ನೀಡಲಾಗಿತ್ತು.

ಇಷ್ಟಕ್ಕೆ ತೃಪ್ತರಾಗದ ದರ್ಶನ್ ಮತ್ತೆ ಕೋರ್ಟ್‌ಗೆ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಹೇಳಿದ್ರೂ ಹಾಸಿಗೆ ಕೊಟ್ಟಿಲ್ಲ ಅಂತ ಮತ್ತೆ ಕೋರ್ಟ್‌ಗೆ ಹೋಗಿದ್ದಾರೆ. ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಜೈಲು ಸೇರಿ ತಿಂಗಳಾದ್ರೂ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆಂದು ದೂರಿದ್ದಾರೆ.

ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡಿಸಿ, ದರ್ಶನ್ ಜೈಲು ಸೇರಿ ಒಂದು ತಿಂಗಳು ಕಳೆದು ಹೋಗಿದೆ. ಇನ್ನೂ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಿದ್ದಾರೆ. 14 ದಿನಗಳ ಕಾಲ ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಬೇಕು. ಇನ್ನು ಬಿಸಿಲಿನ ವಿಚಾರಕ್ಕೆ ಸೂರ್ಯನನ್ನು ತರೋದಕ್ಕೆ ಆಗುತ್ತಾ ಅಂತ ಹಾರಿಕೆ ಉತ್ತರ ಕೊಡ್ತಾರೆ. ಹಾಸಿಗೆ, ದಿಂಬು ಏನನ್ನೂ ಕೊಡುತ್ತಿಲ್ಲ. ತುಂಬಾ ಕನಿಷ್ಠವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ,

ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.ಜೈಲಿನಲ್ಲಿ ಸರಿಯಾದ ಸೌಲಭ್ಯ ನೀಡುತ್ತಿಲ್ಲ. ಬೆಳಕು ಕಾಣದೆ ತಿಂಗಳಾಗಿದೆ, ಕೈಯಲ್ಲಿ ಫಂಗಸ್ ಬಂದಿದೆ, ನನಗೆ ವಿಷ ಕೊಟ್ಟುಬಿಡಿ, ಕುಡಿದು ಸಾಯುತ್ತೇನೆ ಎಂದು ವಿಡಿಯೊ ಕಾನ್ಫರೆನ್ಸ್ ವಿಚಾರಣೆ ವೇಳೆ ನಟ ದರ್ಶನ್ ಹೇಳಿದ್ದು ಭಾರೀ ಸುದ್ದಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಳೆಯಿಂದ ಬೆಳೆ ಹಾನಿ; ಜಂಟಿ ಸಮೀಕ್ಷೆ ನಂತರ ರೈತರಿಗೆ ಪರಿಹಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರಿನಿಂದ ಹೊರಹೋಗಲು BlackBuck ನಿರ್ಧಾರ: ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಪೈ, ಶಾ ಆಗ್ರಹ

'ಬಾಲಾಕೋಟ್ ನಲ್ಲೇ Masood Azhar ಉಗ್ರ ಕ್ಯಾಂಪ್, Ops Sindoor ವೇಳೆ ಕುಟುಂಬ ನಾಶ': ಕೊನೆಗೂ ಸತ್ಯ ಒಪ್ಪಿಕೊಂಡ ಜೈಷ್ ಉಗ್ರ ಕಮಾಂಡರ್!

ಕಲ್ಯಾಣ ಕರ್ನಾಟಕ ಉತ್ಸವ: ರಜಾಕಾರರ ದೌರ್ಜನ್ಯ ನೆನಪಿಸಿಕೊಂಡ ಸಿಎಂ ಸಿದ್ದರಾಮಯ್ಯ, ರಾಯಚೂರಿನಲ್ಲಿ ಏಮ್ಸ್‌ಗೆ ಮತ್ತೆ ಬೇಡಿಕೆ

ಮೋದಿ ಜನ್ಮದಿನಕ್ಕೆ ಶುಭಕೋರಿದ Italy ಪ್ರಧಾನಿ ಜಾರ್ಜಿಯಾ ಮೆಲೋನಿ! ಹೇಳಿದ್ದೇನು...?

SCROLL FOR NEXT